ಬದಲಾಯ್ತೇ ಬೆದರುಬೊಂಬೆ 'ಭಾಗ್ಯಲಕ್ಷ್ಮೀ' ವರಸೆ; ಮುಂದೇನು ತಾಂಡವ್ ಗತಿ..?
ಬಿಡುಗಡೆಯಾಗಿರುವ 'ಭಾಗ್ಯಲಕ್ಷ್ಮೀ ಪ್ರೊಮೋದಲ್ಲಿ ಬೇರೆಯದೇ ಆದ 'ರೆಬೆಲ್' ಭಾಗ್ಯಲಕ್ಷ್ಮೀ'ಯನ್ನು ನೀವು ನೋಡಬಹುದು. ಜತೆಗೆ, ಇಷ್ಟೂ ದಿನ ಹೆದರಿಸುತ್ತಿದ್ದ ತಾಂಡವ್ ಬದಲು ಹೆದರಿಕೊಳ್ಳುತ್ತಿರುವ ತಾಂಡವ್ ನೋಡಿ ನೀವು ನಗಬಹುದು.
ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಏನಾಗುತ್ತಿದೆ? ಈ ಬಗ್ಗೆ ನೀವು ಯೋಚಿಸುತ್ತಿದ್ದರೆ, ನಿಮಗಾಗಿಯೇ ಈ ಸುದ್ದಿ. ಭಾಗ್ಯಲಕ್ಷ್ಮೀ ಸೀರಿಯಲ್ ಇತ್ತೀಚೆಗೆ ಒಳ್ಳೆಯ ಟಿಆರ್‌ಪಿ ಪಡೆದುಕೊಳ್ಳುತ್ತಿದೆ. ಗ್ರಾಮೀಣ ಭಾಗದಲ್ಲಿ ಸಹ ಈ ಧಾರಾವಾಹಿ ಒಳ್ಳೆಯ ಟಿಆರ್‌ಪಿ ಪಡೆಯುತ್ತಿದ್ದು, ನಗರ ಭಾಗದಲ್ಲಿಯೂ 'ಭಾಗ್ಯಲಕ್ಷ್ಮೀ'ಯ ಕಮಾಲ್ ಜೋರಾಗಿಯೇ ಇದೆ. ಕೆಲವೊಮ್ಮೆ ಈ ಧಾರಾವಾಹಿ ಟಾಪ್ 5 ಸ್ಥಾನದಲ್ಲಿ ಕಾಣಿಸಿಕೊಂಡರೂ, ಹೆಚ್ಚಾಗಿ ಇದು ಟಾಪ್ 10ರಲ್ಲಿ ಕಾಣಿಸಿಕೊಳ್ಳುತ್ತಿರುವ ಸೀರಿಯಲ್ ಎನ್ನಬಹುದು. ಒಟ್ಟಿನಲ್ಲಿ ಟಿಆರ್‌ಪಿ ರೇಸ್‌ನಲ್ಲಿ ಈ ಸೀರಿಯಲ್ ಸಹ ಇರುತ್ತದೆ.
ಸೋಮವಾರದಿಂದ ಶನಿವಾರ ರಾತ್ರಿ 7ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮೀ' ಸೀರಿಯಲ್ ತನ್ನದೇ ಆದ ಅಭಿಮಾನ ಬಳಗ ಸೃಷ್ಟಿಸಿಕೊಂಡಿದೆ. ತಾಂಡವ್ ಮತ್ತು ಭಾಗ್ಯರ ಮಾತುಕತೆ, ಗೋಳಾಟ ವೀಕ್ಷಕರಿಗೆ ಬಹು ಇಷ್ಟವಾಗಿದೆ ಎನ್ನಬಹುದು. ಮೊದಲೆಲ್ಲ ಬೆದರುಬೊಂಬೆಯಂತಿದ್ದ ಭಾಗ್ಯಾ ಇನ್ನೇನು ರೆಬಲ್ ಆಗತೊಡಗಿದ್ದಾಳೆ. ಗಂಡನ ಜತೆ ಮಾರುದೂರವೇ ನಿಂತು ಮಾತನಾಡುತ್ತಿದ್ದ ಭಾಗ್ಯ, ಇದೀಗ ಗಂಡನ ಎದುರು ನಿಂತು ಪ್ರಶ್ನೆ ಕೇಳತೊಗಿದ್ದಾಳೆ. ತಾಂಡವ್ ತಾಯಿ, ಭಾಗ್ಯಲಕ್ಷ್ಮಿ ಅತ್ತೆಯ ಪಾತ್ರ ಕೂಡ ವೀಕ್ಷಕರನ್ನು ಸೆಳೆಯುತ್ತಿದೆ.
ಕ್ರಿಕೆಟರ್ 'ದಾವಣೆಗೆರೆ ಎಕ್ಸ್‌ಪ್ರೆಸ್' ವಿನಯ್ ಕುಮಾರ್ ಬಿಗ್ ಬಾಸ್-10'ಗೆ ಸ್ಪರ್ಧಿ?
ಇದೀಗ ಬಿಡುಗಡೆಯಾಗಿರುವ 'ಭಾಗ್ಯಲಕ್ಷ್ಮೀ ಪ್ರೊಮೋದಲ್ಲಿ ಬೇರೆಯದೇ ಆದ 'ರೆಬೆಲ್' ಭಾಗ್ಯಲಕ್ಷ್ಮೀ'ಯನ್ನು ನೀವು ನೋಡಬಹುದು. ಜತೆಗೆ, ಇಷ್ಟೂ ದಿನ ಹೆದರಿಸುತ್ತಿದ್ದ ತಾಂಡವ್ ಬದಲು ಹೆದರಿಕೊಳ್ಳುತ್ತಿರುವ ತಾಂಡವ್ ನೋಡಿ ನೀವು ನಗಬಹುದು. ಒಟ್ಟಿನಲ್ಲಿ, ಭಾಗ್ಯಲಕ್ಚ್ಮೀ ಧಾರಾವಾಹಿ ವೀಕ್ಷಕರನ್ನು ತನ್ನೆಡೆಗೆ ಸೆಳೆಯುವಲ್ಲಿ ಯಶಸ್ವಿಆಗುವುದರ ಜೆತೆಗೆ ಟಿಆರ್‌ಪಿ ರೇಸ್‌ನಲ್ಲಿ ಸಹ ತನಗೊಂದು ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ.
ರಾಜ್‌ಕುಮಾರ್ ಮಗಳು ವಾಸ್ತವಿಕ್ತಾ ವಿರುದ್ಧ FIR ದಾಖಲಿಸಿದ್ದ ನಟ ಶಾಹಿದ್ ಕಪೂರ್!
ಪ್ರೊಮೋ ನೋಡಿ ಸಂಪೂರ್ಣ ಕಥೆಯನ್ನು ಊಹಿಸಲು ಅಸಾಧ್ಯ. ಆದರೆ, ಪಾತ್ರಗಳ ಭಾವನೆಗಳು ಬದಲಾಗಿರುವುದು ಪ್ರಸಾರ ಕಾಣುತ್ತಿರುವ ಪ್ರೊಮೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಆದರೆ, ಸಂಚಿಕೆ ಅಂತ್ಯದಲ್ಲಿ ಏನಾಗಬಹುದು ಎಂಬುದನ್ನು ಪ್ರಸಾರಕ್ಕಿಂತ ಮೊದಲು ಹೇಳುವುದು ಹೇಗೆ? ಹಾಗಿದ್ದರೆ, ನೀವು ಸೀರಿಯಲ್ ನೋಡಲೇಬೇಕು, ಭಾಗ್ಯಲಕ್ಷ್ಮೀ ಕಥೆಯ ಮುಂದಿನ ಭಾಗ ತಿಳಿದುಕೊಳ್ಳಲು...