Asianet Suvarna News

ಚಕ್ರವರ್ತಿ ಚಂದ್ರಚೂಡ್‌ರನ್ನು ತರಾಟೆಗೆ ತೆಗೆದುಕೊಂಡ ವೈಷ್ಣವಿ ಗೌಡ!

ಹೊರಗಡೆ ನೀಡಿದ ಸಂದರ್ಶನಕ್ಕೆ ಮನೆಯೊಳಗೆ ಮತ್ತೆ ಎಂಟ್ರಿ ಕೊಟ್ಟ ಬಳಿಕ ತರಾಟೆಗೆ ತೆಗೆದುಕೊಂಡ ವೈಷ್ಣವಿ. 
 

Colors Kannada BBK8 Vaishnavi disappointed with Chakravarthy Chandrachud vcs
Author
Bangalore, First Published Jun 25, 2021, 12:08 PM IST
  • Facebook
  • Twitter
  • Whatsapp

ಕೊರೋನಾ ಕಾಟದಿಂದ ಬಿಗ್ ಬಾಸ್ ಸೀಸನ್ 8ನ್ನು ಅರ್ಧಕ್ಕೇ ನಿಲ್ಲಿಸುವ ಪರಿಸ್ಥಿತಿ ಎದುರಾಗಿತ್ತು. ಮನೆಯಿಂದ ಹೊರ ಬಂದ ಸ್ಪರ್ಧಿಗಳು ಖಾಸಗಿ ಸಂದರ್ಶನಗಳಲ್ಲಿ ಭಾಗಿಯಾಗಿ ಮನಬಿಚ್ಚಿ ಮಾತನಾಡಿದ್ದರು. ಚಕ್ರವರ್ತಿ ಚಂದ್ರಚೂಡ್‌ ನೀಡಿದ ಹೇಳಿಕೆ ಬಗ್ಗೆ ವೈಷ್ಣವಿ ಸ್ಪಷ್ಟನೆ ಪಡೆಯುತ್ತಿದ್ದಾರೆ ಹಾಗೂ ಮೊದಲ ಬಾರಿ ಸಿಟ್ಟಿನಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. 

'ಒಂದು ವಿಡಿಯೋ ನೋಡಿದೆ ಮೂರು ಜೋಡಿಗಳಿದ್ದಾರೆ, ನಾನೇ ಅವರಿಗೆ ತಾಳಿ ತಂದು ಕೊಡುತ್ತೀನಿ ಅಂತ ನೀವು ಹೇಳಿದ್ದೀರಾ. ಏನು ಬೇಕಾದರೂ ಮಾತನಾಡುವ ಮೊದಲು ಅವರಿಗೂ ಕುಟುಂಬ ಇದೆ ಎಂದು ಮರೆಯಬೇಡಿ. ನಾನು ದಿವ್ಯಾ ಮಾತನಾಡುತ್ತಿದ್ದೇವೆ ಅಂತ ಸಂಬಂಧ ಇದೆ ಎಂದು ಅರ್ಥ ಅಲ್ಲ. ನೀವು ಕೂಡ ಇಬ್ಬರಿಗೆ ಕ್ಲೋಸ್ ಆಗಿದ್ದೀರಾ ಹೀಗಂತ ನಾನು ನಿಮನ್ನ ಜೋಡಿ ಅಂತ ಕರೆಯಬಹುದಾ?' ಎಂದು ವೈಷ್ಣವಿ  ಪ್ರಶ್ನೆ ಮಾಡಿದ್ದಾರೆ. 

'ನಾನು ಜೋಡಿಯಾಗಿ ಅಂತ ಬಳಸಿಲ್ಲ, ಒಬ್ಬರಿಗೊಬ್ಬರು ನೆರಳಾಗಿದ್ದರು ಅಂತ ಹೇಳಿದ್ದೇನೆ. ನೀನು ಮಾಡುವ ಯೋಚನೆಗಿಂತ ಅದಕ್ಕೂ ಮೇಲೆ ಯೋಚನೆ ನಾನು ಮಾಡುತ್ತೇನೆ. ಸ್ವಲ್ಪವೂ ಜ್ಞಾನ ಇಲ್ಲದ ಮನುಷ್ಯ ನಾನಲ್ಲ. ನಾನು ಹೇಳಿದ್ದರೂ ನೀವು ಆ ರೀತಿ ವರ್ತಿಸಿರುತ್ತೀರಾ ಹಾಗಾಗಿ. ನಾನು ಯಾವ ರೀತಿಯಲ್ಲೂ ವರ್ತಿಸುವುದಿಲ್ಲ' ಎಂದು ಚಕ್ರವರ್ತಿ ಉತ್ತರ ನೀಡಿದ್ದಾರೆ.

ಇನ್‌ಸ್ಟಾಗ್ರಾಂ ಮತ್ತು ಮೇಲ್‌ನಲ್ಲಿ ವೈಷ್ಣವಿಗೆ ಬಂದಿದೆ ಸಾವಿರಾರು ಮದುವೆ ಪ್ರಪೋಸಲ್‌ಗಳು! 

ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ಅನೇಕ ಸಂದರ್ಶನದಲ್ಲಿ ನೇರವಾಗಿ ಮಾತನಾಡಿದ್ದಾರೆ. ಅವರ ಹೇಳಿಕೆಗಳು ಟ್ರೋಲ್‌ ಪೇಜ್‌ಗಳಲ್ಲಿ ವೈರಲ್ ಆಗಿದೆ ಆದರೆ ಬಿಗ್ ಬಾಸ್‌ ಮನೆ ಸದಸ್ಯರ ಮನಸ್ಸಿಗೆ ನೋವು ಮಾಡಿದೆ.

Follow Us:
Download App:
  • android
  • ios