ಅನಾರೋಗ್ಯದ ಕಾರಣ ಸುದೀಪ್ ಈ ವಾರವೂ ಬಿಗ್ ಬಾಸ್‌ ವೀಕೆಂಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಟ್ಟೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.  

ಕನ್ನಡ ಬಿಗ್ ಬಾಸ್‌ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಿರೂಪಕ ಸುದೀಪ್ ಇಲ್ಲದೇ ಕಾರ್ಯಕ್ರಮ ನಡೆಯುತ್ತಿರುವುದು. ಕಳೆದ ವಾರ ಅನಾರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡ ಸುದೀಪ್ ಈ ವಾರವೂ ರೆಸ್ಟ್‌ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಹಾಗಿದ್ದರೆ ಕ್ರಿಯೇಟಿವ್‌ ಟೀಂ ಕಳೆದ ಬಾರಿ ನಾಮಿನೇಟ್ ಮಾಡಿದ ರೀತಿಯೇ ಈ ಸಲವೂ ಬಿಗ್ ಬಾಸ್ ವೀಕೆಂಡ್ ನಡೆಸಿಕೊಡುವುದು ಗ್ಯಾರಂಟಿ.

ಬಿಗ್ ಬಾಸ್‌ಗೆ ಕಿಚ್ಚ ಸುದೀಪ್ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? 

'ಈ ವಾರದ ಬಿಗ್ ಬಾಸ್‌ ವೀಕೆಂಡ್ ಎಪಿಸೋಡ್ ಮಿಸ್ ಮಾಡಿಕೊಳ್ಳುವೆ. ವೇದಿಕೆಯ ಮೇಲೆ ಗಂಟೆಗಟ್ಟಲೆ ನಿಂತು ಸ್ಪರ್ಧಿಗಳ ಜೊತೆ ಮಾತನಾಡುವಷ್ಟು ಶಕ್ತಿ ಪಡೆಯಲು ಇನ್ನೂ ಸ್ವಲ್ಪ ವಿಶ್ರಾಂತಿ ಬೇಕಿದೆ. ಈ ನಿರ್ಧಾರ ಕೈಗೊಳ್ಳುವುದು ತುಂಬಾನೇ ಕಷ್ಟ. ಕಲರ್ಸ್‌ ಕನ್ನಡಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ನನ್ನ ಶೂಟ್ ರದ್ದುಗೊಳ್ಳಿಸಿ ನಾನು ಚೇತರಿಸಿಕೊಳ್ಳಲು ಸುಲಭ ಮಾಡಿದ್ದಕ್ಕೆ. ನನ್ನ ಆರೋಗ್ಯದ ಬಗ್ಗೆ ಪ್ರಾರ್ಥನೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು,' ಎಂದು ಸುದೀಪ್ ಬರೆದುಕೊಂಡಿದ್ದಾರೆ. 

ಕಳೆದ ವಾರ ಪಂಚಾಯಿತಿ ಇಲ್ಲದ ಕಾರಣ ಗೋಲ್ಡನ್ ಪಾಸ್ ಟಾಸ್ಕ್ ನಡೆಸಲಾಗಿತ್ತು. ವಿಶೇಷ ಚಟುವಟಿಕೆಯನ್ನು ಸ್ಪರ್ಧಿಗಳಿಗೆ ನೀಡಿ ಎಲಿಮಿನೇಷನ್ ರೌಂಡ್ ಮಾಡಲಾಗಿತ್ತು. ಗಾಯಕ ವಿಶ್ವನಾಥ್‌ 7 ವಾರಗಳನ್ನು ಪೂರೈಸಿ ಹೊರ ಬಂದರು. ಈ ವಾರ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿರುವುದು ರಾಜೀವ್, ರಘು ಗೌಡ, ದಿವ್ಯಾ ಸುರೇಶ್, ಪ್ರಶಾಂತ ಸಂಬರಗಿ, ಮಂಜು ಪವಗಡ ಹಾಗೂ ಚಕ್ರವರ್ತಿ. ಕಳೆದ ವಾರ ಮನೆಯಿಂದ ಹೊರ ಬಂದ ವಿಶ್ವನಾಥ್ ನಿಧಿ ಸುಬ್ಬಯ್ಯ ಅವರನ್ನು ಸೇಫ್‌ ಮಾಡಿದ್ದರು. ಯಾವ ವೋಟ್‌ ಇಲ್ಲದೇ ಶಮಂತ್‌ ಕೂಡ ಸೇಫ್ ಆಗಿದ್ದಾರೆ. ಬಿಬಿ ಕ್ರಿಯೇಟಿವ್ ಟೀಂ ಯಾವ ರೀತಿ ಟಾಸ್ಕ್‌ ನೀಡುತ್ತದೆ ಎಂದು ಕಾದು ನೋಡಬೇಕಿದೆ.