ಬ್ಯಾಂಕಲ್ಲಿ ಒಂದು ರೂಪಾಯಿ ಇರಲಿಲ್ಲ, ಚೌಡೇಶ್ವರಿ ದೇವಿ ಕಾಪಾಡಿದಳು: ಶುಭಾ ಪೂಂಜಾ
ಸಿನಿ ಜರ್ನಿಯಲ್ಲಿ ಎದುರಿಸಿದ ಕಷ್ಟದ ದಿನಗಳ ಬಗ್ಗೆ ನಟಿ ಶುಭಾ ಪೂಂಜಾ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ.
'ಜ್ಯಾಕ್‌ಪಾಟ್' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಶುಭಾ ಪೂಂಜಾ 2007ರಲ್ಲಿ 'ಮೊಗ್ಗಿನ ಮನಸ್ಸು' ಚಿತ್ರಕ್ಕೆ ಫಿಲ್ಮ್‌ಫೇರ್ ಬೆಸ್ಟ್ ನಟಿ ಪ್ರಶಸ್ತಿ ಪಡೆಯುತ್ತಾರೆ. ಅದಾದ ನಂತರ ಚಿತ್ರರಂಗದಲ್ಲಿ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಶುಭಾ ಸಿನಿ ಜರ್ನಿಯಲ್ಲಿ ಎದುರಿಸಿದ ಕಷ್ಟವನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಲಕ್ಷಗಟ್ಟಲೇ ಸಂಪಾದಿಸುತ್ತಿದ್ದ ನಟಿಯ ಬ್ಯಾಂಕ್‌ನಲ್ಲಿ ಒಂದು ರೂಪಾಯಿಯೂ ಇಲ್ಲ ಅಂದ್ರೆ ಹೇಗಾಗುತ್ತದೆ ಹೇಳಿ?
ಮಗು ಮನಸ್ಸಿನ ಶುಭಾ ಪೂಂಜಾ; ಫುಲ್ ಮನೋರಂಜನೆ, ಫಿನಾಲೇ ಮುಟ್ಟಲೇಬೇಕು!
ಶುಭಾ ಮಾತು:
ಕನ್ನಡ ಚಿತ್ರರಂಗದಲ್ಲಿ ಮಿಂಚಿದ ನಟಿ ಶುಭಾ ಪೂಂಜಾ ಕೈಯ್ಯಲ್ಲಿ ಒಂದು ಸಿನಿಮಾನೂ ಇಲ್ಲದೆ ಬ್ಯಾಂಕ್‌ನಲ್ಲಿ ಒಂದು ರುಪಾಯಿಯೂ ಇಲ್ಲದೆ ಕಂಗಾಲಾಗಿದ್ದರು. ಸಿಗಂದೂರು ಚೌಡೇಶ್ವರಿ ಸನ್ನಿಧಾನಕ್ಕೆ ಪ್ರತಿ ಅಮವಾಸ್ಯೆ ದಿನದಂದು ಭೇಟಿ ನೀಡುತ್ತಿದ್ದರು. ಒಂದು ದಿನ ಸಿನಿಮಾ ನಿರ್ದೇಶಕರೊಬ್ಬರು ಕರೆ ಮಾಡಿ 'ಮೇಡಂ ನಾನು ಸಿಗಂದೂರು ಚೌಡೇಶ್ವರಿ ಮಹಿಮೆ ಸಿನಿಮಾ ಮಾಡುತ್ತಿದ್ದೀವಿ ಅದರಲ್ಲಿ ನೀವೇ ನಟಿಸಬೇಕು. ದೇವಾಲಯ ಕಡೆಯಿಂದ ಸಿನಿಮಾ ಮಾಡುತ್ತಿರುವ ಕಾರಣ ಹೆಚ್ಚಿನ ಹಣ ನೀಡಲು ಆಗುವುದಿಲ್ಲ 50 ಸಾವಿರ ಕೊಡುತ್ತೇವೆ ಎಂದರು. ನಾನು ಆ ದೇವಿ ದರ್ಶನ ಪಡೆದ ಪ್ರತಿಫಲನೇ ಇದು ಎಂದು ನಾನು ಸಿನಿಮಾ ಒಪ್ಪಿಕೊಂಡೆ. ಅವರು ಕೊಟ್ಟ ಹಣದಲ್ಲಿ ನಾನು ಒಂದು ರೂಪಾಯಿಯೂ ಮುಟ್ಟಿಲ್ಲ. ನನ್ನ ಮೇಕಪ್ ಮ್ಯಾನ್, ಕಾರು ಡ್ರೈವರ್ ಹಾಗೂ ಮ್ಯಾನೇಜರ್‌ಗೆ ಕೊಟ್ಟೆ. ಸಿನಿಮಾ ಚಿತ್ರೀಕರಣ ಮುಗಿಯಲು ಇನ್ನೇನು ಎರಡು-ಮೂರು ದಿನ ಉಳಿದಿತ್ತು. ಆ ದಿನ ಬೆಟ್ಟದ ಮೇಲೆ ಕುಳಿತಿದ್ದೆ. ಅಲ್ಲಿ ನೀವು ಏನೇ ಮಾಡಿದರೂ ಮೊಬೈಲ್ ನೆಟ್‌ವರ್ಕ್ ಸಿಗುವುದಿಲ್ಲ ಅಂತ ಸ್ಥಳ. ಅವತ್ತು ನನಗೆ ಬಂದ ಕರೆ ನನ್ನ ಇಡೀ ಜೀವನ ಬದಲಾಯಿಸಿತ್ತು' ಎಂದು ಶುಭಾ ನಮ್ಮ ಸಿನಿ ಜರ್ನಿಯ ಏಳು ಬೀಳುಗಳನ್ನು ಹಂಚಿಕೊಂಡಿದ್ದಾರೆ.
ನಟಿ ಶುಭಾ ಪೂಂಜಾ ಹಲ್ಲೆಲ್ಲಾ ಉದುರಿಹೋಗ್ತಿದೆ; ಟೂಥ್‌ಬ್ರಷ್ ಇಲ್ಲ, ಪಾತ್ರೆ ತೊಳೆಯೋ ನಾರೇ ಗತಿ!
'ಆ ದಿನ ನನ್ನ ಮ್ಯಾನೇಜರ್ ಬಂದು ಮೇಡಂ ನಿಮಗೆ ಮೆಸೇಜ್ ಬಂದಿದೆ. ಹರ್ಷ ಮಾಸ್ಟರ್‌ರಿಂದ. ತಕ್ಷಣ ಕಾಲ್ ಮಾಡಿ ಎಂದು ಮೆಸೇಜ್ ಹಾಕಿದ್ದಾರೆ ಎಂದರು. ನಾನು ರೂಮ್‌ಗೆ ಹೋಗಿ ಅವರಿಗೆ ಕಾಲ್ ಮಾಡಿದೆ ಅವರು 'ಜೈ ಮಾರುತಿ 800' ಅಂತ ಸಿನಿಮಾ ಮಾಡ್ತಿದ್ದೀನಿ ನೀವು ಅಭಿನಯಿಸಬೇಕು ಎಂದರು. ಅಬ್ಬಾ ಅ ಕ್ಷಣ ನನ್ನ ಜೀವನದಲ್ಲಿ ನಾನು ಮರೆಯುವುದಿಲ್ಲ. ಆ ಸಿನಿಮಾ ಒಪ್ಪಿಕೊಂಡ ನಂತರ ಕೈ ತುಂಬಾ ಅವಕಾಶಗಳು ಬಂದವು. ಅಲ್ಲಿಂದ ಸ್ವಲ್ಪ ಸ್ವಲ್ಪ ಹಣ ಸೇವ್ ಮಾಡುತ್ತಾ ಬಂದೆ. ಆನಂತರ ಬಿಗ್ ಬಾಸ್ ಒಪ್ಪಿಕೊಂಡು ಇಲ್ಲಿಗೆ ಬಂದೆ' ಎಂದು ಶುಭಾ ಮಾತನಾಡಿದ್ದಾರೆ.