8 ಮಂದಿ ನೇರವಾಗಿ ನಾಮಿನೇಟ್. ರಘು ಗೌಡ ಕೊಟ್ಟ ಇಮ್ಯೂನಿಟಿ ಶಮಂತ್ ಲಕ್ ಬದಲಾಯಿಸಿತ್ತು. 

ಬಿಗ್ ಬಾಸ್‌ ಸೀಸನ್ 8ರಲ್ಲಿ ಯಾವ ವಾರ ನೇರ ನಾಮಿನೇಷನ್ ಇರುತ್ತದೆ, ಯಾವ ವಾರ ಯಾರೂ ಮನೆಯಿಂದ ಹೊರ ಹೋಗುವುದಿಲ್ಲ ಅಂತ ತಿಳಿಯುವುದಿಲ್ಲ. ಆದರೆ ಮನೆಯಿಂದ ಹೊರ ಹೋಗುವ ಒಬ್ಬ ಸ್ಪರ್ಧಿ ಮನೆಯೊಳಗಿರುವವರಿಗೆ ಬಿಗ್ ಸರ್ಪ್ರೈಸ್ ಕೊಡುವುದು ಕನ್ಫರ್ಮ್. 

ನಿಧಿ ಸುಬ್ಬಯ್ಯ ಮನೆಯಿಂದ ಹೊರ ಹೋಗುವ ಮುನ್ನ ಅರವಿಂದ್‌ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದರು. ರಘು ಗೌಡ ಮನೆಯಿಂದ ಹೊರ ಬರುವ ಮುನ್ನ ಶಮಂತ್‌ ಗೌಡ ಅವರನ್ನು ಬರುವ ವಾರದ ನಾಮಿನೇಷನ್‌ನಿಂದ ಸೇವ್ ಮಾಡಿದ್ದರು. ಈ ವಾರದ ಕ್ಯಾಪ್ಟನ್ ಆಗಿ ಅರವಿಂದ್ ಕೂಡ ಸೇಫ್ ಆದರು. ಹೀಗಾಗಿ ಈ ವಾರ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. 

ಬಿಗ್ ಬಾಸ್‌ ಮನೆಯಲ್ಲಿ ದೆವ್ವದ ಕಾಟ: ಕಪ್ಪು ನೆರಳು ನೋಡಿ ಹೆದರಿದ ಶಮಂತ್?

ಶುಭಾ ಪೂಂಜಾ, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಪ್ರಿಯಾಂಕಾ ತಿಮ್ಮೇಶ್ ನಾಮಿನೇಟ್ ಆಗಿದ್ದಾರೆ. ಈ ನೇರ ನಾಮಿನೇಷನ್‌ನಿಂದ ಬಚಾವ್ ಆಗಲು ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದ್ದಾರೆ. ಅದುವೇ ದಂಡಯಾತ್ರೆ. ಈ ಟಾಸ್ಕ್‌ ಮೂಲಕ ಎರಡು ಗುಂಪುಗಳನ್ನು ವಿಂಗಡಿಸಿದ್ದಾರೆ. ಕಾಲ ಕಾಲಕ್ಕೆ ಟಾಸ್ಕ್ ನೀಡಲಾಗುತ್ತದೆ. ಅತಿ ಹೆಚ್ಚು ಬಾರಿ ಗೆಲುವು ಸಾಧಿಸುವ ತಂಡ ನಾಮಿನೇಟ್‌ನಿಂದ ಪಾರಾಗುತ್ತದೆ, ಸೋತ ತಂಡದಿಂದ ಒಬ್ಬ ಸದಸ್ಯ ಮನೆಯಿಂದ ಹೊರ ಹೋಗುತ್ತಾನೆ.