ಮೂರು ತಿಂಗಳು ತಡವಾಗಿ ಆರಂಭವಾದ ಬಿಗ್ ಬಾಸ್‌ ಸೀಸನ್‌ 8 ಇದೀಗ ಅರ್ಧಕ್ಕೇ ಮುಕ್ತಾಯವಾಗುತ್ತಿದೆ. ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿದ ನಂತರ ಟೆಲಿವಿಷನ್ ಅಸೋಷಿಯೇಷನ್ ಕೈಗೊಂಡ ನಿರ್ಧಾರದಿಂದ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳಿಗೆ ಬ್ರೇಕ್ ಬಿದ್ದಿದೆ. ಅದರಲ್ಲೂ ಮೂರು ರಿಯಾಲಿಟಿ ಶೋಗಳಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ.   

ಹೇಳ್ಬೇಕು ಅನ್ನುಸ್ತು ಹೇಳ್ದೆ; ಸುದೀಪ್ ಕಿವಿ ಮಾತಿಗೆ ಕಾಯುತ್ತಿರುವ ಬಿಬಿ ಸ್ಪರ್ಧಿಗಳು! 

ಹೊರಗಿನ ಪ್ರಪಂಚದ ಅರಿವಿಲ್ಲದೆ ನಗು, ನಗುತ್ತಾ ಜೀವನ ಮಾಡುತ್ತಿರುವ ಸ್ಪರ್ಧಿಗಳಿಗೆ ಈ ಸಂಗತಿ ತಿಳಿಸುವುದೇ ದೊಡ್ಡ ಟಾಸ್ಕ್ ಆಗಿತ್ತು. ಬಿಗ್ ಬಾಸ್ ಬ್ರೇಕಿಂಗ್ ಎಂದು ಅನೌನ್ಸ್ ಮಾಡಿ ಟಿವಿಯಲ್ಲಿ ಹೊರಗಡೆ ನಡೆಯುತ್ತಿರುವ ಘಟನೆ ಬಗ್ಗೆ ವಿವರಿಸಲಾಗಿದೆ. ನ್ಯೂಸ್ ಚಾನೆಲ್‌ಗಳನ್ನು ತೋರಿಸಿದ್ದಾರೆ. ನೋಡುತ್ತಲೇ ಕಣ್ಣೀರಿಟ್ಟ ಸ್ಪರ್ಧಿಗಳು ಒಬ್ಬರನ್ನೊಬ್ಬರು ಅಪ್ಪಿಕೊಂಡು ಕಣ್ಣೀರಿಟ್ಟಿದ್ದಾರೆ. 

'ಹೊರಗಿನ ಸಿಸ್ಟಮ್‌ನಲ್ಲಿ ತೊಂದರೆ ಇದೆ ಅಂತ ನಿಮಗೆ ಹೇಳುತ್ತಿದ್ದೆ ನಾನು. ಇದಕ್ಕೆನೇ ನೋಡಿ,' ಎಂದು ಚಕ್ರವರ್ತಿ ಹೇಳಿದ್ದಾರೆ. 'ಮನೆ ಬೆಲೆ ಈಗ ಗೊತ್ತಾಗುತ್ತಿದೆ. ಅದಕ್ಕೆ ಲೋಟ ಒಡೆದು ಹಾಕಿದರೂ ಶಿಕ್ಷೆ ಅನುಭವಿಸಬೇಕಿತ್ತು,' ಎಂದು ಶಮಂತ್ ಹೇಳಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯೂ ಬಿಗ್ ಬಾಸ್‌ ಮುಖ್ಯ ದ್ವಾರದ ಬಳಿ ನಿಂತು, 'ಬಿಗ್ ಬಾಸ್ ನಮ್ಮ ಆರೋಗ್ಯದ ಬಗ್ಗೆ ಇರುವ ಕಾಳಜಿಯಿಂದ ತೆಗೆದುಕೊಂಡಿರುವ ಈ ನಿರ್ಧಾರದ ಬಗ್ಗೆ ನಮ್ಮ ಸಂಪೂರ್ಣ ಒಪ್ಪಿಗೆ ಇದೆ. ಧನ್ಯವಾದಗಳು,' ಎಂದು ಪ್ರಶಾಂತ್ ಹೇಳಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯೂ ಕ್ಯಾಮೆರಾ ಕಡೆ ಮುಖ ಮಾಡಿ, ಮುಂಡಿಯೂರಿ ಬಿಗ್‌ಬಾಸ್‌ಗೆ ನಮಸ್ಕರಿಸಿದ್ದಾರೆ. 

ಬಿಗ್ ಬಾಸ್‌ ನಿರ್ಧಾರ ಒಪ್ಪಿದೆ, ಆದರೆ ಈ ರೀತಿ ಅಂತ್ಯವಾಗಿದ್ದಕ್ಕೆ ಬೇಸರವಿದೆ: ಗೀತಾ ಭಾರತಿ ಭಟ್ 

ಬಿಗ್ ಬಾಸ್‌ ಮನೆಯಿಂದ ಹೊರಗಿರುವ ಸ್ಪರ್ಧಿಗಳೂ ಬೇಸರ ವ್ಯಕ್ತ ಪಡಿಸಿದ್ದಾರೆ. ಎಲಿಮಿನೇಟ್ ಆಗಿ ಹೊರ ಬಂದ ಧನುಶ್ರೀ, ನಿರ್ಮಲಾ, ಗೀತಾ, ವಿಶ್ವನಾಥ್, ರಾಜೀವ್ ಹಾಗೂ ಅನಾರೋಗ್ಯದ ಕಾರಣ ದಿವ್ಯಾ ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯಿಂದ ಇದೀಗ ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್, ಅರವಿಂದ್, ವೈಷ್ಣವಿ, ಪ್ರಿಯಾಂಕಾ, ಶಮಂತ್, ಪ್ರಶಾಂತ್ ಸಂಬರಗಿ, ರಘು ಗೌಡ ಹಾಗೂ ಚಕ್ರವರ್ತಿ ಹೊರ ಬಂದು ಕೆಲವು ದಿನಗಳ ಕಾಲ ಕ್ವಾರಂಟೈನ್ ಆಗಿ ಅನಂತರ ತಮ್ಮ ಗೂಡಿಗೆ ಸೇರಿಕೊಳ್ಳುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona