Asianet Suvarna News

ಅರವಿಂದ್- ದಿವ್ಯಾ ನಡುವೆ ಯಾರು ಮನೆಯಿಂದ ಹೊರ ಹೋಗುತ್ತಾರೆ?

ಸುದೀಪ್ ಕೇಳಿದ ಒಂದು ಪ್ರಶ್ನೆಗೆ ತಬ್ಬಿಬ್ಬಾದ ದಿವ್ಯಾ ಉರುಡುಗ. ಯಾಕೆ ಈ ರೀತಿ ಪ್ರಶ್ನೆ ಕೇಳುತ್ತೀರಾ ಸರ್?

Colors Kannada BBK8 Divya Uruduga goes blank for Sudeep serious question vcs
Author
Bangalore, First Published Jun 27, 2021, 1:43 PM IST
  • Facebook
  • Twitter
  • Whatsapp

ಜೋಡಿ ಟಾಸ್ಕ್‌ ಆದಾಗಿನಿಂದಲೂ ದಿವ್ಯಾ ಮತ್ತು ಅರವಿಂದ್  ಸ್ನೇಹಿತರಾಗಿ ಒಂದಾಗಿದ್ದಾರೆ. ಇಬ್ಬರೂ ಒಟ್ಟಿಗೆ ಊಟ ಮಾಡುತ್ತಾರೆ, ಒಬ್ಬರನ್ನೊಬ್ಬರು ಎಂದೂ ಬಿಟ್ಟು ಕೊಡುವುದಿಲ್ಲ. ಹೀಗೆ ಅವರ ಬಗ್ಗೆ ನಾವು ಹೇಳುವುದಕ್ಕಿಂತ, ನೀವು ಟಿವಿಯಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ನೋಡಿರುತ್ತೀರಾ. ವಾರದ ಕತೆ ಮಾತನಾಡುವಾಗ ಸುದೀಪ್, ದಿವ್ಯಾಗೆ ಒಂದು ಪ್ರಶ್ನೆ ಕೇಳುತ್ತಾರೆ.

ನಾವಲ್ಲ ಗುರು, ವೀಕ್ಷಕರು ಹೇಳ್ತಿದ್ದಾರೆ ಇವರದ್ದು ಸೂಪರ್ ಜೋಡಿ ಅಂತ; ಫೋಟೋ ನೋಡಿ 

'ದಿವ್ಯಾ ಉರುಡುಗ ಹಾಗೂ ಕೆಪಿ ಅರವಿಂದ್‌ ಮಧ್ಯೆ ಒಬ್ಬರು ಹೊರಗಡೆ ಹೋಗಬೇಕು ಅಂದರೆ ಯಾರು ಹೋಗುತ್ತೀರಾ?' ಎಂದು ದಿವ್ಯಾರನ್ನು ಸುದೀಪ್ ಪ್ರಶ್ನೆ ಮಾಡುತ್ತಾರೆ. ತುಂಬಾ ಸಮಯ ಕಾಲ ಚಿಂತಿಸಿದ ದಿವ್ಯಾ ನಾನು ಉಳಿದುಕೊಳ್ಳುತ್ತೇನೆ, ಎಂದಿದ್ದಾರೆ ಹಾಗೂ ಅರವಿಂದ್ ನಾನು ಹೋಗುತ್ತೇನೆ ಎಂದಿದ್ದಾರೆ.

'ಆಟದ ವಿಚಾರದಲ್ಲಿ ನಾನು ಅರವಿಂದ್‌ರನ್ನು ನನ್ನ ಪ್ರತಿಸ್ಪರ್ಧಿ ಎಂದು ಪರಿಗಣಿಸುವೆ. ಆರಂಭದಿಂದಲೂ ನಾನು ಆಟವನ್ನು ಬಿಟ್ಟು ಕೊಡೋದಿಲ್ಲ,' ಎಂದು ದಿವ್ಯಾ ಹೇಳಿದ್ದಾರೆ. 'ಸುದೀಪ್ ಸರ್ ನಾನು ಕೂಡ ಆಟವಾಡುತ್ತೇನೆ. ಸೋಲುತ್ತೇನೆ ಆದರೆ ಬಟ್ಟುಕೊಡೋದಿಲ್ಲ' ಎಂದು ಅರವಿಂದ್ ಹೇಳಿದ್ದಾರೆ. ಈ ವಾರ ಯಾರು ತುಂಬಾ ಎಲಿಗೆಂಟ್ ಅಥವಾ ಚೆನ್ನಾಗಿ ರೆಡಿಯಾಗಿದ್ದಾರೆ ಎಂದು ಸುದೀಪ್ ಕೇಳಿದಾಗ ಒಂದು ನಿಮಿಷವೂ ಯೋಚಿಸದೆ ಅರವಿಂದ್ ದಿವ್ಯಾ ಹೆಸರನ್ನು ಹೇಳುತ್ತಾರೆ.

Follow Us:
Download App:
  • android
  • ios