Asianet Suvarna News Asianet Suvarna News

BBK8: ದಿವ್ಯಾ ಉರುಡುಗ ಹಾಗೂ ಅರವಿಂದ್ ಮನಸ್ತಾಪಕ್ಕೇನು ಕಾರಣ?

ದಿವ್ಯಾ ಉರುಡುಗ ಮೇಲೆ ಬೇಸರ ಮಾಡಿಕೊಂಡ ಅರವಿಂದ್. ಜೋಡಿ ಹಕ್ಕಿಗಳು ದೂರವಾಗಲು ಕಾರಣವೇನು?

Colors Kannada BBK8 Divya Uruduga dominates Aravind leads to misunderstanding vcs
Author
Bangalore, First Published Jul 23, 2021, 4:11 PM IST
  • Facebook
  • Twitter
  • Whatsapp

ಈ ವಾರ ಮನೆಯ ಕ್ಯಾಪ್ಟನ್ ಆಗುವುದಕ್ಕೆ ಬಿಗ್ ಬಾಸ್ ನೀಡಿದ ಟಾಸ್ಕ್‌ನಿಂದ ಅರವಿಂದ್ ಹಾಗೂ ದಿವ್ಯಾ ನಡುವೆ ಮನಸ್ತಾಪವಾಗಿದೆ. ಸದಾ ಒಬ್ಬರ ಪರ ಮತ್ತೊಬ್ಬರು ನಿಲ್ಲುತ್ತಿದ್ದರು, ಆದರೆ ಇದೇ ಮೊದಲ ಸಲ ಸಣ್ಣ ವಿಚಾರವೊಂದಕ್ಕೆ ಇವರಿಬ್ಬರು ಮುನಿಸಿಕೊಂಡಿದ್ದಾರೆ. ದಿವ್ಯಾ ಮಾತನಾಡಿಸಿದರೂ, ಅರವಿಂದ್ ಮಾತನಾಡುವುದಿಲ್ಲ......

ವೈಷ್ಣವಿ ಗೌಡ, ದಿವ್ಯಾ ಉರುಡುಗ ಹಾಗೂ ಶುಭಾ ಪೂಂಜಾ ಗ್ಲೌಸ್ ಪಡೆಯಲು ನಿಂತಿದ್ದರು.  ಗ್ಲೌಸ್ ಪಡೆದುಕೊಳ್ಳುವ ಸದಸ್ಯ ಮುತ್ತು ಹುಡುಕುವ ಆಟ ಆಡಲು ಅರ್ಹರಾಗುತ್ತಾರೆ. ಶುಭಾ ಪೂಂಜಾ ಬಿಟ್ಟು ಕೊಡೋನಾ ಅಂತ ಹೇಳಿದರೂ ದಿವ್ಯಾ ಒಪ್ಪಿಕೊಳ್ಳುವುದಿಲ್ಲ. ದಿವ್ಯಾ ಮಾತುಗಳು ಅರವಿಂದ್‌ಗೆ ಸರಿಯಾಗಿ ಕೇಳಿಸುವುದಿಲ್ಲ. ಏನು ಹೇಳಿದೆ ಎಂದು ತುಸು ಏರು ಧ್ವನಿಯಲ್ಲಿ ಪ್ರಶ್ನೆ ಮಾಡುತ್ತಾರೆ. 'ನಾನು ಆಟ ಬಿಟ್ಟು ಕೊಡಲ್ಲ. ನಾನು ಯಾಕೆ ಬಿಟ್ಟುಕೊಡಲಿ,' ಎಂದು ಉತ್ತರಿಸುತ್ತಾರೆ. 

ದಿವ್ಯಾ- ಅರವಿಂದ್ ಒಂದೇ ಬಣ್ಣದ ಬಟ್ಟೆ, ಡಿಸೈನ್‌ ನೋಡಿ ನೆಟ್ಟಿಗರು ಶಾಕ್?

ದಿವ್ಯಾ ನೇರ ನುಡಿಯಿಂದ ಅರವಿಂದ್‌ಗೆ ನೋವಾಗುತ್ತದೆ. ಫೇರ್, ಅನ್‌ಫೇರ್‌ ಅಂತ ಇಷ್ಟು ದಿನ ಮಾತನಾಡುತ್ತಿದ್ದ ವ್ಯಕ್ತಿ ಹೀಗೆ ನಿಂತುಕೊಳ್ಳುವುದು ಸರಿ ಅಲ್ಲ ಎಂದು ಅರವಿಂದ್, ಚಕ್ರವರ್ತಿ ಬಳಿ ಚರ್ಚಿಸುತ್ತಾರೆ. ರಾತ್ರಿ ದಿವ್ಯಾ ಮಾತನಾಡಿಸಲು ಬಂದಾಗ 'ಮಾತನಾಡಿಸಲು ಏನಿಲ್ಲ,' ಎಂದು ಅರವಿಂದ್ ಹೇಳುತ್ತಾರೆ. ಬೇಸರಗೊಂಡ ದಿವ್ಯಾ ಅಳುತ್ತಾ ಮಲಗುತ್ತಾರೆ. 

ಮಾರನೇ ದಿನ ಬೇಸರದಲ್ಲಿ ದಿವ್ಯಾ ನಡೆದುಕೊಂಡು ಹೋಗುವಾಗ ಅರವಿಂದ್ ಹಿಂದೆಯಿಂದ ಬಂದು ತಬ್ಬಿ ಕೊಳ್ಳುತ್ತಾರೆ. ಇಬ್ಬರ ನಡುವೆ ಇದ್ದ ಮುನಿಸು ಸರಿ ಹೋಗುತ್ತದೆ.

 

Follow Us:
Download App:
  • android
  • ios