ಕೊನೆಗೆ ಸಾವಿನತನಕ ಬಂದು ಅಂತ್ಯವಾಗಬಹುದು; ಜಾನ್ವಿ ಶಾಕಿಂಗ್ ಹೇಳಿಕೆ
ವೈರಲ್ ಆಯ್ತು ನಿರೂಪಕಿ ಜಾನ್ವಿ ಕಾರ್ತಿಕ್ ಸಂದರ್ಶನ. ದೇವರು ಮಗ ಮೇಲೆ ಬಂದು ಹಠ ಮಾಡಿಸಿದ್ದು ನನಗೆ ಕಷ್ಟ ಆಗುತ್ತದೆ ಎಂದು.....

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಜನಪ್ರಿಯ ನಿರೂಪಕಿ ಜಾನ್ವಿ ಈಗ ಸಿಂಗಲ್ ಪೇರೆಂಟ್ ಆಗಿ ಜೀವನ ನಡೆಸುತ್ತಿದ್ದಾರೆ. ಗಿಚ್ಚಿ ಗಿಲಿಗಿಲಿ ಸೀಸನ್ 2 ಮತ್ತು ಫ್ಯಾಮಿಲಿ ಗ್ಯಾಂಗ್‌ಸ್ಟರ್‌ನಲ್ಲಿ ಮಿಂಚುತ್ತಿರುವ ಜಾನ್ವಿ ಈಗ ಕಲರ್ಸ್ ವಿಶೇಷ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ ಜೊತೆಗೆ ಬಿಗ್ ಬಾಸ್ ರೂಪೇಶ್ ಶೆಟ್ಟಿ ಜೊತೆ ಸಿನಿಮಾ ಸಹಿ ಮಾಡಿದ್ದಾರೆ. ಇತ್ತೀಚಿಗೆ ಸಾಕಷ್ಟು ಸಂದರ್ಶನಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಜಾನ್ವಿ ಮಗನ ವಿದ್ಯಾಭ್ಯಾಸದ ಬಗ್ಗೆ ಹಂಚಿಕೊಂಡಿದ್ದಾರೆ.
ಯಾರು ಯಾರನ್ನೂ ನೋಡಿಕೊಳ್ಳಬೇಕಿಲ್ಲ: ಧ್ರುವ ಸರ್ಜಾ ಬಗ್ಗೆ ಮೇಘನಾ ರಾಜ್ ಮಾತು
'ನನ್ನ ಮಗನನ್ನು ಟ್ರಯೋ ಸ್ಕೂಲ್‌ನಲ್ಲಿ ಓದಿಸಬೇಕು ಅಂತ ತುಂಬಾ ಆಸೆ ಇತ್ತು ಸ್ವಲ್ಪ ಹಣ ಕೊಟ್ಟು ಅಡ್ಮಿಶನ್ ಮಾಡಲಾಗಿತ್ತು ಆದರೆ ತುಂಬಾ ಹಠ ಮಾಡಿ ಬೇಡ ಬೇಡ ಎನ್ನುತ್ತಿದ್ದ. ಒಂದು ದಿನ ಸ್ಕೂಲ್ ಅಂತ ಹೇಳಿದಕ್ಕೆ ಕೆಳಗಿರುವ ಮನೆಗೆ ಹೋಗಿಬಿಟ್ಟ. ಆ ದೇವರೇ ನನ್ನ ಮಗನ ಮೂಲಕ ಹೀಗೆ ಮಾಡಿಸಿರುವುದು ಅನಿಸುತ್ತದೆ ಏಕೆಂದರೆ ಅಲ್ಲಿ ವಿದ್ಯಾಭ್ಯಾಸ ಚೆನ್ನಾಗಿದೆ ಆದರೆ ಹಣ ತುಂಬಾ ಖರ್ಚಾಗುತ್ತದೆ. ನಾನು ಸಿಂಗಲ್ ಪೇರೆಂಟ್ ಆದ್ಮೇಲೆ ಅವನ ವಿದ್ಯಾಭ್ಯಾಸ ನೋಡಿಕೊಳ್ಳುವುದು ಕಷ್ಟ ಆಗಬಹುದು ಅಂತ ಆ ದೈವವೇ ಹೀಗೆ ಮಾಡಿರುವುದು ಈಗ ಅವನನ್ನು ಪೂರ್ಣಪ್ರಜ್ಞ ಸ್ಕೂಲ್‌ಗೆ ಸೇರಿದೆ. ಅವತ್ತು ನನ್ನ ಮಗ ಯಾಕೆ ಸ್ಕೂಲ್‌ಗೆ ಹೋಗಲು ಹಠ ಮಾಡುತ್ತಿದ್ದಾನೆ ಎಂದು ಯೋಚನೆ ಮಾಡುತ್ತಿದ್ದೆ ಅದರೆ ಈಗ ಆ ದೇವರೇ ಸೆಟ್ ಮಾಡಿದ್ದಾನೆ ಇವಳು ಒಂಟಿ ಆದಾಗ ಜೀವನ ನಡೆಸಲು ಕಷ್ಟ ಆಗುತ್ತದೆ ಎಂದು. ಒಂದು ಕಳೆದುಕೊಂಡರೆ ಮತ್ತೊಂದು ರೆಡಿಯಾಗಿರುತ್ತದೆ ಆ ದೇವರೇ ಏನಾದರೂ ಪ್ಲ್ಯಾನ್ ಮಾಡಿರುತ್ತಾನೆ ಒಂದು ಕಷ್ಟ ಅಂತ್ಯ ಮಾಡಿದ್ದಾನೆ' ಎಂದು ಕನ್ನಡ ಖಾಸಗಿ ಟಿವಿ ಯುಟ್ಯೂಬ್ ಸಂದರ್ಶನದಲ್ಲಿ ಜಾನ್ವಿ ಮಾತನಾಡಿದ್ದಾರೆ.
ನೆಲದಲ್ಲಿ ಕುಳಿತಿದ್ದ ನಟಿ ಕಾವ್ಯಾ ಗೌಡರನ್ನು ತಮ್ಮ ಪಕ್ಕದಲ್ಲೇ ಕೂರಿಸಿಕೊಂಡ ಸುಧಾ ಮೂರ್ತಿ!
'ದೈವ ಇಚ್ಛೆ ಏನಿದೆ ಅದೇ ಆಗುತ್ತದೆ. ನನಗಿಂತ ಕಷ್ಟ ಪಡುತ್ತಿರುವವರು ಇದ್ದಾರೆ ಅದನ್ನು ನೋಡಿದರೆ ದೇವರು ನಮ್ಮನ್ನು ಚೆನ್ನಾಗಿಟ್ಟಿದ್ದಾನೆ. ನನ್ನ ಫ್ಯಾಮಿಲಿನ ನೋಡಿಕೊಳ್ಳುವಷ್ಟು ವ್ಯವಸ್ಥೆ ಆದ್ಮೇಲೆ ನನ್ನ ಜೀವನದಲ್ಲಿ ಈ ರೀತಿ ಆಗಿರುವುದು..ನಮ್ಮಲ್ಲಿ ಸಹಿಸಿಕೊಳ್ಳುವ ಗುಣ ಹೆಚ್ಚಿರುತ್ತದೆ ಏಕೆಂದರೆ ಹಣಕಾಸಿನ ವಿಚಾರದಲ್ಲಿ ನಾವು ಇಂಡಿಪೆಂಡೆಂಟ್ ಆಗುವವರೆಗೂ ಸಹಿಸಿಕೊಳ್ಳುತ್ತೀವಿ ತಂದೆ-ತಾಯಿಗೆ ಕಷ್ಟ ಆಗದಂತೆ ನೋಡಿಕೊಳ್ಳುತ್ತೀವಿ...ಸಾವಿನ ಮೂಲಕವೂ End ಆಗಬಹುದು. ಅವತ್ತಿನಿಂದ ಇವತ್ತಿನವರೆಗೂ ದೇವರ ನನ್ನ ಕೈ ಹಿಡಿದಿದ್ದಾನೆ ನನ್ನ ಸಿನಿಮಾ ಕೆಲಸಗಳು ಚೆನ್ನಾಗಿ ನಡೆಯುತ್ತಿದೆ. ಒಂದು ಕಷ್ಟದಿಂದ ಹೊರ ತಂದು ನೆಮ್ಮದಿಯಾಗಿರಲು ಬ್ಯುಸಿಯಾಗಿಟ್ಟಿದ್ದಾನೆ ಅಂದರೆ ಖಂಡಿತಾ ಇದು ದೇವರ ಕೆಲಸವೇ' ಎಂದು ಜಾನ್ವಿ ಹೇಳಿದ್ದಾರೆ.