'ಅಗ್ನಿಸಾಕ್ಷಿ'  ಪ್ರಮುಖ ಪಾತ್ರಧಾರಿ ರಾಜೇಶ್ವರಿ ಧಾರಾವಾಹಿಯಿಂದ ಹೊರ ಬಂದರೂ ಆಭಿಮಾನಿಗಳು ಆಕೆಯ ಅದ್ಭುತ ನಟನೆಯನ್ನು ಇನ್ನೂ ಮರೆತಿಲ್ಲ. ಅದರಲ್ಲೂ ವಿಭಿನ್ನ ವಸ್ತ್ರ ವಿನ್ಯಾಸ ಹಾಗೂ ಕೇಶ ವಿನ್ಯಾಸದಿಂದ ಎಲ್ಲರ ಗಮನ ಸೆಳೆಯುವಲ್ಲಿ ಈ ನಟಿ ಯಶಸ್ವಿಯಾಗಿದ್ದರು.  ಧಾರಾವಾಹಿಯಿಂದ ಹೊರ ಬಂದ ರಾಜೇಶ್ವರಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ಬಣ್ಣದ ಲೋಕದಿಂದ ದೂರ ಉಳಿದರೂ ರಾಜೇಶ್ವರಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಾ, ಉತ್ತಮ ಬಾಂಧವ್ಯ ಹೊಂದಿದ್ದಾರೆ. ರಾಜೇಶ್ವರಿ ಮತ್ತು ಮಗಳು ಒಂದೇ ರೀತಿಯ ವಸ್ತ್ರ ಧರಿಸಿರುವ ಫೋಟೋ ಶೇರ್ ಮಾಡಿಕೊಂಡಿದ್ದರು.  'ಹವ್ಯಾಮ್ಮ ಮತ್ತ ಅವರ ಅಮ್ಮ' ಎಂದು ಬರೆದುಕೊಂಡಿದ್ದಾರೆ.

ಅಗ್ನಿಸಾಕ್ಷಿ ಚಂದ್ರಿಕಾ ಮನೆಗೆ ಲಿಟಲ್ ಪ್ರಿನ್ಸೆಸ್! 

 
 
 
 
 
 
 
 
 
 
 
 
 

Havyamma and her Amma 1️⃣

A post shared by Rajeshwari Krishna (@rajeshwarisarathi938) on Jul 20, 2020 at 12:18pm PDT

ರಾಜೇಶ್ವರಿ ಮತ್ತು ಪತಿ ಕ್ರಿಶ್ ವೈವಾಹಿಕ ಬುದುಕಿಗೆ ಕಾಲಿಟ್ಟ ನಂತರ ಕೆಲವು ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲೇ ನೆಲೆಸಿದ್ದರು. ಅಲ್ಲಿನ ಖಾಸಗಿ ಕಂಪನಿಯೊಂದರಲ್ಲಿಯೂ ಸಹ ಕೆಲಸ ಮಾಡುತ್ತಿದ್ದರು.  ಮಗಳು ಜನಿಸಿದ ನಂತರ ಮನೆಯಲ್ಲೇ ಸಮಯ ಕಳೆಯುತ್ತಿದ್ದಾರೆ.  ಆಗಸ್ಟ್‌ ತಿಂಗಳಲ್ಲಿ ಮಗಳಿಗೆ ಒಂದು ವರ್ಷ ತುಂಬುತ್ತದೆ.