ಗೂಗಲ್‌ನಿಂದ ಕನ್ನಡಕ್ಕೆ ಅವಮಾನ ಆಗಿದೆ. Uglist ಭಾಷೆ ಕನ್ನಡ ಅಲ್ಲ, ಗೂಗಲ್ ಹುಟ್ಟಿಕೊಳ್ಳುವ ಮುನ್ನ ಕನ್ನಡ ಹುಟ್ಟಿದ್ದು. ಹೀಗಾಗಿ ಕನ್ನಡ Queens of all languages ಅಂತ ಆಗಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಜನ ಸಾಮಾನ್ಯರು, ಸಿನಿಮಾ ಸೆಲೆಬ್ರಿಟಿಗಳು ಹಾಗೂ ರಾಜಕಾರಣಿಗಳು ಧ್ವನಿ ಎತ್ತಿದ್ದಾರೆ. ಈ ಸಮಯದಲ್ಲಿ ಕಿರುತೆರೆ ನಟ ಚಂದು ಗೌಡ ಮತ್ತು ಆಶಿಕಾ ಪಡುಕೋಣೆ ನೀಡಿ ಹೇಳಿಕೆ ವೈರಲ್ ಆಗುತ್ತಿದೆ. 

ಹೌದು! ಆಶಿಕಾ ಈ ಹಿಂದೆ ಖಾಸಗಿ ಸಂದರ್ಶನವೊಂದರಲ್ಲಿ 'ಬೆಂಗಳೂರಿನಲ್ಲಿ ಇರುವ ಶೇ.70 ರಿಂದ ಶೇ.80ರಷ್ಟು ಮಂದಿ ತೆಲುಗು ಜನರೇ ಇದ್ದಾರೆ,' ಎಂದು ಹೇಳಿದ್ದರು.  ಇಬ್ಬರೂ ಕರ್ನಾಟಕದಲ್ಲಿ ಹುಟ್ಟಿ, ಬೆಳೆದು ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡು, ಇದೀಗ ತೆಲುಗು ಚಿತ್ರರಂಗಕ್ಕೆ ಹಾರಿದ ತಕ್ಷಣ ನಿಮ್ಮ ದಾಟಿ ಬದಲಾಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.  ವಿಷಯ ಗಂಭೀರ ಆಗುತ್ತಿದ್ದಂತೆ, ಇಬ್ಬರೂ ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ.

ಗೂಗಲ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ರಾಜ್ಯ ಸರ್ಕಾರ 

'ನಾನು ಹುಟ್ಟಿ, ಬೆಳದಿದ್ದು ಬೆಂಗಳೂರಿನಲ್ಲಿ. ಕನ್ನಡ ನನ್ನ ಮಾತೃಭಾಷೆ.  ಶೇ.1ರಷ್ಟು ಅದರ ಮೇಲಿರುವ ಪ್ರೇಮವೂ ಕಡಿಮೆ ಆಗುವುದಿಲ್ಲ. ಆ ಸಂದರ್ಶನವನ್ನು ದಯವಿಟ್ಟು ಪೂರ್ತಿಯಾಗಿ ನೋಡಿದರೆ ನಾವು ಅದರಲ್ಲಿ ತಪ್ಪಾಗಿ ಮಾತನಾಡಿಲ್ಲ ಎಂಬುವುದು ನಿಮಗೆ ಗೊತ್ತಾಗುತ್ತದೆ. ನಾನು ಕನ್ನಡ ಭಾಷೆಯನ್ನು ಅಗೌರವಿಸುವ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ದುಡ್ಡಿಗೋಸ್ಕರ ಕನ್ನಡವನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ನಮ್ಮ ಮೇಲೆ ಅರೋಪ  ಮಾಡಲಾಗುತ್ತಿದೆ. ಅಷ್ಟು ಕೀಳು ಮಟ್ಟಕ್ಕೆ ನಾವು ಇಳಿದಿಲ್ಲ,' ಎಂದು ಚಂದು ಗೌಡ ಮಾತನಾಡಿದ್ದಾರೆ.

'ನಮ್ಮಂಥ ಚಿಕ್ಕ ಕಲಾವಿದರನ್ನು ಯಾಕೆ ಪದೇ ಪದೇ ಟಾರ್ಗೆಟ್ ಮಾಡುತ್ತಿದ್ದೀರಿ? ಸಂದರ್ಶನದ ಸಣ್ಣ ವಿಡಿಯೋ ಇಟ್ಟುಕೊಂಡು, ಬೇರೆ ಅರ್ಥ ಕಲ್ಪಿಸಬೇಡಿ.  ನಮ್ಮ ಮಾತುಗಳಿಂದ ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ, ದಯವಿಟ್ಟು ಕ್ಷಮಿಸಿ.  ನಾವು ಬೇರೆ ರಾಜ್ಯಕ್ಕೆ ಹೋದರೂ ಕನ್ನಡ ಮರೆತಿಲ್ಲ,' ಎಂದು ಇಬ್ಬರೂ ವಿಡಿಯೋದಲ್ಲಿ ಮಾತನಾಡಿದ್ದಾರೆ.