ಹುಟ್ಟಿನಿಂದಲೇ 7 ಆಪರೇಷನ್! ಒಂದು ಕೋಟಿ ಗೆದ್ದ ಕಾಶ್ಮಿರದ ಯುವಕ- ಏಳು ಕೋಟಿ ಪ್ರಶ್ನೆಗೂ ಸರಿಯುತ್ತರ
ಏಳು ಆಪರೇಷನ್ ಕಂಡು ಜೀವನದಲ್ಲಿ ನೊಂದುಬೆಂದಿರುವ ಕಾಶ್ಮೀರದ ಯುವಕನೊಬ್ಬ ಕೌನ್ ಬನೇಗಾ ಕರೋರ್ಪತಿಯಲ್ಲಿ ಒಂದು ಕೋಟಿ ಗೆದ್ದಿದ್ದಾನೆ. ಅವನಿಗೆ ಕೇಳಿದ ಪ್ರಶ್ನೆ ಏನು?
ಕೌನ್ ಬನೇಗಾ ಕರೋರ್ಪತಿಯ 16ನೇ ಸೀಸನ್ ಶುರುವಾಗಿ ಒಂದು ತಿಂಗಳು ಆಗಿದೆ. ಆಗಸ್ಟ್ 12 ರಂದು ಗ್ರ್ಯಾಂಡ್ ಪ್ರೀಮಿಯರ್ ಸಂಚಿಕೆಯೊಂದಿಗೆ ಪ್ರಸಾರವಾಯಿತು. ಈ ಸೀಸನ್ನಲ್ಲಿಯೂ ನಿರೂಪಕರಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಮರಳಿದ್ದಾರೆ. ಕಳೆದ ಎಲ್ಲಾ ಸಂಚಿಕೆಗಳನ್ನೂ ನಡೆಸಿಕೊಟ್ಟಿರುವ ಅಮಿತಾಭ್ ಈ ಬಾರಿ ಇರುತ್ತಾರೆಯೋ ಇಲ್ಲವೇ ಎನ್ನುವ ಸಂದೇಹವಿತ್ತು. ಆದರೆ ಮತ್ತೆ ಪುನರಾಗಮನ ಮಾಡುವ ಮೂಲಕ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಷೋ ಆರಂಭವಾಗಿ ಒಂದು ತಿಂಗಳ ಬಳಿಕ ಇದೀಗ ಈ ಸೀಸನ್ನ ಮೊದಲ ಕೋಟ್ಯಧಿಪತಿ ಸಿಕ್ಕಿದ್ದಾರೆ. ಹೌದು. ಜಮ್ಮು ಮತ್ತು ಕಾಶ್ಮೀರದ 22 ವರ್ಷದ ಸ್ಪರ್ಧಿ ಚಂದರ್ ಪ್ರಕಾಶ್ ಅವರು 1 ಕೋಟಿ ರೂಪಾಯಿ ಗೆದ್ದಿದ್ದಾರೆ. ಜೊತೆಗೆ ಒಂದು ಐಷಾರಾಮಿ ಕಾರು ಕೂಡ ಗೆದ್ದಿದ್ದಾರೆ.
ಆದರೆ ವಿಶೇಷ ಎಂದರೆ, ಚಂದರ್ ಪ್ರಕಾಶ್ ಅವರ ಮುಂದಿನ ಪ್ರಶ್ನೆ ಏಳು ಕೋಟಿ ರೂಪಾಯಿಗಳದ್ದಾಗಿತ್ತು. ಇದಕ್ಕೆ ಅವರು ಸರಿ ಉತ್ತರ ಕೊಟ್ಟರೂ ಒಂದು ಕೋಟಿಯಷ್ಟನ್ನೇ ಕೊಂಡೊಯ್ಯಲು ಸಾಧ್ಯವಾಯಿತು. ಅಂದಹಾಗೆ, ಒಂದು ಕೋಟಿಯ ಪ್ರಶ್ನೆಯಲ್ಲಿ ಅಮಿತಾಭ್ ಅವರು, ಸ್ಪರ್ಧಿಗೆ, ಭೌಗೋಳಿಕತೆಯ ಬಗ್ಗೆ ಪ್ರಶ್ನೆ ಕೇಳಿದ್ದರು. ರಾಜಧಾನಿ "ಯಾವ ದೇಶದ ಅತಿದೊಡ್ಡ ನಗರಕ್ಕೆ ರಾಜಧಾನಿ ಇಲ್ಲ, ಆದರೆ ಅಲ್ಲಿರುವ ಬಂದರಿಗೆ ಅರೇಬಿಕ್ ಹೆಸರು ಇದೆ. ಅದರ ಅರ್ಥ 'ಶಾಂತಿಯ ವಾಸಸ್ಥಾನ' ಎನ್ನುವುದು. ಹಾಗಿದ್ದರೆ ಆ ದೇಶ ಯಾವುದು ಎಂದು ಕೇಳಿದ್ದರು. ಇದಕ್ಕೆ ಆಯ್ಕೆಗಳು: ಎ) ಸೊಮಾಲಿಯಾ, ಬಿ) ಓಮನ್, ಸಿ) ತಾಂಜಾನಿಯಾ, ಡಿ) ಬ್ರೂನಿ ಎಂದಾಗಿತ್ತು. ಇದಕ್ಕೆ ಚಂದರ್ ಪ್ರಕಾಶ್ ಸರಿಯಾದ ಉತ್ತರ ಕೊಟ್ಟರು. ಡಬಲ್ ಡಿಪ್ ಲೈಫ್ಲೈನ್ ಬಳಸಿ ತಾಂಜಾನಿಯಾ ಎಂಬ ಸರಿ ಉತ್ತರ ಕೊಟ್ಟರು.
ಐಶ್ವರ್ಯ ರೈ ಮೈತುಂಬಾ ಬಟ್ಟೆ ಧರಿಸ್ತಿರೋ ಹಿಂದಿದೆ ಗಂಭೀರ ಆರೋಗ್ಯ ಸಮಸ್ಯೆ? ತೂಕ ಹೆಚ್ಚಲೂ ಇದೇ ಕಾರಣ!
ಬಳಿಕ ಅಮಿತಾಭ್ ಅವರು 7 ಕೋಟಿ ರೂಪಾಯಿಗಳ ಪ್ರಶ್ನೆ ಕೇಳಿದ್ದರು. ಇದಕ್ಕೆ ಸರಿಯಾದ ಉತ್ತರ ಕೊಟ್ಟರೆ ಏಳು ಕೋಟಿ ರೂಪಾಯಿ ಪಡೆಯುವ ಅವಕಾಶವಿತ್ತು. ಆದರೆ ಉತ್ತರ ತಪ್ಪಾಗಿದ್ದರೆ 25 ಲಕ್ಷ ರೂಪಾಯಿಗಳಷ್ಟೇ ಸಿಗುತ್ತಿತ್ತು. ಅದರ ಪ್ರಶ್ನೆ, "1587 ರಲ್ಲಿ ಉತ್ತರ ಅಮೆರಿಕಾದಲ್ಲಿ ಇಂಗ್ಲಿಷ್ ಪೋಷಕರಿಗೆ ಜನಿಸಿದ ಮೊದಲ ದಾಖಲಿತ ಮಗು ಯಾರು?" ಎಂಬುದಾಗಿತ್ತು. ಚಂದರ್ ಅವರಿಗೆ ಉತ್ತರ ತಿಳಿದಿತ್ತು. ಆದರೆ ನಿಖರವಾಗಿ ಗೊತ್ತಿರಲಿಲ್ಲ. ಎಲ್ಲಾ ಲೈಫ್ಲೈನ್ಗಳು ಮುಗಿದಿದ್ದರಿಂದ ಕ್ವಿಟ್ ಆದರು. ಒಂದು ಕೋಟಿ ರೂಪಾಯಿ ಚೆಕ್ ಅವರಿಗೆ ಸಿಕ್ಕಿತು. ಅದಾದ ಬಳಿಕ, ಒಂದು ವೇಳೆ ಉತ್ತರ ಕೊಡುವುದಿದ್ದರೆ ಯಾವುದನ್ನು ಆಯ್ಕೆ ಮಾಡುತ್ತಿದ್ದೀರಿ ಎಂದು ಅಮಿತಾಭ್ ಕೇಳಿದಾಗ ಅವರು, ವರ್ಜೀನಿಯಾ ಡೇರ್ ಆಯ್ಕೆಯನ್ನು ಆಯ್ಕೆ ಮಾಡಿದರು. ಅವರ ದುರಾದೃಷ್ಟಕ್ಕೆ ಈ ಉತ್ತರ ಸರಿಯಾಗಿತ್ತು. ಆದರೆ ಅದಾಗಲೇ ಅವರು ಹಿಂದೆ ಸರಿದಿದ್ದರಿಂದ ಒಂದು ಕೋಟಿ ರೂಪಾಯಿಯಷ್ಟೇ ಪಡೆಯಲು ಸಾಧ್ಯವಾಯಿತು.
ಅಂದಹಾಗೆ, ಚಂದರ್ ಅವರು, ಹುಟ್ಟಿನಿಂದಲೇ ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿ ಏಳು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ರಸಪ್ರಶ್ನೆ ಪ್ರದರ್ಶನದಲ್ಲಿ ತನ್ನ ಯಶಸ್ಸಿಗೆ ಶಾಂತ ಮತ್ತು ಏಕಾಗ್ರತೆ ಕಾರಣ ಎಂದಿದ್ದಾರೆ. ಈ ಬಾರಿ ಕೌನ್ ಬನೇಗಾ ಕರೋರ್ಪತಿಯಲ್ಲಿ ಕೆಲವು ಹೊಸ ಬದಲಾವಣೆಗಳನ್ನು ಮಾಡಲಾಗಿದೆ. 'ಸೂಪರ್ ಸವಾಲ್' ಮತ್ತು 'ದುಗ್ನಾಸ್ತ್ರ' ಎಂಬುದನ್ನು ಪರಿಚಯಿಸಲಾಗಿದೆ. ಸ್ಪರ್ಧಿಯು ಸೂಪರ್ ಸವಾಲ್ ಉತ್ತರಿಸಲು ಪ್ರಯತ್ನಿಸುವ ಮೂಲಕ ಮೊತ್ತವನ್ನು ದ್ವಿಗುಣಗೊಳಿಸುವ ಅವಕಾಶವನ್ನು ಪಡೆಯಬಹುದಾಗಿದೆ.
KBC 16: ಮದುವೆಯಾಗದ ಮಹಿಳೆಯರು ಸಂಸಾರಕ್ಕೆ ಭಾರ ಎಂದ ಸ್ಪರ್ಧಿಗೆ ಅಮಿತಾಭ್ ಬಚ್ಚನ್ ಕ್ಲಾಸ್!