ಚಂದನ್ ಶೆಟ್ಟಿ ಮತ್ತು ಸಂಜನಾ, ನಿವೇದಿತಾ ಗೌಡ ಜೊತೆಗಿನ ವಿಚ್ಛೇದನದ ನಂತರ ಮದುವೆಯಾಗಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಾವು ಒಳ್ಳೆಯ ಸ್ನೇಹಿತರು ಮತ್ತು ಸಹೋದರರಂತೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಮಾ.18): ಚಂದನ್ ಶೆಟ್ಟಿ ಡಿವೋರ್ಸ್ ನಂತರ ಹಬ್ಬಿದ್ದ ಗಾಳಿ ಸುದ್ದಿಗೆ ಚಂದನ್ ಶೆಟ್ಟಿ ಹಾಗೂ ನಟಿ ಸಂಜನಾ ಬ್ರೇಕ್‌ಹಾಕಿದದ್ದಾರ. ನಿವೇದಿತಾ ಗೌಡ ಜೊತೆ ಡಿವೋರ್ಸ್ ಆದ ಬಳಿಕ ಚಂದನ್ ಸಂಜನಾ‌ ಮದುವೆ ಆಗಲಿದ್ದಾರೆ ಅನ್ನೋ ಸುದ್ದಿ ಸೋಶಿಯಲ್‌ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿತ್ತು. ಈ ಬಗ್ಗೆ ಹಿಂದೆಯೂ ಒಮ್ಮೆ ಸ್ಪಷ್ಟನೆ ನೀಡಿದ್ದ ಸಂಜನಾ ಹಾಗೂ ಚಂದನ್‌ ಈಗ ಮತ್ತೊಮ್ಮೆ ಮಾಧ್ಯಮಗಳ ಎದುರೇ ಕ್ಲಾರಿಟಿ ನೀಡಿದ್ದಾರೆ. ಈ ರೂಮರ್ಸ್ ಗೆ ಸೂತ್ರಧಾರಿ ವೇದಿಕೆಯಲ್ಲಿ ಚಂದನ್ ಹಾಗೂ ಸಂಜನಾ ಸ್ಪಷ್ಟನೆ ನೀಡಿದ್ದಾರೆ.

ನಾನು ಸಂಜನಾ ಜೊತೆ ಡ್ಯಾಶ್ ಸಾಂಗ್ ಮಾಡಿದೆ. ಆ ಬಳಿಕ ನನ್ನ ಜೀವನದಲ್ಲಿ ಏನೋನೋ ಆಗಿ ಹೋಯಿತು. ನಾನು ಸಂಜನಾ ಮದುವೆ ಆಗುತ್ತೇವೆ ಅಂತ ಎಲ್ಲಾ ಕಡೆ ವೈರಲ್ ಆಗಿತ್ತು. ನನ್ನ ಸ್ನೇಹಿತರು ನನಗೆ ಕಾಲ್ ಮಾಡಿ ನೀನು ಮತ್ತು ಸಂಜನಾ ಮದುವೆ ಆಗುತ್ತಿದ್ದೀರಾ ಎಂದೆಲ್ಲಾ ಕೇಳಿದ್ದರು. ನನ್ನ ಮದುವೆ ಬಗ್ಗೆ ನನಗೆ ಗೊತ್ತಿಲ್ಲ ಬೇರೆ ಎಲ್ಲರೂ ಮಾತನಾಡುತ್ತಿದ್ದರು ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ. ನಮ್ಮ ನಡುವೆ ರೀತಿಯ ವಿಷ್ಯ ಏನು ಇಲ್ಲ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

'ಮತ್ತೆ ನನ್ ಲೈಫಲ್ಲಿ ಬರಬೇಡ, ಗುಡ್ ಬೈ..' ಹೇಳಿ ಹೊರಟ ಚಂದನ್ ಶೆಟ್ಟಿ: ಏನಿದು BIG ಹಲ್‌ಚಲ್..?!

ಚಂದನ್ ಶೆಟ್ಟಿ ಜೊತೆ ಮದುವೆ ಅನ್ನೋ ವಿಚಾರಕ್ಕೆ ಕ್ಲಾರಿಟಿ ಸಂಜನಾ ಕೂಡ ಕ್ಲಾರಿಟಿ ನೀಡಿದ್ದಾರೆ. ನಮ್ಮ ನಡುವೆ ಆ ರೀತಿಯ ಏನು ಇಲ್ಲ ನಾವು‌ ಒಳ್ಳೆ ಫ್ರೆಂಡ್ಸ್ ಎಲ್ಲದಕ್ಕೂ ಮೀರಿ ಚಂದನ್ ನನಗೆ ಬ್ರದರ್ ಇದ್ದ ಹಾಗೆ ಎಂದು ಸಂಜನಾ ಹೇಳಿದ್ದಾರೆ.

ನನಗೆ, ನಿನಗೆ ಸಂಬಂಧ ಕಲ್ಪಿಸಿದ್ರೆ ನಾನ್‌ ಏನ್‌ ಮಾಡಲಿ?‌ ಬಹುಮುಖ್ಯವಾದ ಗಾಸಿಪ್‌ ಬಗ್ಗೆ ಸೃಜನ್‌ ಲೋಕೇಶ್ ಮಾತು!