ಬ್ರಹ್ಮಗಂಟು ಧಾರಾವಾಹಿಯಲ್ಲಿ, ಅತ್ತಿಗೆಯ ಮಾತು ಕೇಳಿ ಅಪ್ಪನನ್ನು ದ್ವೇಷಿಸುವ ಚಿರುಗೆ ಅಪ್ಪನ ಪ್ರೀತಿ ಅರ್ಥ ಮಾಡಿಸಲು ದೀಪಾ ಪ್ರಯತ್ನಿಸುತ್ತಿದ್ದಾಳೆ. ವೀಕ್ಷಕರು ಚಿರುಗೆ ಅಹಂಕಾರ ಬಿಟ್ಟು ಅಪ್ಪನ ಪ್ರೀತಿ ಅನುಭವಿಸುವಂತೆ ಬುದ್ಧಿ ಹೇಳುತ್ತಿದ್ದಾರೆ.

ಬೆಂಗಳೂರು (ಮಾ.10): ಬ್ರಹ್ಮಗಂಟು ಧಾರಾವಾಹಿಯಲ್ಲಿ ಚಿರಾಗ್ ತನ್ನ ಅತ್ತಿಗೆಯ ನಾಟಕದ ಪ್ರೀತಿಗೆ ಕುರುಡಾಗಿ ಅಪ್ಪನ ಪ್ರೀತಿಯನ್ನು ಮರೆದು ದ್ವೇಷ ಸಾಧಿಸುತ್ತಿದ್ದಾರೆ. ಆದರೆ, ಇದೀಗ ಚಿರು ಹೆಂಡತಿ ದೀಪಾ ಅಪ್ಪನ ಪ್ರೀತಿ ಅರ್ಥ ಮಾಡಿಸೋಕೆ ಒಂದೇ ಕೋಣೆಯಲ್ಲಿ ಕೂಡಿ ಹಾಕಿದ್ದಾಳೆ. ಚಿರುಗೆ ಅವರ ಅಪ್ಪ ರಾಜಶೇಖರ್ ಮನಸ್ಸಲ್ಲಿ ಇದ್ದುದನ್ನೆಲ್ಲಾ ಬಿಚ್ಚಿಟ್ಟಿದ್ದಾನೆ. ಇದರ ಬೆನ್ನಲ್ಲಿಯೇ ಧಾರಾವಾಹಿ ವೀಕ್ಷಕರು ಚಿರುಗೆ ಅಹಂಕಾರ ಬಿಟ್ಟು ಅಪ್ಪನ ಪ್ರೀತಿ ಅನುಭವಿಸುವಂತೆ ಬುದ್ಧಿ ಹೇಳಿದ್ದಾರೆ.

ಬ್ರಹ್ಮಗಂಟು ಧಾರಾವಾಹಿಯಲ್ಲಿ ಆರಂಭದಿಂದಲೇ ಅಪ್ಪ ರಾಜಶೇಖರ್ ಹಾಗೂ ಮಗ ಚಿರಾಗ್ ನಡುವೆ ಮಾತುಕತೆಯೇ ಇರುವುದಿಲ್ಲ. ಇದಕ್ಕೆ ಕಾರಣ ಚಿರಾಗ್ ಅವರ ಅಮ್ಮ ತೀರಿಕೊಂಡಾಗ ನೋವಿನಲ್ಲಿದ್ದ ಮಗನನ್ನು ಹೋಳಿ ಹಬ್ಬದ ದಿನವೇ ಹಾಸ್ಟೆಲ್‌ಗೆ ಸೇರಿಸಿ ಬಂದಿರುತ್ತಾನೆ. ಅಪ್ಪನಿಗೆ ಹೋಳಿಯ ಹಬ್ಬದ ಬಣ್ಣವನ್ನು ಹಚ್ಚಿ ಹಬ್ಬ ಮಾಡಬೇಕೆಂದಿದ್ದ ಚಿರಾಗ್‌ ಅನ್ನು ಹಾಸ್ಟೆಲ್‌ಗೆ ಸೇರಿಸಿದ್ದರಿಂದ ಕೋಪಗೊಂಡು ಮಾತನಾಡುವುದನ್ನೇ ಬಿಟ್ಟಿರುತ್ತಾನೆ. ಮನೆಯ ಪ್ರೀತಿ ಸಿಗದಂತೆ ಮಾಡಿದ್ದ ಅಪ್ಪನನ್ನು ದ್ವೇಷ ಮಾಡಲು ಆರಂಭಿಸುತ್ತಾನೆ. ನಂತರ ಚಿರು ಅವರ ದೊಡ್ಡ ಅಣ್ಣ ಗುರುದತ್‌ಗೆ ಸೌಂದರ್ಯ ಜೊತೆಗೆ ಮದುವೆ ಆಗುತ್ತದೆ. ಆಗ ಸೌಂದರ್ಯ ತನ್ನ ಕುತಂತ್ರ ಬುದ್ಧಿಯನ್ನು ಉಪಯೋಗಿಸಿ ಚಿರುಗೆ ತಾಯಿ ಪ್ರೀತಿ ತೋರಿಸಿದಂತೆ ಮಾಡಿ, ಅಪ್ಪ-ಮಗನ ನಡುವೆ ದ್ವೇಷದ ಬೀಜ ಬಿತ್ತುತ್ತಾಳೆ. ಇದೀಗ ಅಪ್ಪನನ್ನು ಕಂಡರೆ ಮಗ ಚಿರು ದ್ವೇಷ ಕಾರುತ್ತಾನೆ.

ಪೊಲೀಸ್ ಕಾನ್ಸ್‌ಸ್ಟೇಬಲ್ ಜಯರಾಮ್‌ ಅವರ ದೊಡ್ಡ ಮಗಳು ರೂಪಾಳನ್ನು ಚಿರು ನೋಡಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ ಆಕೆ ನಟಿಯಾಗಬೇಕೆಂಬ ಆಸೆಯಿಂದ ಮದುವೆ ನಿರಾಕರಿಸಿ ಪ್ರೀತಿಸಿದ ಹುಡುಗನೊಂದಿಗೆ ಮನೆಯಲ್ಲಿದ್ದ ಹಣ, ಆಭರಣ ದೋಚಿಕೊಂಡು ಪರಾರಿ ಆಗುತ್ತಾಳೆ. ಆದರೆ, ಈ ಪರಿಸ್ಥಿತಿಯಲ್ಲಿ ದೀಪಾ ಚಿರು ಅವರನ್ನು ಮದುವೆ ಮಾಡಿಕೊಂಡು ಬರುತ್ತಾಳೆ. ಒಳ್ಳೆಯ ಮನಸ್ಸಿನ ದೀಪಾ ಹೋಳಿ ಹಬ್ಬದಂದು ಗಂಡ ಚಿರುಗೆ ಬಣ್ಣ ಹಚ್ಚಿ ಬೈಸಿಕೊಂಡು ಬರುತ್ತಾಳೆ. ಆಗ ಅಪ್ಪ-ಮಗನ ನಡುವೆ ನಡೆದ ಘಟನೆಯನ್ನು ತಿಳಿದು ಇಬ್ಬರನ್ನೂ ಒಂದು ಮಾಡುವುದಕ್ಕೆ ಪ್ಲ್ಯಾನ್ ಮಾಡಿ ಒಂದೇ ಕೋಣೆಯಲ್ಲಿ ಕೂಡಿ ಹಾಕುತ್ತಾಳೆ.

ಇದನ್ನೂ ಓದಿ: ಡಾಲಿ ಧನಂಜಯ ಜೊತೆ ಮೇಘನಾ ರಾಜ್ ಮದುವೆ ವದಂತಿ: ಸತ್ಯಾಂಶ ಬಿಚ್ಚಿಟ್ಟ ನಟಿ!

ಆಗ ರಾಜಶೇಖರ್ ತನ್ನ ಮಗ ಚಿರು ಮುಂದೆ ತಾನು ಮಾಡಿದ್ದನ್ನು ಹೇಳಿಕೊಂಡು, ಮನಸ್ಸಿನಲ್ಲಿರುವುದನ್ನು ತಿಳಿಸುತ್ತಾನೆ. ಆಗಲೂ ಚಿರಾಗ್ ಮನಸ್ಸು ಕರಗದಿದ್ದಾಗ ಕಾಲು ಹಿಡಿಯಲೂ ಮುಂದಾದಾಗ ಬಾಗಿಲು ತೆಗೆದು ಹೊರಗೆ ಹೋದ ಚಿರಾಗ್ ತಾನು ಇಟ್ಟಿದ್ದ ಬಣ್ಣದ ಡಬ್ಬಿಯಿಂದ ಅಪ್ಪನಿಗೆ ಬಣ್ಣವನ್ನು ಹಚ್ಚುತ್ತಾನೆ. ಇದಾದ ನಂತರ ಅಪ್ಪ-ಮಗ ಒಂದಾಗಿ ಪ್ರೀತಿಯಿಂದ ಇರುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಧಾರಾವಾಹಿ ವೀಕ್ಷಕರು ಮಾತ್ರ ಚಿರಾಗ್‌ಗೆ ನಿನ್ನ ಅಹಂಕಾರ ಬಿಟ್ಟು ಅಪ್ಪನ ಪ್ರೀತಿ ಒಪ್ಪಿಕೊಳ್ಳುವಂತೆ ಬುದ್ಧಿ ಹೇಳಿದ್ದಾರೆ.

View post on Instagram