Asianet Suvarna News Asianet Suvarna News

ಅಮಾಯಕನ ವೇಷ ಹಾಕ್ಕೊಂಡು ಪ್ರತಾಪ್​ ಬೂದಿ ಎರೆಚ್ತಾನೆ: ವಿನಯ್​- ಡ್ರೋನ್​ ಮಾತಿನ ಚಕಮಕಿ!

ಡ್ರೋನ್​ ಪ್ರತಾಪ್​ ಮತ್ತು ವಿನಯ್​ ನಡುವೆ ಭಾರಿ ಜಗಳಕ್ಕೆ ಸಾಕ್ಷಿಯಾದ ಬಿಗ್​ಬಾಸ್​. ಮುಂದೇನಾಯ್ತು? ಪ್ರೊಮೋ ರಿಲೀಸ್​ 
 

Bigg Boss witnessed a huge fight between Drone Pratap and Vinay suc
Author
First Published Jan 8, 2024, 2:26 PM IST

ಬಿಗ್​ಬಾಸ್​ ಮನೆಯಲ್ಲಿ ಇರುವ ಹಾಲಿ ಸ್ಪರ್ಧಿಗಳ ಪೈಕಿ ಪ್ರಬಲ ಸ್ಪರ್ಧಿ ಎಂದೇ ಬಿಂಬಿಸಲಾಗುತ್ತಿರುವ ಡ್ರೋನ್​ ಪ್ರತಾಪ್​ ಮೊನ್ನೆ ಇದ್ದಕ್ಕಿದ್ದಂತೆಯೇ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದು ಆತ್ಮಹತ್ಯೆಗೆ ಪ್ರಯತ್ನ ಎಂದೂ ಭಾರಿ ಸದ್ದು ಮಾಡಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿನ ವೈದ್ಯರು ಅನಾರೋಗ್ಯದ ಕಾರಣ ಕೊಟ್ಟು, ಇದು ಆತ್ಮಹತ್ಯೆಗೆ ಪ್ರಯತ್ನವೇನೂ ಅಲ್ಲ, ಆಹಾರದಲ್ಲಿ ವ್ಯತ್ಯಾಸವಾಗಿ ಫುಡ್​ ಪಾಯ್ಸನ್​ ಆಗಿದೆ ಅಷ್ಟೇ ಎಂದು ಸ್ಪಷ್ಟನೆ ಕೊಟ್ಟರು. ಆದರೂ ಇವರಿಗೆ ಏನಾಯಿತು ಎನ್ನುವ ಬಗ್ಗೆ ಅಭಿಮಾನಿಗಳಿಗೆ ಇನ್ನೂ ಗೊಂದಲವಿದ್ದೇ ಇದೆ. ಕೆಲವರು ಆತ್ಮಹತ್ಯೆ ಎಂದರು, ಇನ್ನು ಕೆಲವರು ಫುಡ್​ ಪಾಯಿಸನ್​ ಎಂದರು, ಮತ್ತೆ ಕೆಲವರು  ಉಳಿದ ಸ್ಪರ್ಧಿಗಳು ಇವರನ್ನು ಕಡೆಗಣಿಸಿದ್ದಕ್ಕೆ ಬೇಸರವಾಗಿತ್ತು ಎಂದರೆ, ಇನ್ನೂ ಕೆಲವರು ಪಾಲಕರಿಂದ ದೂರ ಇರುವಂತೆ ಸ್ವಾಮೀಜಿ ಹೇಳಿದ ಕಾರಣ ಮನನೊಂದುಕೊಂಡಿದ್ದರೆ ಪ್ರತಾಪ್​ ಅಸ್ವಸ್ಥಗೊಂಡರು ಎಂದು ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಗಳೂ ಶುರುವಾದವು.

ಅದಾದ ಬಳಿಕ ಫುಡ್​ ಪಾಯಿಸನ್​ನಿಂದ ತಾವು ಅಸ್ವಸ್ಥರಾಗಿರುವುದಾಗಿ ಪ್ರತಾಪ್​ ಹೇಳಿಕೊಂಡರು. ಇದೀಗ ಅವರ ಬಿಗ್​ಬಾಸ್​ ಮನೆಗೆ ವಾಪಸಾಗಿದ್ದಾರೆ. ಅವರು ಮನೆಗೆ ವಾಪಸಾಗುತ್ತಿದ್ದಂತೆಯೇ ಉಳಿದ ಸ್ಪರ್ಧಿಗಳು ಅವರನ್ನು ಖುಷಿಯಿಂದಲೇ ಬರಮಾಡಿಕೊಂಡರು. ಆದರೆ ಇದೀಗ ಬಿಗ್​ಬಾಸ್​ ಮನೆಯಲ್ಲಿ ವಿನಯ್​ ಮತ್ತು ಡ್ರೋನ್​ ಪ್ರತಾಪ್​ ಮಾತಿನ ಚಕಮಕಿ ನಡೆದಿದೆ. ಸ್ಪರ್ಧಿಗಳು  ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಈ ಚಕಮಕಿ ಶುರುವಾಗಿದೆ.

ಪ್ರತಾಪ್ ನಿಜಕ್ಕೂ ಆತ್ಮಹತ್ಯೆಗೆ ಯತ್ನಿಸಿದ್ರಾ? ಅಂದು ಏನಾಗಿತ್ತೆಂದು ಸಂಪೂರ್ಣ ಮಾಹಿತಿ ನೀಡಿದ ಡ್ರೋನ್​

ಮೊದಲಿನಿಂದಲೂ ಸ್ವಲ್ಪ ಒರಟು ಸ್ವಭಾವದವರು ಎಂದೇ ಬಿಗ್​ಬಾಸ್​ ವೀಕ್ಷಕರಿಂದ ಆರೋಪ ಹೊತ್ತಿರುವ ವಿನಯ್​ ಅವರು, ಪ್ರತಾಪ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ‘ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ಆವೇಷ ಭರಿತವಾಗಿ ಹೇಳಿದ್ದಾರೆ. ಅಲ್ಲಿಯವರೆಗೆ ಸುಮ್ಮನೆ ಇದ್ದ ಪ್ರತಾಪ್​ ಇದನ್ನು ಕೇಳುತ್ತಲೇ ವಿನಯ್​ ವಿರುದ್ಧ ಕಿಡಿ ಕಾರಿದರು. ನೀವು ಅನ್ನುವ ಹಾಗೆ ಅನ್ನಿಸಿಕೊಳ್ಳಲು ಆಗುವುದಿಲ್ಲ, ಪರಿಣಾಮನೂ ನೆಟ್ಟಗಿರಲ್ಲ ಎಂದಿದ್ದಾರೆ.

ಆಗ ಅದಕ್ಕೆ ಮತ್ತೆ ತಿರುಗೇಟು ನೀಡಿದ ವಿನಯ್​ ಅವರು, ಏನ್​  ಮಾಡ್ತಿಯಾ ನೀನು ಅಂದಿದ್ದಾರೆ.  ಆಗ ಪ್ರತಾಪ್​, ಎದುರಿಗೆ ಬಂದು ಆವೇಷಭರಿತರಾಗಿ ಮೊದಲು ನೀಟಾಗಿ  ಮಾತಾಡುವುದನ್ನು ಕಲಿತುಕೊಳ್ಳಿ.  ನಾನು ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ ಎಂದಾಗ ಮತ್ತಷ್ಟು ರೊಚ್ಚಿಗೆದ್ದ ವಿನಯ್​,  ‘ನೀನು ನನಗೆ ಹೇಳಿಕೊಡಬೇಕಾಗಿಲ್ಲ. ಹೋಗಲೇ’ ಎಂದಿದ್ದಾರೆ. ಈ ಸಂದರ್ಭದಲ್ಲಿ ತುಕಾಲಿ ಸಂತೋಷ್​ ಮತ್ತು ಸಂಗೀತಾ  ಸೇರಿಕೊಂಡು ಜಗಳ ತಪ್ಪಿಸಲು ಯತ್ನಿಸಿದ್ದಾರೆ. ಇದರ ಪ್ರಮೋ ರಿಲೀಸ್​ ಆಗಿದೆ.  ಈ ಜಗಳ ಯಾಕೆ ಶುರುವಾಯ್ತು, ಹೇಗೆ ಶುರುವಾಯ್ತು ಎನ್ನುವ ಕುತೂಹಲ ತಣಿಯಲು ಬಿಗ್​ಬಾಸ್​ ನೋಡಬೇಕಿದೆ. 

ಆಸ್ಪತ್ರೆಯಿಂದ ಬಿಗ್​ಬಾಸ್​ ಮನೆಗೆ ಮರಳಿದ ಪ್ರತಾಪ್​ಗೆ ಅದ್ಧೂರಿ ಸ್ವಾಗತ: ಡ್ರೋನ್​ ಮೊಗದಲ್ಲಿ ನೋವು!

Follow Us:
Download App:
  • android
  • ios