ಬಿಗ್‌ ಬಾಸ್ ವಿನ್ನರ್ ಕಾರ್ತಿಕ್‌ಗೆ ನಿಂಗಿದು ಬೇಕಿತ್ತಾ ಮಗನೇ ಎಂದ ಅಭಿಮಾನಿಗಳು; ಫುಲ್ ಡಿಸ್‌ರೆಸ್ಪೆಕ್ಟ್‌ ಗುರೂ..!

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ವಿಡಿಯೋ ನೋಡಿದ ನೆಟ್ಟಿಗರು 'ನಿಂಗಿದು ಬೇಕಿತ್ತಾ ಮಗನೇ, ವಾಪಾಸು ಹೊಂಟೋಗು ಶಿವನೇ' ಎಂದು ಕಮೆಂಟ್ ಮಾಡಿದ್ದಾರೆ.

Bigg Boss winner Karthik Mahesh meets DCM DK Shivakumar then he faced disrespect sat

ಬೆಂಗಳೂರು (ಫೆ.16): ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಹೋದಾಗ ಯಾವುದೇ ಮರ್ಯಾದೆ ಸಿಗದೇ ಕಣ್ಣು-ಬಾಯಿ ಬಿಟ್ಟು ನೋಡುತ್ತಾ ನಿರಾಶೆರಾಗಿ ನಿಂತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು 'ನಿಂಗಿದು ಬೇಕಿತ್ತಾ ಮಗನೇ, ವಾಪಾಸು ಹೊಂಟೋಗು ಶಿವನೇ' ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮಿಲಿಟರಿಗೆ ಹೋಗಿ ಯುದ್ಧ ಗೆದ್ದು ಬಂದವನ ರೀತಿ ಪೋಸು ಕೊಟ್ತಾನೆ ಎಂದು ಸರಿಯಾಗಿ ಆಗಿದೆ ಎಂದು ಕಾಲೆಳೆದಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ವಿನ್ನರ್ ಕಾರ್ತಿಕ್ ಮಹೇಶ್ (Bigg Boss Kannada Season 10 Reality Show Winner Karthik Mahesh) ಅವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (Chief minister Siddaramaiah) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DCM DK Shivakumar) ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಾರ್ತಿಕ್ ಮಹೇಶ್‌ ಜೊತೆಗೆ ನೆಪ ಮಾತ್ರಕ್ಕೆ ಫೋಟೋ ಪೋಸ್ ಕೊಟ್ಟಿದ್ದಾರೆ.  ಆಗ ಏನು ಹೆಸರು ನಿಂದು ಅಂತಲೂ ಕೇಳಿದ್ದಾರೆ. ಆಗ ಕಾರ್ತಿಕ್ ಜೊತೆಗೆ ಬಂದವರು ಬಿಗ್ ಬಾಸ್ ವಿನ್ನರ್ ಆಗಿರುವ ಕಾರ್ತಿಕ್ ಎಂದು ತಿಳಿಸಿದ್ದಾರೆ. ಅಂದರೆ, ಕಾರ್ತಿಕ್ ಬಗ್ಗೆ ಅವರಿಗೆ ಒಂದಿನಿತೂ ಮಾಹಿತಿ ಇರಲಿಲ್ಲ ಎಂಬುದು ತಿಳಿದುಬಂದಿದೆ. ನಂತರ, ಕಾರ್ತಿಕ್‌ ಬಗ್ಗಿ ಆಶೀರ್ವಾದ ಪಡೆಯಲು ಬಗ್ಗುತ್ತಿದ್ದಂತೆ ಅಲ್ಲಿಂದ ಡಿ.ಕೆ. ಶಿವಕುಮಾರ್ ಬ್ಯಾಗ್ ಹಿಡಿದು ಹೊರಟು ಹೋಗಿದ್ದಾರೆ.

ನಟಿ ತ್ರಿಶಾ, ಅನುಪಮಾರನ್ನು ಫಾಲೋ ಮಾಡಿದ ಜ್ಯೋತಿ ರೈ; ಅದೃಷ್ಟಕ್ಕಾಗಿ ಎದೆ ಮೇಲೆ ಟ್ಯಾಟೋ ಹಾಕಿಸಿದಳಾ?

ಕಾರ್ತಿಕ್ ಮಹೇಶ್ ಅವರು ಹೀಗೆ ಹ್ಯಾಪ್‌ ಮೋರೆ ಹಾಕೊಂಡು ಡಿ.ಕೆ. ಶಿವಕುಮಾರ್ ಅವರನ್ನು ನೋಡುತ್ತಾ ನಿಂತಿದ್ದಾರೆ. ಈ ವೀಡಿಯೋ ಸುದ್ದಿ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೆಚ್ಚು ಶೇರ್ ಆಗಿದೆ. ಈ ವಿಡಿಯೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ (Social Midea instagram) ಹಂಚಿಕೊಂಡಿರುವ ಬಿಸಿಲುನಾಡು ಹುಡುಗ ಮೇಮ್ಸ್ (bisalu_nadu_hudaga_memes) ಎನ್ನುವ ಖಾತೆಯವರು ಕಾರ್ತಿಕ್‌ ಅವರನ್ನು ಲೇವಡಿ ಮಾಡಿದ್ದಾರೆ. ನಿಂಗೆ ರೆಸ್ಪೆಕ್ಟ್‌ ಇಲ್ವಾ ಗುರು ಎಂದು ಟ್ಯಾಗ್‌ಲೈನ್‌ ಕೂಡ ಹಾಕಿದ್ದಾರೆ. ಕಾರ್ತಿಕ್ ಅಣ್ಣಾ ಅಲ್ಲಿಗೆ ಹೋಗೋದು ಬೆಡವಾಗಿತ್ತೇನೋ ಎಂದು ಹೇಳಿದ್ದಾರೆ.

ಈ ವಿಡಿಯೋಗೆ ಭಾರಿ ಕಮೆಂಟ್‌ಗಳು ಕೂಡ ಬಂದಿವೆ. ಶರತ್ ಎನ್ನುವವರು ಅಲ್ಲಿ ಏನಾಯ್ತು ಅಂದ್ರೆ ಬಿಗ್ ಬಾಸ್ ಮನೆಗೆ ಹೋಗಿ ದೊಡ್ಡ ಸಾಧನೆ ಮಾಡಿದ್ನಾ ಅವನು ಕಪ್ಪು ತಕೊಂಡು ಹೋಗಿ ಎಲ್ಲರಿಗೂ ತೋರಿಸಲಿಕ್ಕೆ.. ಏನೋ ಮಿಲಿಟರಿಗೆ ಹೋಗಿ ಬಂದಂಗೆ ಅಂತಾ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇವನೇನು ದೊಡ್ಡ ವರ್ಲ್ಡ್‌ ಕಪ್ ಗೆದ್ದವನ ತರ ಆಡ್ತಿದಾನೆ ಎಂದಿದ್ದಾರೆ. ಇನ್ನು ಕೆಲವರು ಈ ವಿಡಿಯೋ ಡಿಲೀಟ್ ಮಾಡಿ ಎಂದು ಮನವಿ ಮಾಡಿದ್ದಾರೆ. 

200 ಯುನಿಟ್ ಫ್ರೀ ವಿದ್ಯುತ್ ಕೊಟ್ಟ ಸರ್ಕಾರದಿಂದ ನೀರಿನ ಬಿಲ್ ಹೆಚ್ಚಳಕ್ಕೆ ಚಿಂತನೆ: ಡಿ.ಕೆ. ಶಿವಕುಮಾರ್ ಸುಳಿವು

ಕಾರ್ತಿಕ್ ಮಹೇಶ್ ಅವರು ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಅವರು, ಕಾರ್ತಿಕ್‌ನ ಪಕ್ಕದಲ್ಲಿ ನಿಂತುಕೊಂಡು ಬಿಗ್ ಬಾಸ್ ವಿನ್ನಿಂಗ್ ಕಪ್‌ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ. ಆದರೆ, ಸಿಎಂ ಸಿದ್ದರಾಮಯ್ಯ ಕಾರ್ತಿಕ್ ಬಗ್ಗೆ ಯಾರಿವರು? ಏನಕ್ಕೆ ಬಂದಿದ್ದಾರೆ ಎಂದು ಸೂಕ್ಷ್ಮವಾಗಿ ತಿಳಿದುಕೊಂಡು ಸೌಜನ್ಯಕ್ಕಾದರೂ ಅವರೊಂದಿಗೆ ಪೋಸ್‌ ಕೊಟ್ಟು ಕೆಲ ಸಮಯ ಕಳೆದಿದ್ದಾರೆ. ಇದರಿಂದ ಕಾರ್ತಿಕ್ ಹಾಗೂ ಅವರೊಂದಿಗೆ ಬಂದಿದ್ದವರಿಗೂ ಖುಷಿಯಾಗಿದೆ. ಈ ಈ ವೇಳೆ ಭಾ.ಮ.ಹರೀಶ್, ಉಲ್ಲಾಸ್​ ಗೌಡ ಕೂಡ ಹಾಜರಿದ್ದರು. ಇದೇ ಖುಷಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಹೋದಾಗ ಅಗೌರವ ಸಿಕ್ಕಿದೆ.

Latest Videos
Follow Us:
Download App:
  • android
  • ios