ಅನ್‌ಲೈನ್‌ ಮೂಲಕ ಮನೆಯಲ್ಲಿಯೇ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ವೈಜಯಂತಿ ಅಡಿಗ. 

'ಅಮ್ಮಚ್ಚಿ ಎಂಬ ನೆನಪು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ವೈಜಯಂತಿ ಮನೆಯಲ್ಲಿಯೇ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆನ್‌ಲೈನ್‌ ನಿಶ್ಚಿತಾರ್ಥಕ್ಕೆ ಎರಡೂ ಕುಟುಂಬದವರು ಸಾಕ್ಷಿಯಾಗಿದ್ದರು.

Biggboss ಸದಸ್ಯರ ಜೊತೆಗಿನ ಭೇಟಿಗೆ ನಾನು ಸಿದ್ಧ: ವೈಜಯಂತಿ ಅಡಿಗ

ನಟಿ ಹಾಗೂ ಹೋಟೆಲ್‌ ಉದ್ಯಮಿ ವೈಜಯಂತಿ ಬಹು ದಿನಗಳ ಗೆಳೆಯ ಸೂರಜ್‌ ಸಂಜಯ್‌ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೂರಜ್‌ ವಿದೇಶದಲ್ಲಿರುವ ಕಾರಣ ವರ್ಚ್ಯುವಲ್ ಶಾಸ್ತ್ರ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಜೊತೆ ಲಗ್ನ ಪತ್ರಿಕೆ ಬರೆಸುವ ಶಾಸ್ತ್ರವನ್ನೂ ಮಾಡಿದ್ದಾರೆ. ಶಾಸ್ತ್ರದ ಫೋಟೋ ಹಾಗೂ ವಿಡಿಯೋಗಳನ್ನು ವೈಜಯಂತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲಗ್ನ ಪತ್ರಿಕೆ ಬರೆಯುವಾಗ ವೈಜಯಂತಿ ಹಾಡು ಹಾಡಿದ್ದಾರೆ. 

ಬಿಗ್ ಬಾಸ್ ಸೀಸನ್ 8ರ ಮೊದಲ ಇನ್ನಿಂಗ್‌ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ವೈಜಯಂತಿ, ಮೂರೇ ದಿನಕ್ಕೆ ಹೊರ ಬಂದಿದ್ದರು. 'ಕುಟುಂಬದಿಂದ ದೂರ ಇರಲು ಸಾಧ್ಯವಾಗುತ್ತಿಲ್ಲ. ತುಂಬಾ ಕಷ್ಟವಾಗುತ್ತಿದೆ,' ಎಂದು ಹೇಳಿ ಶಮಂತ್‌ನನ್ನು ಸೇಫ್ ಮಾಡಿ ಹೊರ ಬಂದಿದ್ದರು. ಸೂರಜ್ ನೋಡಲು ಸೇಮ್ ಶಮಿ ಕಪೂರ್‌ ತರ ಇದ್ದಾರೆ ಎಂದು ನೆಟ್ಟಿಗರು ವೈಜಯಂತಿ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.

View post on Instagram