ಬಾಲ್ಯದಿಂದಲೂ ಒಟ್ಟಿಗೆ ಇರುವ ವಿನಯ್ ಮತ್ತು ಅಕ್ಷತಾ. ಪ್ರೀತಿ ಹುಟ್ಟಿದ್ದು ಹೇಗೆ?

ಹರ ಹರ ಮಹಾದೇವ ಖ್ಯಾತಿಯ ವಿನಯ್ ಗೌಡ ಮತ್ತು ಪತ್ನಿ ಅಕ್ಷತಾ ಹಲವು ವರ್ಷಗಳಿಂದ ಪ್ರೀತಿಸಿ ಮದುವೆ ಮಾಡಿಕೊಂಡರು. ಹೈಸ್ಕೂಲ್‌ ಓದುತ್ತಿರುವ ಮಗನಿರುವ ಈ ಕಪಲ್‌ ತಮ್ಮ ಲವ್ ಸ್ಟೋರಿಯನ್ನು ಹಲವು ಸಲ ಹಂಚಿಕೊಂಡಿದ್ದಾರೆ. 

'ಅಕ್ಷತಾ ಮತ್ತು ನಾನು ಬಾಲ್ಯದಿಂದ ಸ್ನೇಹಿತರು. ಆಕೆ ಚಿಕ್ಕಮಗಳೂರಿನಲ್ಲಿದ್ದರು, ನನ್ನ ತಂದೆ ಏರಿಯಾಗೆ ಹೋಗುವಾಗ ನಾನು ಜೊತೆಯಲ್ಲಿ ಹೋಗುತ್ತಿದ್ದೆ. ಆಗ ಆಕೆಯನ್ನು ಭೇಟಿ ಮಾಡಿದೆ, ಅಲ್ಲಿಂದ ಶುರುವಾಯ್ತು' ಎಂದು ವಿನಯ್ ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ. 'ಚಿಕ್ಕಮಗಳೂರಿನಲ್ಲಿ ಇರುವ ಪೊಲೀಸ್ ಕ್ವಾಟರಸ್‌ನಲ್ಲಿ ಅಕ್ಷತಾ ಉಳಿದುಕೊಂಡಿದ್ದಳು. ಆಗ ನಾನು ನೈಸ್‌ ರಸ್ತೆಯಲ್ಲಿ ಹೆಚ್ಚಿಗೆ ಬೈಕ್ ರೈಡ್ ಮಾಡುತ್ತಿದ್ದೆ, ಕಾರಣ ಅಕೆಯನ್ನು ಭೇಟಿ ಮಾಡಬಹುದು ಎಂದು. ನನ್ನ ಹೆಂಡತಿ ಅವರ ತಂದೆ ತುಂಬಾನೇ ಸ್ಟರ್ಕ್ಟ್‌ ಆಗಿದ್ದರು. ಅಪ್ಪ ಮನೆಯಲ್ಲಿದ್ದಾಗ ಆಕೆ ಗೇಟ್ ಬಳಿ ನಿಂತುಕೊಂಡು ನನಗೆ ಹಾಯ್ ಹೇಳುತ್ತಿದ್ದಳು. ಆಗ ಮಾತನಾಡಿಸಲು ಆಗುತ್ತಿರಲಿಲ್ಲ' ಎಂದು ವಿನಯ್ ಹೇಳಿದ್ದಾರೆ. 

ತಂದೆ ಆಸ್ಪತ್ರೆಯಲ್ಲಿ ಜೀವ ಬಿಟ್ಟರು, ತಾಯಿ ಮತ್ತೊಂದು ಮದ್ವೆಯಾಗಿ ಖುಷಿಯಾಗಿದ್ದಾರೆ; ನೋವು ಬಿಚ್ಚಿಟ್ಟ ವಿನಯ್!

'ನಾವು ವರ್ಷಗಳಿಂದ ಸ್ನೇಹಿತರು ನನ್ನ ಸಂಬಂಧ ಆರ್ಗಾನಿಕ್ ಆಗಿ ಆಗಿದ್ದ ಕಾರಣ ಅಫೀಶಿಯಲ್ ಆಗಿ ಪ್ರಪೋಸಲ್‌ ನಮ್ಮಿಬ್ಬರ ನಡುವೆ ಆಗಿಲ್ಲ.ನನ್ನ ಮನೆ arterial roadನಲ್ಲಿ ಇತ್ತು, ಅಲ್ಲಿ ಮನೆ ಸಂಪೂರ್ಣವಾಗಿ ಕಟ್ಟಿ ನಾವು ಶಿಫ್ಟ್‌ ಆದ ಮೇಲೆ ನೈಸ್‌ ರಸ್ತೆಗಳು ನಮ್ಮ ಅಡ್ಡ ಆಗಿಬಿಟ್ಟಿತ್ತು. ಲಾಂಗ್ ಬೈಕ್ ರೈಡ್‌ಗಳು ಹೋಗುತ್ತಿದ್ದೆವು, ನಾನ್ ಸ್ಟಾಪ್ ಮಾತನಾಡುತ್ತಿದ್ದೆವು. ಬಹಳ ಹಿಂದೆ ಈ ರಸ್ತೆಗಳಲ್ಲಿ ಪಾನಿ ಪೂರಿಯಲ್ಲಾ ಇತ್ತು ಅದನ್ನು ತಿಂದು ಎಂಜಾಯ್ ಮಾಡಿದ್ದೀವಿ. ಟೋಲ್‌ ಗೇಟ್‌ ಬಂದ ಮೇಲೆ ಇಲ್ಲಿದ ಫುಡ್‌ ಟ್ರಕ್‌ ಕಾಲಿ ಮಾಡಿದರು' ಎಂದಿದ್ದಾರೆ ವಿನಯ್‌. 

ಬಟ್ಟೆ ಬರ್ತಿಲ್ಲ ಅಂತ ನೋವಿತ್ತು; ವರ್ತೂರ್ ಚಪ್ಪಲಿ, ವಿನಯ್ ಬಟ್ಟೆ ಸಹಾಯ ಮೆಚ್ಚಿದ ತುಕಾಲಿ ಸಂತೋಷ್!

'ಫ್ಯಾಮಿಲಿಯಲ್ಲಿ ಇದ್ದ ಸಮಸ್ಯೆಗಳಿಂದ ನಾವು ನಾಲ್ಕು ವರ್ಷಗಳ ಕಾಲ ಭೇಟಿ ಮಾಡಲು ಆಗುತ್ತಿರಲಿಲ್ಲ. ಆ ಸಮಯದಲ್ಲಿ ವಿನಯ್ ಮುಂಬೈನಲ್ಲಿ ವಾಸಿಸುತ್ತಿದ್ದರು ಆದರೂ ನಮ್ಮ ಪ್ರೀತಿ ಕಡಿಮೆ ಆಗಿರಲಿಲ್ಲ. ಅದಾದ ಮೇಲೆ ನಾವು ಮತ್ತೊಮ್ಮೆ ಸಂಪರ್ಕ ಮಾಡಲು ಶುರು ಮಾಡಿದೆವು ಅಲ್ಲಿಂದ ಹಿಂದೆ ತಿರುಗಿ ನೋಡಿಲ್ಲ. ಆರ್‌ಟಿ ನಗರದ ದೇವಸ್ಥಾನದಲ್ಲಿ ಮದುವೆ ಆಗಿತ್ತು. ಸಿಂಪಲ್ ಮದುವೆ ಆಗಿದ್ದ ಕಾರಣ ಕೆಲವರು ಮಾತ್ರ ಭಾಗಿಯಾಗಿದ್ದರು' ಎಂದು ಅಕ್ಷತಾ ಹೇಳಿದ್ದಾರೆ.