Asianet Suvarna News Asianet Suvarna News

ಬಿಡಣ್ಣ!! ಕಾಲಾಯ ತಸ್ಮೈ ನಮಃ ಅಷ್ಟೆ: ಜಗ್ಗೇಶ್‌ ಹೇಳಿಕೆಗೆ ಉತ್ತರ ಕೊಟ್ಟ ವರ್ತೂರ್ ಸಂತೋಷ್!

ಹುಲಿ ಉಗುರು ಬಗ್ಗೆ ಜಗ್ಗೇಶ್‌ ಹೇಳಿಕೆ. ವರ್ತೂರ್ ಸಂತೋಷ್ ರಿಯಾಕ್ಷನ್ ವೈರಲ್. 

Bigg Boss Varthur Santhosh reacts to Jaggesh statement about huli uguru vcs
Author
First Published Feb 19, 2024, 3:35 PM IST | Last Updated Feb 20, 2024, 10:29 AM IST

ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿ ವಿನ್ನರ್‌ಗಳ ಸರಿಸಮಕ್ಕೆ ಅಭಿಮಾನಿಗಳನ್ನು ಗಳಿಸಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ವರ್ತೂರ್ ಸಂತೋಷ್‌ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ನಿಜವಾದ ಹುಲಿ ಉಗುರು ಧರಿಸಿದ ಕಾರಣ ವರ್ತೂರ್ ಸಂತೋಷ್‌ನ ಹೊರ ಕಳುಹಿಸಿ ಅರೆಸ್ಟ್‌ ಮಾಡಿ ಹುಲಿ ಉಗುರನ್ನು ವಶಕ್ಕೆ ಪಡೆದುಕೊಂಡರು. ಅಲ್ಲಿಂದ ಯಾರೆಲ್ಲಾ ಹುಲಿ ಉಗುರು ಬಳಸುತ್ತಿದ್ದರು ಅವರನ್ನು ವಿಚಾರಣೆಗೆ ಒಳಪಡಿಸಿಕೊಂಡು ಅವರವರ ಬಳಿ ಇದ್ದ ಉಗುರು ನಿಜವಾಗಿದ್ದರೆ ಮಾತ್ರ ವಶ ಪಡಿಸಿಕೊಂಡರು.ಈ ಲಿಸ್ಟ್‌ನಲ್ಲಿ ನಟ ಜಗ್ಗೇಶ್ ಧರಿಸಿದ್ದ ಹುಲಿ ಉಗುರು ಕೂಡ ಇತ್ತು.

ತಾಯಿ ಪ್ರೀತಿಯಿಂದ ಕೊಟ್ಟ ಹುಲಿ ಉಗುರನ್ನು ಜಗ್ಗೇಶ್ ಧರಿಸಿರುವುದಾಗಿ ಬಹಿರಂಗವಾಗಿ ಅನೇಕ ಸಂದರ್ಶನಗಳಲ್ಲಿ ಒಪ್ಪಿಕೊಂಡಿದ್ದರು. ಅದನ್ನು ಸಾಕ್ಷಿಯಾಗಿ ಹಿಡಿದು ಹುಲಿ ಉಗುರನ್ನು ವಶಕ್ಕೆ ಪಡೆದರು. ಈ ವಿಚಾರದ ಬಗ್ಗೆ ರಂಗನಾಯಕ ಸಿನಿಮಾ ಪ್ರತಿಕಾಗೋಷ್ಠಿಯಲ್ಲಿ ಜಗ್ಗೇಶ್ ಮಾತನಾಡಿದ್ದರು. ಆಗ ಜಗ್ಗೇಶ್ ನೀಡಿದ ಹೇಳಿದ ಸಖತ್ ವೈರಲ್ ಆಗುತ್ತಿದೆ. ಘಟನೆ ಶುರುವಾಗಿತ್ತು ವರ್ತೂರ್‌ನಿಂದ ಹೀಗಾಗಿ ಇದರ ಬಗ್ಗೆ ಸಂತೋಷ್ ರಿಯಾಕ್ಟ್ ಮಾಡಿದ್ದಾರೆ.

ಸೊಳ್ಳೆ ಗುಯ್ಯಾ ಅನ್ನುತ್ತೆ, ಮೈಕ್‌ ಸಿಕ್ಕಿದೆ ಎಂತ ಏನೋ ಹೇಳ್ಬಾರ್ದು; ಟಾಂಗ್‌ ಕೊಟ್ಟು ತೊಡೆ ತಟ್ಟಿದ ವರ್ತೂರ್ ಸಂತೋಷ್!

'ಬಿಡಣ್ಣ..ಅವರು ಡೊಡ್ಡವರು. ನಾನು ಏನು ಹೇಳುತ್ತೇನೆ ಅಂದ್ರೆ ಕಾಲಾಯ ತಸ್ಮೈ ನಮಃ ಅಷ್ಟೇ. ಕೆಲವೊಂದಕ್ಕೆ ಉತ್ತರ ಕೊಡಬೇಕು, ಇನ್ನೂ ಕೆಲವು ಮಾತುಗಳಿಗೆ ಸೈಲೆಂಟ್‌ ಆಗಿದ್ದರೆ ಸಾಕು. ಉತ್ತರ ಸಿಕ್ಕಿಬಿಡುತ್ತದೆ' ಎಂದು ವರ್ತೂರ್ ಸಂತೋಷ್ ಹೇಳಿದ್ದಾರಂತೆ. 

ಬಟ್ಟೆ ಬರ್ತಿಲ್ಲ ಅಂತ ನೋವಿತ್ತು; ವರ್ತೂರ್ ಚಪ್ಪಲಿ, ವಿನಯ್ ಬಟ್ಟೆ ಸಹಾಯ ಮೆಚ್ಚಿದ ತುಕಾಲಿ ಸಂತೋಷ್!

'ಸುದೀಪ್‌ ಅಣ್ಣ ಹತ್ರ ಕೆಲವೊಂದನ್ನು ನಾನು ಕಲಿತಿದ್ದೇನೆ. ಸುದೀಪ್‌ ಅಣ್ಣ ಒಂದು ಮಾತು ಹೇಳ್ತಾರೆ. ವರ್ತೂರ್ ಅವ್ರೆ ಎಲ್ಲಾ ಟೈಮ್‌ನಲ್ಲೂ ಮಾತನಾಡಬೇಕು ಅಂತೇನಿಲ್ಲ. ಕೆಲವು ಸಲ ಮಾತನಾಡದೇ ಸುಮ್ಮನಿದ್ರೆ ಸಾಕು ಆ ಮೌನವೇ ಉತ್ತರ ನೀಡುತ್ತದೆ ಅಂತ. ಅಷ್ಟೇ ಸಾಕು ನನಗೆ/ ಕೆಲವು ಸಂದರ್ಭ ಜಾಗಗಳಲ್ಲಿ ಮಾತನಾಡಲೇಬೇಕು. ತೂಕದ ಜೊತೆ ತೂಕವನ್ನು ಅಳೆಯಬೇಕಾದರೆ ತೂಕಕ್ಕೆ ತೂಕ ಸರಿ ಇರಬೇಕು' ಎಂದಿದ್ದಾರೆ. 

Latest Videos
Follow Us:
Download App:
  • android
  • ios