ಬಿಗ್‌ಬಾಸ್ 'ಟಿಕೆಟ್ ಟು ಫಿನಾಲೆ' ಟಾಸ್ಕ್‌ನಲ್ಲಿ ಗೆದ್ದ ಡ್ರೋನ್‌ ಪ್ರತಾಪ್‌ ಅವರಿಗೆ ವಂಚಿಸಲಾಗಿದೆ ಎಂದು ಅಭಿಮಾನಿಗಳು ಜಸ್ಟೀಸ್‌ ಫಾರ್ ಡ್ರೋನ್ ಪ್ರತಾಪ್ ಅಭಿಯಾನ ಆರಂಭಿಸಿದ್ದಾರೆ.

ಬೆಂಗಳೂರು (ಜ.12): ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್ 10 ರಿಯಾಲಿಟಿ ಶೋ ಕಂಟೆಸ್ಟೆಂಟ್‌ ಡ್ರೋನ್ ಪ್ರತಾಪ್‌ ಅವರಿಗೆ ಬಿಗ್‌ಬಾಸ್ ಅನ್ಯಾಯ ಮಾಡಿದ್ದಾರೆ. ಫಿನಾಲೆ ಟಿಕೆಟ್ ಪಡೆಯುವುದಕ್ಕೆ ಡ್ರೋನ್‌ ಪ್ರತಾಪ್ ಅರ್ಹವಾಗಿದ್ದರೂ, ಬಿಗ್‌ಬಾಸ್ ಸಿಬ್ಬಂದಿ ವರಸೆ ಬದಲಿಸಿದೆ. ಕೇವಲ 3 ಜನರ ವೋಟಿಂಗ್ ಆಧರಿಸಿ ಸಂಗೀತಾ ಶೃಂಗೇರಿಗೆ ಫಿನಾಲೆ ಟಿಕೆಟ್‌ ಸಿಗುವಂತೆ ಮಾಡಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಸಾಮಾಜಿಕ ಜಾಲತಾಣದಲ್ಲಿ ಜಸ್ಟೀಸ್ ಫಾರ್ ಡ್ರೋನ್ ಪ್ರತಾಪ್‌ (JUSTICE FOR DRONE PRATHAP) ಎಂಬ ಅಭಿಯಾನ ಆರಂಭಿಸಿದ್ದಾರೆ.

ಬಿಗ್‌ಬಾಸ್ ಡ್ರೋನ್‌ ಪ್ರತಾಪ್‌ಗೆ ಅನ್ಯಾಯ ಮಾಡಿದ್ದೇಕೆ?
ಬಿಗ್ ಬಾಸ್’ ಮೇಲೆ ಒಂದು ದೊಡ್ಡ ಆರೋಪ ಬಂದಿದೆ. ಮಂಗಳವಾರದ ಎಪಿಸೋಡ್​ನಲ್ಲಿ ಬಿಗ್ ಬಾಸ್ ಕಡೆಯಿಂದ ಒಂದು ಘೋಷಣೆ ಆಗಿತ್ತು. 'ಫಿನಾಲೆ ವಾರಕ್ಕೆ ಕಾಲಿಡುವ ಮೊದಲ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೆ ಈ ವಾರದ ಟಾಸ್ಕ್ ಮುಗಿಯುವ ವೇಳೆಗೆ ಉತ್ತರ ಸಿಗಲಿದೆ. ಈ ವಾರ 'ಟಿಕೆಟ್​ ಟು ಫಿನಾಲೆ' (Ticket to Finale) ಟಾಸ್ಕ್ ರೂಪಿಸಲಾಗಿತ್ತು. ಎಲ್ಲ ಸ್ಪರ್ಧಿಗಳಿಗೆ ವೈಯಕ್ತಿಕ ಟಾಸ್ಕ್​ ನೀಡಲಾಗುತ್ತದೆ. ಟಾಸ್ಕ್​ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರು ಫಿನಾಲೆ ಟಿಕೆಟ್ ಪಡೆಯುತ್ತಾರೆ' ಎಂದು ಬಿಗ್ ಬಾಸ್ ಘೋಷಿಸಿದ್ದರು.

ಗಾರೆ ಕೆಲಸದ ಹುಡುಗಿಯನ್ನು ದತ್ತು ತೆಗೆದುಕೊಳ್ಳಲು ಮುಂದಾದ ಟಿಕ್‌ಟಾಕ್ ಸೋನು ಗೌಡ?

ಆದರೆ, ಅದರಂತೆ ಟಾಸ್ಕ್‌ನಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ಫಿನಾಲೆ ಟಿಕೆಟ್ ಕೊಡುವ ಬದಲು ಏಕಾಏಕಿ ನಿರ್ಧಾರವನ್ನು ಬದಲಿಸಲಾಗುತ್ತದೆ. ಅತಿ ಹೆಚ್ಚು ಅಂಕ ಗಳಿಸಿದ ಮೂವರನ್ನು ಆಯ್ಕೆ ಮಾಡಿ ಉಳಿದ ಐವರು ಸದಸ್ಯರಿಂದ ಅತಿ ಹೆಚ್ಚು ವೋಟಿಂಗ್ ಪಡೆದ ವ್ಯಕ್ತಿಗೆ 'ಟಿಕೆಟ್‌ ಟು ಫಿನಾಲೆ' ನೀಡುವುದಕ್ಕೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ‘ಟಾಸ್ಕ್​ ಗೆದ್ದು ವಾರದ ಕೊನೆಯಲ್ಲಿ ಅತಿ ಹೆಚ್ಚು ಅಂಕ ಪಡೆಯುವ ಸದಸ್ಯರ ಪೈಕಿ ಒಬ್ಬರಿಗೆ ಟಿಕೆಟ್ ಸಿಗಲಿದೆ’ ಎಂದು ಬಿಗ್ ಬಾಸ್ ಸ್ಪಷ್ಟವಾಗಿ ಹೇಳಿದ್ದರೂ, ಡ್ರೋನ್‌ ಪ್ರತಾಪ್‌ಗೆ ಫಿನಾಲೆ ಟಿಕೆಟ್‌ ಕೊಡುವುದರಿಂದ ವಂಚನೆ ಮಾಡಿದ್ದೇಕೆ ಎಂಬುದು ಎಲ್ಲ ಅಭಿಮಾನಿಗಳ ಪ್ರಶ್ನೆಯಾಗಿದೆ.

View post on Instagram

ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆಗೆ ದಿನ ಗಣನೆ ಶುರುವಾಗಿದ್ದು, 8 ಜನರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಟಾಸ್ಕ್‌ನಲ್ಲಿ ಗೆದ್ದು 420 ಅಂಕ ಪಡೆದ ಡ್ರೋನ್‌ ಪ್ರತಾಪ್‌ಗೆ ಫಿನಾಲೆ ಟಿಕೆಟ್‌ ನೀಡದೇ ಕೇವಲ 3 ಜನರ ಓಟಿಂಗ್ ಆಧರಿಸಿ 'ಸಂಗೀತಾ ಶೃಂಗೇರಿ' ಅವರಿಗೆ 'ಟಿಕೆಟ್​ ಟು ಫಿನಾಲೆ' ನೀಡಲಾಗುತ್ತದೆ. ಇನ್ನು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಿಕೊಡಲು ಕಿಚ್ಚ ಸುದೀಪ್‌ ಅವರು ಆಗಮಿಸಿದ್ದು, ಈ ಬಗ್ಗ ಚರ್ಚೆ ಮಾಡಲಿದ್ದಾರೆ ಎಂಬ ಮಾತು ಕೇಳಿಬಂದಿದೆ. ಬಹುಶಃ ಇದೇ ವಿಚಾರ ಇಟ್ಟುಕೊಂಡು ಸುದೀಪ್ (Kiccha Sudeep) ಮಾತನಾಡುವ ಸಾಧ್ಯತೆ ಇದೆ.

ಬಿಗ್​ಬಾಸ್​ ಅಚ್ಚರಿ: ಹೆಚ್ಚು ಅಂಕ ಪ್ರತಾಪ್​ಗೆ- ಫಿನಾಲೆ ಟಿಕೆಟ್​ ಸಂಗೀತಾಗೆ! ಈ ಪವಾಡ ಆಗಿದ್ದು ಹೇಗೆ?

  • ಯಾರಿಗೆ ಎಷ್ಟು ಅಂಕ ಬಂದಿತ್ತು?
  • ಡ್ರೋನ್ ಪ್ರತಾಪ್ 420
  • ಸಂಗೀತಾ ಶೃಂಗೇರಿ 300
  • ನಮ್ರತಾಗೌಡ 210
  • ವರ್ತೂರು ಸಂತೋಷ್ 200
  • ವಿನಯ್‌ಗೌಡ 180
  • ತನಿಷಾ ಕುಪ್ಪಂಡ 140
  • ತುಕಾಲಿ ಸಂತೋಷ್ 140
Scroll to load tweet…

ಟಿಕೆಟ್ ಟು ಫಿನಾಲೆಗೆ ವಾರ ಪೂರ್ತಿ ನಡೆದ ಟಾಸ್ಕ್‌ನಲ್ಲಿ ಅತಿ ಹೆಚ್ಚು ಅಂಕ ಪಡೆದಿದ್ದು ಡ್ರೋನ್ ಪ್ರತಾಪ್. ಆದರೆ, ಬಿಗ್ ಬಾಸ್ ಟಾಪ್​ 3ನ ಆಯ್ಕೆ ಮಾಡಿದರು. ಈ ಪೈಕಿ ಪ್ರತಾಪ್, ಸಂಗೀತಾ ಹಾಗೂ ನಮ್ರತಾ ಇದ್ದರು. ನಂತರ ಮನೆಯವರಿಂದಲೇ ವೋಟಿಂಗ್ ಮಾಡಿಸಲಾಯಿತು. ಈ ಪೈಕಿ ಸಂಗೀತಾ ಹೆಚ್ಚು ವೋಟ್ ಪಡೆದು ಫಿನಾಲೆ ಟಿಕೆಟ್ ಪಡೆದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ಟಾಸ್ಕ್‌ನಲ್ಲಿ ಹೆಚ್ಚು ಅಂಕ ಗಳಿಸಿದ ಒಬ್ಬ ಸದಸ್ಯನಿಗೆ ನೇರವಾಗಿ ಫಿನಾಲೆ ಟಿಕೆಟ್ ಕೊಡಲಾಗುತ್ತದೆ ಎಂದು ಹೇಳಲಾಗಿತ್ತು. ಕೊನೆಗೆ ಪ್ರತಾಪ್‌ ಗೆದ್ದ ಕೂಡಲೇ ವರಸೆ ಬದಲಿಸಿದ ಬಿಗ್‌ಬಾಸ್‌ ಮೂವರನ್ನು ನಿಲ್ಲಿಸಿ ವೋಟಿಂಗ್ ಮಾಡಿಸಿ ಫಿನಾಲೆ ಟಿಕೆಟ್‌ ಅನ್ನು ಡ್ರೋನ್‌ ಪ್ರತಾಪ್‌ ಕೈತಪ್ಪುವಂತೆ ಮಾಡಿದ್ದಾರೆ.