Asianet Suvarna News Asianet Suvarna News

ಬಿಗ್ ಬಾಸ್ ಸೋನುಗೌಡಗೆ ಜಾಮೀನು ಮಂಜೂರು; ಮಗು ದತ್ತು ಪ್ರಕರಣದಲ್ಲಿ ರಿಲೀಫ್‌

ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ ಹಾಗೂ ಬಿಗ್‌ಬಾಸ್‌ ಮೂಲಕ ಪ್ರಸಿದ್ಧಿ ಹೊಂದಿದ್ದ ಸೋನು ಗೌಡ ಅವರು ಮಗುವನ್ನು ಅನಧಿಕೃತವಾಗಿ ದತ್ತು ಪಡೆದ ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದೆ. 

bigg Boss sonu srinivas gowda adopts girl child case court given Bail sat
Author
First Published Apr 4, 2024, 6:38 PM IST

ಬೆಂಗಳೂರು (ಏ.04): ರಾಜ್ಯದಲ್ಲಿ ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ ಹಾಗೂ ಬಿಗ್‌ಬಾಸ್‌ ಮೂಲಕ ಪ್ರಸಿದ್ಧಿ ಹೊಂದಿದ್ದ ಸೋನು ಗೌಡ ಅವರು ಮಗುವನ್ನು ಅನಧಿಕೃತವಾಗಿ ದತ್ತು ಪಡೆದ ಪ್ರಕರಣದಲ್ಲಿ ಜಾಮೀನು ಲಭ್ಯವಾಗಿದೆ. 

ರಾಯಚೂರಿನ ಕೂಲಿ ಕಾರ್ಮಿಕ ದಂಪತಿಯ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಪ್ರಕರಣದಲ್ಲಿ ಸೋನ್ ಗೌಡ ಅವರನ್ನು ಮಾ.25ರಂದು ಬಂಧಿಸಿ ಕೋರ್ಟ್‌ಮುಂದೆ ಹಾಜರುಪಡಿಸಿದ್ದಾಗ ವಿಚಾರಣೆ ಮಾಡದ ನ್ಯಾಯಾಧೀಶರು  5 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆದರೆ, ಐದು ದಿನಗಳಲ್ಲಿ ವಿಚಾರಣೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶವನ್ನು ಪೊಲೀಸರು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರ ಪರವಾಗಿ ವಾದ ಆಲಿಸಿದ ನ್ಯಾಯಾಲಯದಿಂದ ಸೋನು ಗೌಡ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ, ಸೋನು ಶ್ರೀನಿವಾಸ್ ಗೌಡ ಅವರನ್ನು ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು. 

ಮಗು ದತ್ತು ಪಡೆದ ಪ್ರಕರಣ: ರೀಲ್ಸ್ ರಾಣಿ ಸೋನುಗೌಡ 14 ದಿನ ನ್ಯಾಯಾಂಗ ಬಂಧನ

ಮಾ.25ರಿಂದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದ ಸೋನುಗೌಡ ಅವರು ಜಾಮೀನು ಮಂಜೂರು ಮಾಡುವಂತೆ ಅರ್ಜಿ ಸಲ್ಲಿಕೆ ಮಾಡಿದ್ದರು. ಈ ಅರ್ಜಿಯನ್ನು ವಿಚಾರಣೆ ಮಾಡಿದ ಬೆಂಗಳೂರು ಗ್ರಾಮಾಂತರ ಸಿಜೆಎಂ ಕೋರ್ಟ್ ಹೆಣ್ಣು ಮಗುವಿನ ಕಾನೂನುಬಾಹಿರ ದತ್ತು ಪ್ರಕರಣದಲ್ಲಿ ಸೋನು ಶ್ರೀನಿವಾಸ್‌ ಗೌಡ ಅವರಿಗೆ ಜಾಮೀನು ಮಂಜೂರು ಮಾಡಿದೆ. ಇನ್ನು ಜಾಮೀನು ಲಭ್ಯವಾಗಿದ್ದರೂ ಕೋರ್ಟ್‌ ವಿಧಿಸಿದ ಕೆಲವೊಂದು ಷರತ್ತುಗಳನ್ನು ಪೂರೈಕೆ ಮಾಡಿ ಜೈಲಿನಿಂದ ಹೊರಗೆ ಬರಬೇಕಾಗುತ್ತದೆ. ಆದರೆ, ಈಗಾಗಲೇ ಸಂಜೆಯಾಗಿದ್ದು, ಜೈಲಿನಿಂದ ಅಪರಾಧಿಗಳು ಅಥವಾ ಆರೋಪಿಗಳನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ಮುಗಿದು ಹೋಗಿರುವ ಸಾಧ್ಯತೆಯಿದೆ.

ಒಂದು ವೇಳೆ ನ್ಯಾಯಾಲಯದಿಂದಲೇ ಆದೇಶವನ್ನು ಜೈಲರ್‌ಗೆ ಇಮೇಲ್‌ ಮೂಲಕ ರವಾನಿಸಿದ್ದರೆ ಇಂದೇ ಬಿಡುಗಡೆ ಆಗಬಹುದು. ಇಲ್ಲವಾದಲ್ಲಿ ಜಾಮೀನು ಕಾಪಿಯನ್ನು ಸಂಬಂಧಪಟ್ಟ ವಕೀಲು ಜೈಲು ಅಧಿಕಾರಿಗಳಿಗೆ ನೀಡಿದ ನಂತರ, ಷರತ್ತುಗಳನ್ನು ಪೂರೈಸಿ ಜೈಲಿನಿಂದ ಸೋನು ಶ್ರೀನಿವಾಸ್ ಗೌಡ ಅವರನ್ನು ಹೊರಗೆ ಕರೆದುಕೊಂಡು ಬರಬಹುದು. ಆದರೆ, ಈ ಪ್ರಕ್ರಿಯೆ ಮಾಡಲು ಸಮಯದ ಅಭಾವ ಇರುವುದರಿಂದ ನಾಳೆ ಸೋನುಗೌಡ ಅವರು ಜೈಲಿನಿಂದ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios