ಕಲರ್ಸ್ ಕನ್ನಡ ವಾಹಿನಿಯ ಬಿಗ್‌ ಬಾಸ್ ಸೀಸನ್ 10ರ ಕಂಟೆಸ್ಟೆಂಟ್‌ಗಳು ಒಂದೇ ಒಂದು ಲಕ್ಸುರಿ ಬಜೆಟ್‌ ಅನ್ನು ಬಳಸದೇ ರಿಯಾಲಿಟಿ ಶೋ ಮುಕ್ತಾಯಗೊಳಿಸಿದ್ದಾರೆ.

ಬೆಂಗಳೂರು (ಜ.31): ಕಳೆದ ಮೂರು ತಿಂಗಳಿಂದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡ ಬಿಗ್‌ಬಾಸ್‌ ಕನ್ನಡ ಸೀಸನ್-10ರ ಹಲವು ಕೆಟ್ಟ ದಾಖಲೆಗಳನ್ನು ಕೂಡ ನಿರ್ಮಿಸಿದೆ. ಅದರಲ್ಲಿ ಒಂದೇ ಒಂದು ಲಕ್ಸುರಿ ಬಜೆಟ್‌ ಅನ್ನು ಬಳಸದೇ ಮುಕ್ತಾಯಗೊಂಡ ಸೀಸನ್‌ ಎಂಬ ಅಪಖ್ಯಾತಿಯನ್ನೂ ಗಳಿಸಿದೆ.

ಹೌದು, ಬಿಗ್‌ಬಾಸ್‌ ಸೀಸನ್ 10ರ ಕಂಟೆಸ್ಟೆಂಟ್‌ಗಳಿಂದ ಹಲವು ಕೆಟ್ಟ ದಾಖಲೆಗಳು ಬಿಗ್‌ಬಾಸ್‌ ರಿಯಾಲಿಟಿ ಶೋನ ಇತಿಹಾಸದಲ್ಲಿ ದಾಖಲಾಗಿವೆ. ಬಿಗ್‌ಬಾಸ್ ಸೀಸನ್ 10 ಅನ್ನು 16 ವಾರಗಳ ಕಾಲ ನಡೆಸಲಾಗಿದ್ದರೂ ಎಲ್ಲ ಕಂಟೆಸ್ಟೆಂಟ್‌ಗಳು ಸೇರಿ ಒಂದೇ ಒಂದು ಲಕ್ಸುರಿ ಬಜೆಟ್‌ ಅನ್ನು ಮನೆಗೆ ಪಡೆಯುವಲ್ಲಿ ಯಶಸ್ವಿ ಆಗಲಿಲ್ಲ. ಒಂದೇ ಒಂದು ಲಕ್ಸುರಿ ಬಜೆಟ್ ಅನ್ನು ಬಳಕೆ ಮಾಡಿಕೊಳ್ಳದೇ ಸೀಸನ್ ಮುಗಿಸಿದ ಅಪಕೀರ್ತಿಯನ್ನು ಸೀಸನ್ 10ರ ಕಂಟೆಸ್ಟೆಂಟ್‌ಗಳು ತಮ್ಮದಾಗಿಸಿಕೊಂಡಿದ್ದಾರೆ.

ಬಿಗ್‌ ಬಾಸ್‌ ಸೀಸನ್ 10ರ ಅತಿ ಕೆಟ್ಟ ದಾಖಲೆಗಳು; ಇದು ಯಾರ ತಪ್ಪು ನೀವೇ ತೀರ್ಮಾನಿಸಿ..

ಬಿಗ್‌ಬಾಸ್‌ ಸೀಸನ್ 10ರಲ್ಲಿ ಒಟ್ಟು 6 ಕಂಟೆಸ್ಟಂಟ್‌ಗಳು ಫೈನಲ್‌ಗೆ ಬಂದಿದ್ದರೂ ಈ ಪೈಕಿ ಇಬ್ಬರು ಕಂಟೆಸ್ಟೆಂಟ್‌ಗಳು ಟಾಸ್ಕ್‌ ಗೆದ್ದು ಕ್ಯಾಪ್ಟನ್ ಆಗದೇ ಫೈನಲ್‌ಗೆ ಬಂದಿದ್ದಾರೆ. ಈ ಪೈಕಿ ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಅವರು ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದೇ ಇಲ್ಲ. ಅತಿಹೆಚ್ಚು ಜನಪ್ರಿಯತೆ ಪಡೆದ ಹಾಗೂ ಟಿಆರ್‌ಪಿ ಪಡೆದ ಸೀಸನ್ ಎಂದರೆ 10ನೇ ಸೀಸನ್ ಎಂದು ಕಲರ್ಸ್‌ ಕನ್ನಡ ವಾಹಿನಿ ಹೇಳಿಕೊಂಡಿದೆ. ಆದರೆ, ಇದರಲ್ಲಿ ಡ್ರೋನ್‌ ಪ್ರತಾಪ್‌ ಅವರಿಗೆ 2.20 ಕೋಟಿ ಓಟುಗಳು ಬಿದ್ದಿದ್ದರೂ ಅವರು ಒಂದು ಬಾರಿಯೂ ಕ್ಯಾಪ್ಟನ್ ಆಗಿಲ್ಲ ಎನ್ನುವುದು ಸೋಜಿಗದ ಸಂಗತಿಯಾಗಿದೆ.

ಭಾರತದ ಹಲವು ಭಾಷೆಗಳ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ರಿಯಾಲಿಟಿ ಶೋ ಇತಿಹಾಸದಲ್ಲಿ ಬಿಗ್‌ಬಾಸ್‌ ಮನೆಯೊಳಗಿದ್ದ ವ್ಯಕ್ತಿಯೊಬ್ಬರು (ವರ್ತೂರು ಸಂತೋಷ್) ಜೈಲಿಗೆ ಹೋಗಿ ವಾಪಸ್ ಬಂದಿರುವ ಘಟನೆ ಕನ್ನಡ ಬಿಗ್‌ಬಾಸ್‌ ಸೀಸನ್ 10ರಲ್ಲಿ ನಡೆದಿದೆ. ಅರಣ್ಯ ಇಲಾಖೆ ಕಾಯ್ದೆಯಲ್ಲಿ ನಿಷೇಧಿಸಲಾಗಿದ್ದ 'ಹುಲಿ ಉಗುರು' ಧರಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯಿಂದ ವರ್ತೂರು ಸಂತೋಷ್‌ ಅವರನ್ನು ಬಂಧಿಸಲಾಗಿತ್ತು. ಕೆಲವು ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿ ಪುನಃ ಬಿಗ್‌ಬಾಸ್‌ ಮನೆಯನ್ನು ಸೇರಿಕೊಂಡಿದ್ದರು.

ಬಿಗ್‌ಬಾಸ್ ಕನ್ನಡದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ತುಕಾಲಿ ಸಂತೋಷ್!

ಬಿಗ್‌ಬಾಸ್‌ ವಿನ್ನರ್ ಕಾರ್ತಿಕ್ ಮಹೇಶ್: ಬಿಗ್‌ಬಾಸ್ ಮನೆಯ ಪರ್ಫೆಕ್ಟ್‌ ಫ್ಯಾಮಿಲಿ ಮ್ಯಾನ್ ಖ್ಯಾತಿಯ ಕಾರ್ತಿಕ್ ಮಹೇಶ್ ಅವರು ಬಿಗ್‌ಬಾಸ್ ಸೀಸನ್ 10ರ ವಿಜೇತರಾಗಿದ್ದು, 50 ಲಕ್ಷ ರೂ. ನಗದು, ಒಂದು ಕಾರು ಹಾಗೂ ಒಂದು ಬೈಕ್‌ ತಮ್ಮದಾಗಿಸಿಕೊಂಡಿದ್ದಾರೆ. ಸ್ವತಃ ಕಾರ್ತಿಕ್ ಮಹೇಶ್‌ ಅವರೇ ಎರಡು ಬಾರಿ ಲಕ್ಸುರಿ ಬಜೆಟ್‌ನಲ್ಲಿ ಸಾಮಗ್ರಿ ಖರೀದಿ ಮಾಡುವಾಗ ತಪ್ಪು ಮಾಡಿದ್ದಾರೆ. ಇದರಿಂದ ಇಡೀ ಬಿಗ್‌ಬಾಸ್‌ ಮನೆ ಲಕ್ಸುರಿ ಬಜೆಟ್‌ ಅನ್ನು ಕಳೆದುಕೊಂಡಿತ್ತು. ಬಿಗ್‌ಬಾಸ್ ಗೆಲ್ಲುವ ಕುದುರೆಗಳು ಎಂದು ಹೇಳಲಾಗುತ್ತಿದ್ದ ವಿನಯ್‌ಗೌಡ, ಸಂಗೀತಾ ಶೃಂಗೇರಿ ಆಗುವುದಕ್ಕೂ ಕೂಡ ಸಾಧ್ಯವಾಗದೇ ಮನೆಗೆ ಮರಳಿದ್ದಾರೆ.