Asianet Suvarna News Asianet Suvarna News

ಒಂದು ಸುಳ್ಳು ಹೇಳಿರುವುದಕ್ಕೆ ಇಷ್ಟು ದೊಡ್ಡು ಶಿಕ್ಷೆನಾ?; ಸೋನು ಗೌಡ ಪರ ಧ್ವನಿ ಎತ್ತಿದ ರಾಕೇಶ್ ಅಡಿಗ

ಮಗು ದತ್ತು ಪ್ರಕರಣದಲ್ಲಿ ಸೋನು ಗೌಡ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಸ್ನೇಹಿತ ರಾಕೇಶ್ ಅಡಿಗ ಮಾತನಾಡಿದ್ದಾರೆ. 

Bigg Boss Rakesh adiga talks about Sonu Srinivas Gowda and Sevathi adoption vcs
Author
First Published Mar 31, 2024, 10:58 AM IST

ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಮಗು ದತ್ತು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ರಾಯಚೂರಿನ ಕೂಲಿ ಕಾರ್ಮಿಕರ ಮಗಳನ್ನು ಸಾಕುತ್ತಿರುವ ಸೋನು ಗೌಡ  ದತ್ತು ತೆಗೆದುಕೊಂಡಿರುವೆ ಎಂದು ಒಂದೆರಡು ವಿಡಿಯೋದಲ್ಲಿ ಹೇಳಿದ್ದಾರೆ. ಇದನ್ನು ಗಮನಿಸಿ ಮಕ್ಕಳ ಮತ್ತು ಕಲ್ಯಾಣ ಇಲಾಖೆ ಅಧಿಕಾರಿಗಳು ಕ್ರಮ ಕೈ ಗೊಂಡಿದ್ದಾರೆ. ಕಾನೂನಿನ ಪ್ರಕಾರ ಏನೇಲ್ಲಾ ನಡೆಯಬೇಕು ಅದು ನಡೆಯುತ್ತಿದೆ. ಈ ವಿಚಾರದ ಬಗ್ಗೆ ಸ್ನೇಹಿತ ರಾಕೇಶ್ ಅಡಿಗ ಮಾತನಾಡಿದ್ದಾರೆ. 

'ಒಂದಷ್ಟು ವಿಡಿಯೋಗಳನ್ನು ನಾನು ಯುಟ್ಯೂಬ್‌ನಲ್ಲಿ ನೋಡಿದ್ದೀನಿ ಅದರ ಪ್ರಕಾರನೇ ಆಕೆ ಅಕ್ಕ ಪಕ್ಕದಲ್ಲಿ ಇರುವ ಮಗುವನ್ನು ಕರೆದುಕೊಂಡು ಬಂದು ಪ್ಯಾಂಪರ್‌ ಮಾಡುತ್ತಿದ್ದಾಳೆ ಅಂತ. ಅಲ್ಲದೆ ನೇರವಾಗಿ ಸೋನು ಭೇಟಿ ಮಾಡಲು ಜೈಲಿಗೆ ಹೋದೆ. ಬೆಳ್ಳಗಿನಿಂದ ಸೇವಂತಿ ತಂದೆ ತಾಯಿ ಜೊತೆ ಇದ್ದು ಸಂಪೂರ್ಣವಾಗಿ ಮಾತನಾಡಿದ್ದೀನಿ. ನಾನು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡಿಲ್ಲ ಕೇವಲ ಯುಟ್ಯೂಬ್‌ನಲ್ಲಿ ವ್ಲಾಗ್ ಮಾಡುತ್ತಿದ್ದೆ ಯಾಕೆ ಅದನ್ನು ರೀಲ್ಸ್ ಮಾಡಿ ದುಡ್ಡು ಮಾಡುತ್ತಿದ್ದೀನಿ ಅಂತ ಸುದ್ದಿಯಾಗಿ ಗೊತ್ತಿಲ್ಲ ಎಂದು ಸೋನು ನನ್ನ ಬಳಿ ಹೇಳಿದ್ದಾಳೆ. ಅಲ್ಲದೆ ಮಗುವನ್ನು ದತ್ತು ತೆಗೆದುಕೊಳ್ಳಬೇಕು ಎಂದು ಹೇಳಿದ್ದೀನಿ ಯಾವುದೋ ಟ್ರೋಲರ್‌ಗೆ ಉತ್ತರ ಕೊಡುವ ಬರದಲ್ಲಿ ಯಾವುದೇ ಕೆಟ್ಟ ಉದ್ದೇಶದಲ್ಲಿ ತೆಗೆದುಕೊಂಡಿದ್ದೀನಿ ಅಂತ ಒಂದೆರಡು ಸಲ ಹೇಳಿದ್ದೀನಿ. ಹೌದು ನಾನು ಸುಳ್ಳು ಹೇಳಿದ್ದೀನಿ ಆದರೆ ಇಷ್ಟು ದೊಡ್ಡ ಶಿಕ್ಷೆ ಆಗಬೇಕಿತ್ತಾ? ಅನ್ನೋ ಸೋನು ಹೇಳುತ್ತಾಳೆ. ಸೇವಂತಿ ಅನ್ನೋ ಮಗು ತಂದೆ ತಾಯಿ ಕರೆಯುತ್ತಿದ್ದರೂ ನಾನು ನಿಮ್ಮ ಜೊತೆ ಬರುವುದಿಲ್ಲ ಅಕ್ಕನ ಜೊತೆ ಹೋಗುತ್ತೀನಿ ಅಂತಾನೆ ಹೇಳುತ್ತಿದ್ದಾಳೆ. ಮಗು ಖುಷಿಯಾಗಿದ್ಯಾ? ಮಗುವಿನ ಮೆಂಟಲ್ ಸ್ಟೇಟ್ಸ್‌ ಏನು? ಮಗು ಅಪ್ಪ ಅಮ್ಮನ ಇದ್ಯಾ? ಇದು ಯಾವುದರ ಬಗ್ಗೆನೂ ಮಕ್ಕಳ ಕಲ್ಯಾಣ ಇಲಾಖೆಯವರು ಯೋಚನೆ ಮಾಡಿಲ್ಲ' ಎಂದು ರಾಕೇಶ್ ಅಡಿಗ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ. 

'ಸೇವಂತಿ ಅನ್ನೋ ಹುಡುಗ ಬಗ್ಗೆ ನಾನು ಸೋನು ಜೊತೆ ಮಾತನಾಡಬೇಕಿತ್ತು. ಆದರೆ ಆಕೆಯ ಯುಟ್ಯೂಬ್ ವಿಡಿಯೋಗಳನ್ನು ನೋಡಿದ್ದೆ ಅಷ್ಟೆ. ಕೆಲವು ಪ್ರಶ್ನೆ ಇರುವ ಕಾರಣ ಸೋನು ಪರ ವಕೀಲರ ಕಾನೂನು ಮೊರೆ ಹೋಗಿದ್ದಾರೆ. ಇದರ ನಡುವೆ ಸೇವಂತಿ ಅವರ ತಂದೆ ತಾಯಿಗೆ ಯಾರೋ ಕರೆ ಮಾಡಿ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಸ್ಕೂಲ್ ಸರ್ಟಿಫಿಕೆಟ್‌ ಕೊಡಿ ಎಂದು ಹೇಳುತ್ತಿದ್ದಾರೆ. ಅಲ್ಲಿಗೆ ಕರೆದುಕೊಂಡು ಹೋದಾಗ ಯಾರೂ ಇಲ್ಲ. ನಾವೇ ಕೆಲವು ನಂಬರ್‌ಗಳಿಗೆ ಕರೆ ಮಾಡಿದ್ದರೆ ಯುಟ್ಯೂಬ್‌ನಲ್ಲಿ ನಂಬರ್ ಸಿಗ್ತು ಅದಿಕ್ಕೆ ಪ್ರ್ಯಾಂಕ್ ಮಾಡಿದ್ದೀವಿ ಅಂತಾರೆ' ಎಂದು ರಾಕೇಶ್ ಅಡಿಗ ಹೇಳಿದ್ದಾರೆ. 

Follow Us:
Download App:
  • android
  • ios