ಬಿಗ್ ಮನೆಯಲ್ಲಿ ಆರ್ಯವರ್ಧನ್ ಗಡ್ಡ, ಮೀಸೆ ಮತ್ತು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆದು ಬೋಳಾಗಿ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್ ಅಂತನೇ ಗುರುತು ಸಿಗದಷ್ಟು ಮಟ್ಟಕ್ಕೆ ಬದಲಾಗಿದ್ದಾರೆ.  ಆರ್ಯವರ್ಧನ್ ಅವರಿಗೆ ಹೊಸ ಲುಕ್ ನೀಡಿದ್ದು ಅರ್ಜುನ್. ನೀಟಾಗಿ ಶೇವ್ ಮಾಡಿಸಿ ಹೊಸ ಅವತಾರದಲ್ಲಿ ಕಾಣುವಂತೆ ಮಾಡಿದ್ದಾರೆ. ಉಳಿದ ಸ್ಪರ್ಧಿಗಳು ಮೀಸೆ ಇರಲಿ ಎಂದು ಒತ್ತಾಯ ಮಾಡಿದರು ಸಹ ಆರ್ಯವರ್ಧನ್ ಇಲ್ಲ ತೆಗೀರಿ ಎಂದು ಹೇಳಿ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಆರ್ಯವರ್ಧನ್ ಅವರಿಗೆ ಉಳಿದ ಸ್ಪರ್ಧಿಗಳು ನಾಮಕರಣ ಮಾಡುತ್ತಿದ್ದಾರೆ.

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಒಟಿಟಿ ಕನ್ನಡ ಅದ್ದೂರಿಯಾಗಿ ಆರಂಭವಾಗಿದೆ. ಆಗಸ್ಟ್​ 6ರಂದು ಬಿಗ್ ಬಾಸ್ ಒಟಿಟಿ ಗ್ರ್ಯಾಂಡ್​ ಓಪನಿಂಗ್ ಆಗಿದೆ. ನಾನಾಕ್ಷೇತ್ರದಲ್ಲಿ ಗುರುತಿಸಿಕೊಂಡ ವ್ಯಕ್ತಿಗಳು ಈ ಬಾರಿಯ ಬಿಗ್ ಬಾಸ್ ಒಟಿಟಿಯಲ್ಲಿದ್ದಾರೆ. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಬಿಗ್ ಬಾಸ್ ನಡೆಸಿಕೊಡುತ್ತಿದ್ದು ಸ್ಪರ್ಧಿಗಳಿಗೆ ಅದ್ದೂರಿ ಸ್ವಾಗತ ನೀಡಿದ್ದಾರೆ. ಅಂದಹಾಗೆ ಬಿಗ್ ಬಾಸ್ ಒಟಿಟಿಯಲ್ಲಿ ಒಟ್ಟು 16 ಸ್ಪರ್ಧಿಗಳಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಸಲಿ ಆಟ ಪ್ರಾರಂಭಿಸಿದ್ದಾರೆ. ನಿನ್ನೆಯ (ಆಗಸ್ಟ್ 7) ಎಪಿಸೋಡ್ ನಲ್ಲಿ ಸ್ಪರ್ಧಿಗಳು ತಮ್ಮ ಕಷ್ಟದ ದಿನಗಳನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸ್ಪರ್ಧಿಗಳ ಎಮೋಷನಲ್ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದರು. ಇದರ ಬೆನ್ನಲ್ಲೇ ಪ್ರೇಕ್ಷಕರಿಗೆ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಅಚ್ಚರಿ ಮೂಡಿಸಿದೆ. ಆರ್ಯವರ್ಧನ್ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

ಬಿಗ್ ಮನೆಯಲ್ಲಿ ಆರ್ಯವರ್ಧನ್ ಗಡ್ಡ, ಮೀಸೆ ಮತ್ತು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆದು ಬೋಳಾಗಿ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್ ಅಂತನೇ ಗುರುತು ಸಿಗದಷ್ಟು ಮಟ್ಟಕ್ಕೆ ಬದಲಾಗಿದ್ದಾರೆ. ಆರ್ಯವರ್ಧನ್ ಅವರಿಗೆ ಹೊಸ ಲುಕ್ ನೀಡಿದ್ದು ಅರ್ಜುನ್. ನೀಟಾಗಿ ಶೇವ್ ಮಾಡಿಸಿ ಹೊಸ ಅವತಾರದಲ್ಲಿ ಕಾಣುವಂತೆ ಮಾಡಿದ್ದಾರೆ. ಉಳಿದ ಸ್ಪರ್ಧಿಗಳು ಮೀಸೆ ಇರಲಿ ಎಂದು ಒತ್ತಾಯ ಮಾಡಿದರು ಸಹ ಆರ್ಯವರ್ಧನ್ ಇಲ್ಲ ತೆಗೀರಿ ಎಂದು ಹೇಳಿ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಆರ್ಯವರ್ಧನ್ ಅವರಿಗೆ ಉಳಿದ ಸ್ಪರ್ಧಿಗಳು ನಾಮಕರಣ ಮಾಡುತ್ತಿದ್ದಾರೆ. ಒಬ್ಬರು ಒಂದೊಂದು ಹೆಸರು ಹೇಳುವ ಮೂಲಕ ಆರ್ಯವರ್ಧನ್ ಕಾಲೆಳೆಯುತ್ತಿದ್ದಾರೆ. 

ಅಬ್ಬಬ್ಬೋ....! ಮತ್ತೊಂದು ವಿಡಿಯೋ ಲೀಕ್.....ಆತಂಕದಲ್ಲಿ ಸೋನು ಗೌಡ

ಆರ್ಯವರ್ಧನ್ ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಇದೀಗ ಬಿಬ್ ಬಾಸ್ ಮನೆಯಲ್ಲಿ ಹೊಸ ಲುಕ್ ಮತ್ತಷ್ಟು ಟ್ರೋಲ್ ಆಗುತ್ತಿದೆ. ಅಂದಹಾಗೆ ಆರ್ಯವರ್ಧನ್ ಆಸ್ತಿ ಕೇಳಿ ಬಿಗ್ ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಆರ್ಯವರ್ಧನ್ ಬಳಿ ಇರುವ ಆಸ್ತಿ ಕೇಳಿ ಬಿಗ್ ಮನೆಯ ಸ್ಪರ್ಧಿಗಳು ಅಚ್ಚರಿ ಪಟ್ಟರು.

View post on Instagram

‘ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ. ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ. ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ' ಎಂದು ಆರ್ಯವರ್ಧನ್​ ಹೇಳಿದರು. 

ಕತ್ತು ಹಿಸುಕಿ ನನ್ನನ್ನು ಜಾಡಿಸಿ ಒದ್ದಿದ್ದಾನೆ ಈ ಎಕ್ಸ್‌ ಬಾಯ್‌ಫ್ರೆಂಡ್: Bigg Boss ಸಾನ್ಯ ಅಯ್ಯರ್‌

ಬಿಗ್ ಬಾಸ್ ಮನೆಯ ಸ್ಪರ್ಧಿಗಳು ತಮ್ಮ ತಮ್ಮ ಕಷ್ಟಗಳನ್ನು ಹೇಳಿ ಕಣ್ಣೀರಾಕಿದ್ದಾರೆ. ಆದರೆ ಆರ್ಯವರ್ಧನ್, 'ಯಾವ ದುಃಖವೂ ನನಗೆ ದುಃಖ ಎನಿಸುವುದಿಲ್ಲ. ಸವಾಲನ್ನು ಗೆಲ್ಲುವುದು ನಮ್ಮ ಧರ್ಮ. ಅಮ್ಮನಿಗೆ ಕಷ್ಟ ಬಂತು, ಅಪ್ಪನಿಗೆ ಕಷ್ಟ ಬಂತು ಎಂಬುದು ಸರಿಯಲ್ಲ. ಎಲ್ಲರ ಫ್ಯಾಮಿಲಿಯಲ್ಲೂ ಇರುವಂಥದ್ದು’ ಎಂದು ಹೇಳಿದರು.