ನೆತ್ತಿಗೇರಿತಾ ಬಿಗ್ಬಾಸ್ ಖ್ಯಾತಿ? ಆಗ ಕಳ್ಳಹಾವು ಸಾಗಾಣಿಕೆ- ಈಗ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗ ಥಳಿತ!
ನೆತ್ತಿಗೇರಿತಾ ಬಿಗ್ಬಾಸ್ ಗೆದ್ದ ಖ್ಯಾತಿ? ಆಗ ಕಳ್ಳಹಾವು ಸಾಗಾಣಿಕೆ- ಈಗ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗ ಥಳಿತ: ವಿಡಿಯೋ ವೈರಲ್
ಕಾಂಟ್ರವರ್ಸಿಯಿಂದ ಕುಖ್ಯಾತಿ ಗಳಿಸುವ ಮೂಲಕವೇ ಬಿಗ್ಬಾಸ್ಗೆ ಎಂಟ್ರಿಪಡೆದು, ಕೊನೆಗೆ ಬಿಗ್ಬಾಸ್ ಟ್ರೋಫಿಯನ್ನೂ ಪಡೆದಿದ್ದ 26 ವರ್ಷದ ಯುವಕನೊಬ್ಬ ಇದೀಗ ಇನ್ನೊಂದು ಖತರ್ನಾಕ್ ಕೆಲಸ ಮಾಡಿದ್ದು, ಅದರ ವಿಡಿಯೋ ವೈರಲ್ ಆಗಿದೆ. ರೇವ್ ಪಾರ್ಟಿಗಳಲ್ಲಿ ಹಾವಿನ ವಿಷ ಬಳಕೆ ಮಾಡುತ್ತಿದ್ದ ಆರೋಪದಲ್ಲಿ ಹಲ್ಚಲ್ ಸೃಷ್ಟಿಸಿ ಅರೆಸ್ಟ್ ಆಗಿದ್ದ ಯೂಟ್ಯೂಬರ್ ಎಲ್ವಿಶ್ ಯಾದವ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಸಾಕಷ್ಟು ವಿವಾದ ಸೃಷ್ಟಿಸಿರುವ ಕಾರಣದಿಂದಲೇ ಎಲ್ವಿಶ್ ಅವರಿಗೆ ಹಿಂದಿನ ‘ಬಿಗ್ ಬಾಸ್ ಒಟಿಟಿ ಸೀಸನ್ 2ನಲ್ಲಿ ಎಂಟ್ರಿ ಸಿಕ್ಕಿತ್ತು. ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಹೊಂದಿರುವ ಎಲ್ವಿಶ್ ಬಿಗ್ಬಾಸ್ನಲ್ಲಿ ವಿನ್ ಆದ ಮೇಲೆ ಕೇಳಬೇಕೆ? ಗೆಲುವಿನ ಅಮಲು ಇನ್ನೂ ಅವರ ಸುತ್ತಲೂ ಸುತ್ತುತ್ತಲೇ ಇದೆ ಎಂದು ಆರೋಪಿಸಲಾಗುತ್ತಿದೆ.
ಎಲ್ವಿಶ್ ಯಾದವ್ ಬಳಿ 20 ಎಂಎಲ್ ಹಾವಿನ ವಿಷದ ಜೊತೆಗೆ 9 ಹಾವುಗಳನ್ನು ವಶಕ್ಕೆ ಪಡೆಯಲಾಗಿತ್ತು. ಅವರ ಬಳಿ ಐದು ನಾಗರಹಾವು, ತಲಾ ಒಂದು ಹೆಬ್ಬಾವು, ಎರಡು ತಲೆಯ ಹಾವು ಹಾಗೂ ಕೇರೆ ಹಾವು ಇತ್ತು. ಇದೀಗ ಇನ್ನೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ. ಅಷ್ಟಕ್ಕೂ ಇವರು ಮಾಡಿರುವ ಕಾರ್ಯ ಎಂದ್ರೆ, ರೆಸ್ಟೋರೆಂಟ್ ಒಂದರಲ್ಲಿ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ರಾಜಸ್ಥಾನದ ಜೈಪುರದ ರೆಸ್ಟೊರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಸಿನಿಮಾದಲ್ಲಿ ಬೆತ್ತಗಾಗಲು ನಾನ್ ರೆಡಿ: ಕಾಮಸೂತ್ರದ ಬೆಡಗಿ ಶ್ವೇತಾ ಮೆನನ್ ಹೇಳಿದ್ದೇನು ಕೇಳಿ...
ವೈರಲ್ ಆಗಿರುವ ವಿಡಿಯೋದಲ್ಲಿ ಎಲ್ವಿಶ್ ರೆಸ್ಟೋರೆಂಟ್‌ಗೆ ಹೋಗುವುದನ್ನು ನೋಡಬಹುದು. ಅವರು ನಡೆದುಕೊಂಡು ಹೋಗುವಾಗ ಇದ್ದಕ್ಕಿದ್ದಂತೆ ಹಿಂದೆ ತಿರುಗುತ್ತಾರೆ ಮತ್ತು ಬದಿಯಲ್ಲಿ ಕುಳಿತಿದ್ದ ವ್ಯಕ್ತಿಯ ಕೆನ್ನೆಗೆ ಬಲವಾಗಿ ಹೊಡೆಯುತ್ತಾರೆ. ಆ ಬಳಿಕ ಇನ್ನಷ್ಟು ಮುಂದೆ ಹೋಗಿ ಮತ್ತು ವಾಪಸ್ ಬಂದು ಹೊಡೆಯುತ್ತಾರೆ. ಆಗ ಅಲ್ಲಿರುವ ಜನರು ಗಾಬರಿಯಿಂದ ಇದನ್ನು ತಪ್ಪಿಸಲು ಪ್ರಯತ್ನಿಸಿದರೂ ಎಲ್ವಿಶ್ ನಿಲ್ಲಿಸುವುದಿಲ್ಲ. ನಂತರ ಪೊಲೀಸರು ಬಂದು ಪರಿಸ್ಥಿತಿ ಕಂಟ್ರೋಲ್ ಮಾಡುವುದನ್ನು ನೋಡಬಹುದು.
ಎಲ್ವಿಶ್ ಅವರು ಈ ರೀತಿ ಹೊಡೆದಿದ್ದು ಏಕೆ ಎಂಬ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಬರಲಿಲ್ಲ. ಅಪರಿಚಿತ ವ್ಯಕ್ತಿಯೊಬ್ಬರು ಎಲ್ವಿಶ್ ಯಾದವ್ ಅವರ ಕುಟುಂಬದ ಬಗ್ಗೆ ಕಮೆಂಟ್ ಮಾಡಿದ್ದರಂತೆ. ಬಳಿಕ ಕೋಪಗೊಂಡು ಎಲ್ವಿಶ್ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಅವರ ವಿರುದ್ಧ ದೂರು ದಾಖಲಾಗಿದೆ. ಇದಾದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಎಲ್ವಿಶ್, ‘ ನಾನು ಜಗಳವಾಡಲು ಇಷ್ಟಪಡುವುದಿಲ್ಲ, ಅಥವಾ ನನ್ನ ಕೈ ಎತ್ತುವ ಇಷ್ಟವಿಲ್ಲ. ನಾನು ನನ್ನ ಸ್ವಂತ ಕೆಲಸದಲ್ಲೇ ಬ್ಯುಸಿ ಇರುವೆ. ನಾನು ಸಾಮಾನ್ಯ ವ್ಯಕ್ತಿ ಮತ್ತು ಯಾರೇ ಫೋಟೊ ತೆಗೆಸಿಕೊಳ್ಳಲು ಬಂದ್ರು ಕೊಡ್ತೀನಿ. ಆದರೆ ಫೋಟೋ ತೆಗೆಸಿಕೊಂಡು ಕೆಲವರು ನನ್ನ ಬಗ್ಗೆಯೇ ಇಲ್ಲಸಲ್ಲದ ಕಮೆಂಟ್ ಮಾಡ್ತಾರೆ. ಬಳಿಕ ನನ್ನ ಹಾಗೂ ನನ್ನ ಫ್ಯಾಮಿಲಿ ಬಗ್ಗೆ ನಾನಾ ಕಮೆಂಟ್ ಮಾಡುವವರನ್ನು ಬಿಡಲ್ಲ ಎಂದು ಎಲ್ವಿಶ್ ಹೇಳಿದ್ದಾರೆ.
ಕಂಗನಾಗೆ ನಿಜವಾಗಿಯೂ ಪ್ರಧಾನಿಯಾಗೋ ಆಸೆ ಇದ್ಯಾ? ’ಎಮರ್ಜೆನ್ಸಿ’ ನಟಿಗೆ ಪ್ರಶ್ನೆ ಕೇಳಿದ್ರೆ ಹೀಗೆ ಹೇಳೋದಾ?