ದೀಪಾವಳಿ ಹಬ್ಬಕ್ಕೆ ಬಿಗ್​ಬಾಸ್​ ಬೆಡಗಿ ನಿವೇದಿತಾ ಗೌಡ ಶೃಂಗಾರ ನೋಡಿ ಮನಸೋತ ಫ್ಯಾನ್ಸ್​

ದೀಪಾವಳಿ ಹಬ್ಬಕ್ಕೆ ಬಿಗ್​ಬಾಸ್​ ಬೆಡಗಿ ನಿವೇದಿತಾ ಗೌಡ ಶೃಂಗಾರ ನೋಡಿ ಮನಸೋತ ಫ್ಯಾನ್ಸ್​. ಫೋಟೋಶೂಟ್​ ಹೀಗಿದೆ ನೋಡಿ... 
 

Bigg Boss Nivedita Gowdas make up for Diwali is heartwarming for fans suc

  ಬಾರ್ಬಿಡಾಲ್​ ಎಂದೇ ಫೇಮಸ್​ ಆಗಿರೋ, ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಇತ್ತೀಚಿಗೆ ರೀಲ್ಸ್​ ಮಾಡುವುದು ಹೆಚ್ಚುತ್ತಲೇ ಇದೆ. ದಿನಕ್ಕೊಂದರಂತೆ ಡ್ರೆಸ್​ ಮಾಡಿಕೊಂಡು ರೀಲ್ಸ್​ ಮಾಡುತ್ತಾರೆ. ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಹಲವೊಮ್ಮೆ ಸಿಂಗಲ್​ ಆಗಿ, ಕೆಲವೊಮ್ಮೆ ಪತಿ ಚಂದನ್​ ಶೆಟ್ಟಿ ಜೊತೆ ಈಕೆ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಹಾಕುತ್ತಿರುತ್ತಾರೆ. ಇವರು ಹಾಕುವ ಎಲ್ಲಾ ವಿಡಿಯೋಗಳು ಸಕತ್​ ಸುದ್ದಿ ಮಾಡುತ್ತೆ.  ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ಹೆಚ್ಚಾಗಿ ಚಿಕ್ಕ ಚಿಕ್ಕ ಬಟ್ಟೆ ತೊಟ್ಟು ಇವರು ಹಾಡಿಗೆ ಅದರಲ್ಲಿಯೂ ಇಂಗ್ಲಿಷ್​ ಹಾಡಿಗೆ ರೀಲ್ಸ್​ ಮಾಡುವುದೇ ಹೆಚ್ಚು. ಅದಕ್ಕಾಗಿಯೇ ಟ್ರೋಲ್​ ಆಗುವುದು ಸಾಮಾನ್ಯ. 25 ವರ್ಷದ ಬೆಡಗಿ,  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನು ಮದುವೆಯಾದ ಮೇಲೆ ಇನ್ನಷ್ಟು ಹಾಟ್​ ಆಗಿದ್ದಾರೆ.  ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Vide​o), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ. ಹೀಗೆ ಕಾಯುವವರೇ ಸಕತ್​ ಟ್ರೋಲ್​ ಕೂಡ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಸುಂದರವಾಗಿ ಡ್ರೆಸ್​ ಮಾಡಿಕೊಂಡು ಅದಕ್ಕೆ ರೀಲ್ಸ್​ ಮಾಡಿದರೆ ತುಂಬಾ ಮಂದಿ ಮೆಚ್ಚಿಕೊಳ್ಳುವುದೂ ಇದೆ.

ಬಲೂನು ಹಿಡಿದು 'ಜಸ್ಟ್​ ವ್ಹಾವ್ಹ್'​ ಎಂದ ನಿವೇದಿತಾ: ಮಕ್ಳು ಮಾಡ್ಕೊ ಸರಿಯಾಗತ್ತೆ ಅಂದ್ರು ನೆಟ್ಟಿಗರು!

ಈಗ ಎಲ್ಲೆಲ್ಲೂ ದೀಪಾವಳಿಯ ಸಂಭ್ರಮ. ಹಲವು ತಾರೆಯರು ಅಂದದ ಸೀರೆಯುಟ್ಟು, ಆಭರಣಗಳನ್ನು ತೊಟ್ಟು ಅದನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅದೇ ರೀತಿ ನಿವೇದಿತಾ ಗೌಡ ಕೂಡ ಕ್ಯೂಟ್​ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಅಂದದ ಸೀರೆಯುಟ್ಟು, ಅಷ್ಟೇ ಸುಂದರವಾದ ಆಭರಣ ತೊಟ್ಟುಕೊಂಡು ಫೋಟೋಶೂಟ್​ ಮಾಡಿಸಿದ್ದಾರೆ. ಇದನ್ನು ನೋಡಿ ಫ್ಯಾನ್ಸ್​ ಫಿದಾ ಆಗಿದ್ದಾರೆ. ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ಗಳು ತುಂಬಿ ಹೋಗಿವೆ. ಸದಾ ಹೀಗೆಯೇ ಇರಲು ಏನಾಗುತ್ತದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಮದುವೆಯಾದ ಮೇಲೆ ಹೀಗದ್ದರೇನೇ ಚಂದ ಎಂದು ಕೆಲವರು ಕಿವಿ ಮಾತು ಹೇಳುತ್ತಿದ್ದಾರೆ. 

ಕೆಲ ದಿನಗಳ ಹಿಂದೆ ನಿವೇದಿತಾ,  ಸೀರೆಯುಟ್ಟು ಕ್ಯೂಟ್​ ವಿಡಿಯೋ ಒಂದನ್ನು ಶೇರ್​ ಮಾಡಿದ್ದರು. ಅದರಲ್ಲಿ ಅವರು, ತಮ್ಮ ರೆಪ್ಪೆಯನ್ನು ಉದ್ದಕ್ಕೆ ಬೆಳೆಸಿರುವ ಬಗ್ಗೆ ತೋರಿಸಿದ್ದಾರೆ. ತಾವು ರೆಪ್ಪೆ ಉದ್ದ ಬೆಳೆಸುವ ತರಬೇತಿ ಪಡೆದು ಹೀಗೆ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದರು. ಹಸಿರು ಸೀರೆಯಲ್ಲಿ ಕಂಗೊಳಿಸುತ್ತಿದ್ದರೂ ಗರಂ ಆಗಿದ್ದ ಫ್ಯಾನ್ಸ್,  ಸೀರೆ ಹಾಕಿದ್ರೂ ಇಂಗ್ಲೀಷ್ ಶೋಕಿ ಬಿಟ್ಟಿಲ್ಲ ಅಲ್ಲಮ್ಮ ತಾಯಿ..ನಿಂಗೆ ಯೇನ್ ತೊಗೊಂಡು ಹೊಡಿಬೇಕು ಹೇಳು..ದುಡ್ಡು ಮಾಡೋದು ಇಲ್ಲೆ ಹುಟ್ಟಿರೋದು ಇಲ್ಲೆ ಆದ್ರೆ ಬೇರೆ ಭಾಷೆ ಶೋಕಿ ಮಾಡ್ತಿಯ ನಚ್ಕೆ ಆಗೋಲ್ವಾ ನಿಂಗೆ ಎಂದು ಬೈದಿದ್ದರು. ಮದುವೆಯಾದರೂ ಮಂಗಳಸೂತ್ರ ಹಾಕಿದ್ದೇ ಇಲ್ಲ ನಟಿ, ಅದಕ್ಕೂ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.

ವಿರಹ... ಹುಲಿಯ ಉಗುರು ತರಹ... ಡ್ಯಾನ್ಸ್​ ಮೂಲಕ ನೋವು ತೋಡಿಕೊಂಡ ಆ್ಯಂಕರ್​ ಅನುಶ್ರೀ!

Latest Videos
Follow Us:
Download App:
  • android
  • ios