ರಕ್ಷಕ್ ಬುಲೆಟ್‌- ವಿನಯ್‌ಗೆ ರಾಖಿ ಕಟ್ಟಿದ ನಮ್ರತಾ ಗೌಡ; ಮೊದ್ಲು ವಸೂಲಿ ಮಾಡಮ್ಮ ದುಡ್ಡೇ ಬಿಚ್ಚಲ್ಲ ಎಂದ ನೆಟ್ಟಿಗರು

ಮೊದಲ ಸಲ ರಾಖಿ ಕಟ್ಟಿದ ನಮ್ರತಾ ಗೌಡ. ರಕ್ಷಕ್ ಆಂಡ್ ವಿನಯ್ ನನ್ನ ಫ್ಯಾಮಿಲಿ ಎಂದ ನಾಗಿಣಿ...

Bigg boss Namratha Gowda ties rakhi to Rakshak bullet and Vinay gowda in shooting set vcs

ಕನ್ನಡ ಕಿರುತೆರೆಯ ಸುಂದರಿ ನಮ್ರತಾ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸಿ ಟ್ರೋಫಿ ಗೆದ್ದಿಲ್ಲವಾದರೂ ಅಣ್ಣ ಮತ್ತು ತಮ್ಮನನ್ನು ಸಂಪಾದನೆ ಮಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕೊನೆ ಕೊನೆಯ ಸಂಚಿಕೆಗಳಲ್ಲಿ ನಮ್ರತಾ ಗೌಡ ತುಂಬಾ ಸ್ಟ್ರೆಸ್‌ಗೆ ಒಳಗಾಗಿರುವುದನ್ನು ನೋಡಿ ವೀಕ್ಷಕರು ಬೇಸರ ಮಾಡಿಕೊಂಡಿದ್ದರು ಆ ಸಮಯಲ್ಲಿ ಸಪೋರ್ಟ್ ಆಗಿ ನಿಂತವರು ವಿನಯ್ ಗೌಡ. ಹೊರಗಡೆ ನಮ್ರತಾ ಫ್ಯಾಮಿಲಿಗೆ ಸಪೋರ್ಟ್ ಆಗಿ ನಿಂತವರು ರಕ್ಷಕ್ ಬುಲೆಟ್. ಹೀಗಾಗಿ ತಮ್ಮ ಜೀವನದಲ್ಲಿ ಮೊದಲ ಸಲ ರಾಖಿ ಕಟ್ಟುತ್ತಿರುವ ಕ್ಷಣವನ್ನು ಯೂಟ್ಯೂಬ್ ವ್ಲಾಗ್ ಮಾಡಿ ಅಪ್ಲೋಡ್ ಮಾಡಿದ್ದಾರೆ ನಾಗಿಣಿ. 

ಖಾಸಗಿ ಟಿವಿವೊಂದರ ಕಾರ್ಯಕ್ರಮಕ್ಕೆ ನಮ್ರತಾ ಗೌಡ ಶೂಟಿಂಗ್ ಮಾಡುತ್ತಿದ್ದರೆ. ಅದೇ ಸೆಟ್‌ನಲ್ಲಿ ರಕ್ಷಕ್ ಬುಲೆಟ್, ವಿನಯ್ ಗೌಡ ಮತ್ತು ನಿನಾದ ಭಾಗಿಯಾಗಿದ್ದರು. ರಕ್ಷಕ್ ಮತ್ತು ವಿನಯ್‌ಗೆ ಇದು ಸರ್ಪ್ರೈಸ್ ಆಗಲಿ ಎಂದು ನಮ್ರತಾ ವಿಡಿಯೋ ಆರಂಭಿಸುತ್ತಾರೆ. Evil eye ಇರುವ ರಾಖಿಯನ್ನು ರಕ್ಷಕ್‌ಗೆ ಕಟ್ಟಲು ನಿರ್ಧಾರ ಮಾಡುತ್ತಾರೆ. ಟಿವಿಯಲ್ಲಿ ಸೋಷಿಯಲ್ ಮೀಡಿಯಾದಿಂದ ಜಾಸ್ತಿ ದೃಷ್ಟಿ ಆಗುತ್ತಿರುವುದು ರಕ್ಷಕ್‌ಗೆ ಎಂದು ಹೇಳಿ ತಮ್ಮ ಕ್ಯಾರವಾನ್‌ಗೆ ಬರಲು ರಕ್ಷಕ್‌ನ ಕರೆಸಿಕೊಳ್ಳುತ್ತಾರೆ ನಮ್ಮು. 5 ನಿಮಿಷದಲ್ಲಿ ನಮ್ರತಾ ಕ್ಯಾರವಾನ್‌ಗೆ ರಕ್ಷಕ್ ಆಗಮಿಸುತ್ತಾರೆ. 

ಬಿಕಿನಿ ಧರಿಸಿದ್ದಕ್ಕೆ ಅಸಭ್ಯವಾಗಿ ವರ್ತಿಸಿದ ಮೇಕಪ್ ಮ್ಯಾನ್; ಎಲ್ಲೆಲ್ಲಿ ಹೇಗೆಲ್ಲ ಮುಟ್ಟಿದ್ದ ನಂಗೆ ಗೊತ್ತು ಎಂದು ಶಕೀಲಾ

'ರಕ್ಷಕ್ ಎಲಿಮಿನೇಟ್ ಆಗಿ ಹೊರ ಹೋಗುವ ವಾರ ನಾವು ತುಂಬಾನೇ ಕ್ಲೋಸ್ ಆಗಿದ್ದು. ಹೊರ ಬಂದ ಮೇಲೆ ಪಾಪ ರಕ್ಷಕ್ ನನ್ನ ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ನನಗೆ ಕರೆ ಮಾಡಿಲ್ಲ ಅಂದ್ರೂ ನನ್ನ ತಾಯಿಗೆ ಕಾಲ್ ಮಾಡಿ ವಿಚಾರಿಸಿಕೊಳ್ಳುತ್ತಾನೆ. ಅವನ ಈ ಗುಣದಿಂದ ನನಗೆ ತಮ್ಮನ ಭಾವನೆ ಬರುತ್ತದೆ ಅಲ್ಲದೆ ಅವನಿಗೆ ಒಂದು ಚೂರು ಕಲ್ಮಶವಿಲ್ಲದ ಮನಸ್ಸು. ರಕ್ಷಕ್ ಓರಿಜಿನಲ್ ವರ್ಷನ್‌ ಕ್ಲೋಸ್‌ ಆಗಿರುವ ನಮಗೆ ಮಾತ್ರ ಗೊತ್ತಿರುವುದು' ಎಂದು ರಕ್ಷಕ್ ಬಗ್ಗೆ ನಮ್ರತಾ ಮಾತನಾಡಿದ್ದಾರೆ. ಗಿಫ್ಟ್‌ ಎಲ್ಲಿ ಎಂದು ಕೇಳಿದಾಗ ನೀವು ಸರ್ಪ್ರೈಸ್‌ ಆಗಿ ರಾಖಿ ಕಟ್ಟಿದ್ದೀರಾ ನಾನು ಸರ್ಪ್ರೈಸ್ ಆಗಿ ಗಿಫ್ಟ್ ಕೊಡುತ್ತೀನಿ ಎಂದು ಹೇಳಿ ಕಪ್‌ಕೇಕ್‌ ಡಬ್ಬವನ್ನು ನಮ್ರತಾ ಕೈಗೆ ಕೊಡುತ್ತಾರೆ. ಇಷ್ಟರಲ್ಲಿ ಮುಗಿಸಿ ಬಿಡಬೇಡ ಎಂದು ನಮ್ರತಾ ಹೇಳಿದ್ದಕ್ಕೆ ಇಲ್ಲ ಇಲ್ಲ ಕೊಟ್ಟೇ ಕೊಡುತ್ತೀನಿ ಎಂದಿದ್ದಾರೆ ರಕ್ಷಕ್. 

ಬೆನ್ನಿನ ಮೇಲೆ ಶಂಕು,ಚಕ್ರ ಟ್ಯಾಟೂ ಹಾಕಿಸಿದ ಕಿರುತೆರೆ ನಟಿ ಅನು; ತಿಮ್ಮಪ್ಪನಿಗಿದು ಅವಮಾನ ಎಂದ ನೆಟ್ಟಿಗರು!

ಇನ್ನು ವಿನಯ್ ಗೌಡ ಇದ್ದ ಕ್ಯಾರವಾನ್‌ಗೆ ಭೇಟಿ ನೀಡಿ ರಾಖಿ ಕಟ್ಟಿದ ನಮ್ರತಾ 'ಬಿಗ್ ಬಾಸ್ ಮನೆಯಲ್ಲಿ ನನ್ನ ಪರವಾಗಿ ನಿಂತುಕೊಂಡ ವ್ಯಕ್ತಿ ಅಂದ್ರೆ ವಿನಯ್ ಗೌಡ. ಈಗಲೂ ನಾನು ಅವರನ್ನು ಬ್ರೂ ಎಂದು ಕರೆಯುತ್ತೀನಿ. ಕುಟುಂಬದಲ್ಲಿ ನನಗೆ ಅಣ್ಣ ಅಂತ ಯಾರೂ ಇಲ್ಲ ಆದರೆ ನನಗೆ ಆ ಸ್ಥಾನವನ್ನು ವಿನಯ್ ಕೊಟ್ಟರು ಅದಿಕ್ಕೆ ಕಟ್ಟಿದೆ. ಶೂಟಿಂಗ್‌ ಸೆಟ್‌ನಲ್ಲಿ ಸಿಗದಿದ್ದರೂ ನಾನು ಮನೆಗೆ ಹೋಗಿ ಕಟ್ಟುವೆ ಅಷ್ಟು ಮುಖ್ಯವಾಗುತ್ತಾರೆ' ಎಂದು ಹೇಳಿದ್ದಾರೆ. ಶೀಘ್ರದಲ್ಲಿ ನಿನ್ನ ಮನೆಗೆ ನಿನ್ನ ಗಿಫ್ಟ್‌ ತಲುಪುತ್ತದೆ ಎಂದು ವಿನಯ್ ಭರವಸೆ ಕೊಟ್ಟಿದ್ದಾರೆ. ನಮ್ರತಾ ರಾಖಿ ಕಟ್ಟಿದ ತಕ್ಷಣವೇ ಗಿಫ್ಟ್‌ ವಸೂಲಿ ಮಾಡಬೇಕು ನೀವು ಇವರನ್ನು ನಂಬಬೇಡಿ ದುಡ್ಡು ಬಿಚ್ಚಲ್ಲ ಆಮೇಲೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. 

 

Latest Videos
Follow Us:
Download App:
  • android
  • ios