ಮಲಯಾಳಂ ಬಿಗ್‌ಬಾಸ್ ಸೀಸನ್ 3 ಫೀನಾಲೆ ಟ್ರೋಫಿ ಜೊತೆ 75 ಲಕ್ಷದ ಮನೆ ಗೆದ್ದ ನಟ ಮಣಿಕುಟ್ಟನ್

ಕೊರೋನಾ ವೈರಸ್, ಲಾಕ್‌ಡೌನ್ ಅಡಚಣೆಯ ಮಧ್ಯೆಯೇ ಮಲಯಾಳಂ ಬಿಗ್‌ಬಾಸ್ ಸೀಸನ್ 8 ಮುಕ್ತಾಯವಾಗಿದೆ. ಮಾಲಿವುಡ್ ನಟ ಮಣಿಕುಟ್ಟನ್ ಬಿಗ್‌ಬಾಸ್ ಸೀಸನ್ ಮೂರರಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದು ಟ್ರೋಫಿ ಜೊತೆ ಬರೋಬ್ಬರಿ 78 ಲಕ್ಷದ ಮನೆಯನ್ನು ಪಡೆದಿದ್ದಾರೆ.

ಭಾನುವಾರ ನಡೆದ ಮಲಯಾಳಂ ಬಿಗ್‌ಬಾಸ್ ಸೀಸನ್ ಮೂರರ ಗ್ರ್ಯಾಂಡ್‌ ಫಿನಾಲೆಯಲ್ಲಿ ನಟ ಮಣಿಕುಟ್ಟನ್‌ ಅವರನ್ನು ವಿನ್ನರ್ ಆಗಿ ಘೋಷಿಸಲಾಗಿದೆ. ಮೂರು ಗಂಟೆಯ ಎಪಿಸೋಡ್‌ನಲ್ಲಿ ಡ್ಯಾನ್ಸ್ ಸೇರಿದಂತೆ ಹಲವು ಸ್ಟೇಜ್ ಪರ್ಫಾರ್ಮೆನ್ಸ್‌ಗಳೂ ಕೂಡಾ ನಡೆದಿವೆ. ಮೋಹನ್ ಲಾಲ್ ನಡೆಸಿ ಕೊಡುವ ಕಾರ್ಯಕ್ರಮದಲ್ಲಿ ಮಾಜಿ ಬಿಗ್‌ಬಾಸ್ ಸ್ಪರ್ಧಿಗಳೂ ಇದ್ದರು.

ಜಾಹ್ನವಿ, ಖುಷಿ ಇರದಿದ್ರೆ ಅಪ್ಪನ ಹೇಟ್ ಮಾಡ್ತಿದ್ರಂತೆ ಅರ್ಜುನ್

ಅನೂಪ್ ಕೃಷ್ಣನ್, ರಿತು ಮಂತ್ರ, ನೊಬಿ ಮಾರ್ಕೋಸ್, ರಂಝಾನ್ ಮಹಮ್ಮದ್, ಮಣಿಕುಟ್ಟನ್, ಕಿಡಿಲಂ ಫಿರೋಝ್, ಸಾಯಿ ವಿಷ್ಣು, ಡಿಂಪಲ್ ಭಾಲ್ ಸ್ಪರ್ಧಿಸಿದ್ದರು. ಇವರಲ್ಲಿ ಮಣಿಕುಟ್ಟನ್ ಜನ ಆಯ್ಕೆಯ ವಿನ್ನರ್ ಆಗಿದ್ದಾರೆ.ಕಾರ್ಯಕ್ರಮದ ಎಪಿಸೋಡ್ ಏಷ್ಯಾನೆಟ್‌ನಲ್ಲಿ ಪ್ರಸಾರವಾಗಿದ್ದು ಇದಲ್ಲದೆ ಡಿಸ್ನಿ+ ಹಾಟ್‌ಸ್ಟಾರ್‌ನಲಲ್ಲಿಯೂ ವೀಕ್ಷಿಸಬಹುದಾಗಿದೆ.

ಕೇರಳ: ಸತತ 6 ದಿನಗಳ ಬಳಿಕ 20,000ಕ್ಕಿಂತ ಕಡಿಮೆ ಪ್ರಕರಣ!

ಮಲಯಾಳಂ ಬಿಗ್‌ಬಾಸ್ 95 ದಿನಗಳನ್ನು ಪೂರೈಸಿದ್ದು, ಶೋ ಮುಗಿಯಲು ಇನ್ನೂ 5 ದಿನಗಳು ಬಾಕಿ ಇದ್ದವು. ಆದರೆ ಕೊರೋನಾ ಹೆಚ್ಚಳದಿಂದಾಗಿ ಶೋ ಮುಗಿಸಲು ಅನುಮತಿ ನಿರಾಕರಿಸಲಾಗಿದೆ. ಎಲ್ಲರಿಗೂ ಪಿಪಿಇ ಕಿಟ್ ಒದಗಿಸಿ ತಕ್ಷಣ ಸೆಟ್‌ನಿಂದ ಹೊರಗೆ ಕಳುಹಿಸಲಾಗಿದ್ದು, ಬಿಗ್‌ಬಾಸ್ ಸೆಟ್ ಸೀಲ್ ಮಾಡಲಾಗಿದೆ. ಇದಕ್ಕೆ 1 ಲಕ್ಷ ರೂ ದಂಡವನ್ನೂ ವಿಧಿಸಲಾಗಿದೆ ಎಂದು ತಿರುವಲ್ಲೂರ್ ವಿಭಾಗೀಯ ತೆರಿಗೆ ಅಧಿಕಾರಿ ಪ್ರೀತಿ ಭಾರ್ಗವಿ ಹೇಳಿದ್ದಾರೆ.

ದೇಶದಲ್ಲಿಯೇ ನೆರೆ ರಾಜ್ಯ ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಕುತೂಹಲಕಾರಿ ವಿಚಾರವೆಂದರೆ ಇಲ್ಲಿ ಕೊರೋನಾ ಪರೀಕ್ಷೆಯ ಸಂಖ್ಯೆಯೂ ಹೆಚ್ಚಾಗುತ್ತಿದೆ. ಏಳು ದಿನಗಳ ಎವರೇಜ್‌ ಡಾಟಾ ಪ್ರಕಾರ ಅತ್ಯಧಿಕ ಕೊರೋನಾ ಟೆಸ್ಟ್‌ಗಳನ್ನು ಕೇರಳದಲ್ಲಿ ಮಾಡಲಾಗಿದೆ. ಕೇರಳದಲ್ಲಿ ಸೋಮವಾರ ಬರೋಬ್ಬರಿ 13984 ಕೊರೋನಾ ಪಾಸಿಟಿವ್ ಕೇಸ್ ವರದಿಯಾಗಿದೆ. ಸದ್ಯ ಕೇರಳದಲ್ಲಿ 1,65,322 ಸಕ್ರಿಯ ಸೋಂಕಿತರಿದ್ದು, ಸೋಮವಾರ ಗಡಿನಾಡು ಕಾಸರಗೋಡಿನಲ್ಲಿ 703 ಪಾಸಿಟಿವ್ ಕೇಸ್ ಪತ್ತೆಯಾಗಿದೆ.

View post on Instagram