ಬೆಂಗಳೂರು(ಮಾ. 07) ಬಿಗ್‌  ಬಾಸ್ ಮನೆಯಿಂದ ಮೊದಲ ವಾರದ ಎಲಿಮಿನೇಶನ್ ಆಗಿದೆ. ಹದಿನೇಳು ಜನರಲ್ಲಿ ಟಿಕ್ ಟಾಕ್ ಮೂಲಕ ಹೆಸರು ಮಾಡಿದ್ದ ಧನುಶ್ರೀ ಮನೆಯಿಂದ ಹೊರಬಂದಿದ್ದಾರೆ.

ಮನೆಗೆ ಮೊದಲನೆಯವರಾಗಿ ಧನುಶ್ರೀ ಪ್ರವೇಶ ಮಾಡಿದ್ದರು.  ಟಾಸ್ಕ್ ಗಳಲ್ಲಿ ಸರಿಯಾಗಿ ಪರಿಶ್ರಮ ತೋರದೆ ಮನೆಯವರಿಂದ ಕಳಪೆ  ಬಿರುದನ್ನು ಪಡೆದುಕೊಂಡು ಜೈಲು ಸೇರಿದ್ದರು.  ಬಿಗ್ ಬಾಸ್ ಧನುಶ್ರೀಗೆ ತರಕಾರಿ ಕತ್ತರಿಸುವ ಶಿಕ್ಷೆಯನ್ನು ನೀಡಿದ್ದರು.  ಮನೆಯಿಂದ ಹೊರಬರುವಾಗ ಬಿಗ್ ಬಾಸ್ ನೀಡುವ ವಿಶೇಷ ಅಧಿಕಾರ ಬಳಸಿಕೊಂಡ ಧನುಶ್ರೀ ಈ ವಾರದ ನಾಮಿನೇಶನ್ ನಿಂದ ರಘು ಅವರನ್ನು ಸೇಫ್ ಮಾಡಿದರು. 

ಸ್ನಾನಕ್ಕೂ ಧನುಶ್ರೀ ಮೇಕಪ್ ಮಾಡಿಕೊಂಡೇ ಹೋಗ್ತಾರ?

ಬಿಗ್ ಬಾಸ್ ಮನೆ ಯಲ್ಲಿ ಭಾನುವಾರ ಕಿಚ್ಚ ಸುದೀಪ್ ಟೀ ಮಾಡುವ  ಕತೆಯನ್ನು ಎತ್ತಿಕೊಂಡರು. ಪ್ರಶಾಂತ್ ಸಂಬರಗಿಯವರಿಂದ ಆರಂಭವಾದ ಟೀ ಕತೆ ಚಂದ್ರಕಲಾ ಅವರವರೆಗೆ ತಲುಪಿತು. ಟೀ ಮಾಡುವುದು ಹೇಗೆ ಎಂದು ಮೇಲಿಂದ ಮೇಲೆ ಪ್ರಶ್ನೆ ಕೇಳಿ ವಿಭಿನ್ನ  ಉತ್ತರ ಪಡೆದುಕೊಂಡರು.