ವಿನಯ್, ಮೈಕೆಲ್ ಮಾಡಿದ ತಪ್ಪಿಗೆ ಬಿಗ್ ಬಾಸ್ ಕೊಟ್ಟ ಶಿಕ್ಷೆ ನೋಡಿ ಹೌಹಾರಿದ ಸ್ಪರ್ಧಿಗಳು!
ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಮಾಡಿದ ತಪ್ಪಿನಿಂದ ಎಲ್ಲರೂ 50ಕೆಜಿ ಭಾರ ಹೊರಬೇಕಾಗಿದ್ದು, ಈ ಬಗ್ಗೆ ಮನೆಯ ಹೆಚ್ಚಿನ ಸದಸ್ಯರು ವಿನಯ್ ಮೇಲೆ ಸಿಟ್ಟಾಗಿದ್ದಾರೆ. ಕಾರಣ, ಓಸಿಡಿ ಹಾಗೆ ಹೀಗೆ ಎಂದು ಯಾವಾಗಲೂ ರೂಲ್ಸ್ ಬಗ್ಗೆ ಮಾತನಾಡುತ್ತಿದ್ದ ವಿನಯ್ ಅವರೇ ಸ್ವತಃ ರೂಲ್ಸ್ ಬ್ರೇಕ್ ಮಾಡಿ ಮನೆಯ ಎಲ್ಲರೂ ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 10 ಮೂರನೆಯ ವಾರಕ್ಕೆ ಕಾಲಿಟ್ಟಿದೆ. ಮೂರನೆಯ ವಾರದ ಮೊದಲ ದಿನದಂದು ಮನೆಯ ಸದಸ್ಯರೆಲ್ಲರೂ 50 ಕೆಜಿ ಭಾರದ ಮೂಟೆಯನ್ನು ಹೊರುವ ಪ್ರಮೇಯ ಬಂದಿದೆ. ಕಾರಣ ವಿನಯ್ ಮತ್ತು ಮೈಕೆಲ್ ಅಜಯ್. ಬಿಗ್ ಬಾಸ್ ಮನೆಯ ಸ್ಮೋಕಿಂಗ್ ಜೋನ್‌ನಲ್ಲಿ ಏಕಕಾಲಕ್ಕೆ ಒಬ್ಬರಿಗಂತ ಹೆಚ್ಚು ಜನರು ಅಲ್ಲಿ ಇರುವಂತಿಲ್ಲ ಎಂಬ ನಿಯಮವಿದ್ದು, ವಿನಯ್ ಮತ್ತು ಮೈಕೆಲ್ ಆ ನಿಯಮವನ್ನು ಮುರಿದು ಇಬ್ಬರೂ ಒಟ್ಟಿಗೇ ಸಿಗರೆಟ್ ಸೇದಿದ್ದಾರೆ. ಈ ಕಾರಣಕ್ಕೆ ಈಗ ಮನೆಯ ಎಲ್ಲ ಸದಸ್ಯರೂ ಶಿಕ್ಷೆ ಅನುಭವಿಸುವಂತಾಗಿದೆ.
ಹೌದು, ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಮಾಡಿದ ತಪ್ಪಿನಿಂದ ಎಲ್ಲರೂ 50ಕೆಜಿ ಭಾರ ಹೊರಬೇಕಾಗಿದ್ದು, ಈ ಬಗ್ಗೆ ಮನೆಯ ಹೆಚ್ಚಿನ ಸದಸ್ಯರು ವಿನಯ್ ಮೇಲೆ ಸಿಟ್ಟಾಗಿದ್ದಾರೆ. ಕಾರಣ, ಓಸಿಡಿ ಹಾಗೆ ಹೀಗೆ ಎಂದು ಯಾವಾಗಲೂ ರೂಲ್ಸ್ ಬಗ್ಗೆ ಮಾತನಾಡುತ್ತಿದ್ದ ವಿನಯ್ ಅವರೇ ಸ್ವತಃ ರೂಲ್ಸ್ ಬ್ರೇಕ್ ಮಾಡಿ ಮನೆಯ ಎಲ್ಲರೂ ಶಿಕ್ಷೆ ಅನುಭವಿಸುವಂತೆ ಮಾಡಿದ್ದಾರೆ. ಈ ಬಗ್ಗೆ ಮನೆಯ ಸದಸ್ಯರು ಬಹಿರಂಗವಾಗಿಯೇ ವಿನಯ್ ಮತ್ತು ಮೈಕೇಲ್ ಮೇಲೆ ಅಸಮಾಧಾನ ಹೊರಹಾಕುತ್ತಿದ್ದಾರೆ.
Bigg Boss Kannada: ನಿನ್ನನ್ನು ಪರಿಚಯಿಸಲು ನಿನ್ನಪ್ಪ ಯಾಕೆ ಬಂದಿಲ್ಲ, ನಂಗೊತ್ತು ಆ ಗುಟ್ಟು ಎಂದ ಸುದೀಪ್
ಡ್ರೋನ್ ಪ್ರತಾಪ್ "ಬೇರೆ ಯಾರಾದ್ರೂ ಈ ತಪ್ಪು ಮಾಡಿದ್ರೆ ಅವ್ರು ಬದುಕೋಕೆ ಬಿಡ್ತಾ ಇದ್ರಾ?" ಎಂದು ಹೇಳಿದ್ದರೆ ಇನ್ನೊಬ್ಬರು ಬಿಗ್ ಬಾಸ್ ಮನೆಯಲ್ಲಿ ಬೇರೆಯವರು ತಪ್ಪು ಮಾಡಿದರೂ ನಾವು ಶಿಕ್ಷೆ ಅನುಭವಿಸಬೇಕಾಗುತ್ತದೆ" ಎಂದು ನೊಂದು ನುಡಿದಿದ್ದಾರೆ. ಒಟ್ಟಿನಲ್ಲಿ, ತಮ್ಮ ಜೀವನದಲ್ಲಿ ಎಂದೂ ಅಷ್ಟು ಭಾರ ಹೊರದ ಕೆಲವರು ಅಲ್ಲಿ ಬಿಗ್ ಬಾಸ್ ಮನೆಯಲ್ಲಿ ಭಾರೀ ಭಾರ ಹೊರಬೇಕಾಗಿದ್ದು, ಅದನ್ನು ಕಷ್ಟಪಟ್ಟು ಮಾಡಲು ಪ್ರಯತ್ನಿಸಿದ್ದಾರೆ.
Bigg Boss Kannada:ಬೇಸರದಲ್ಲಿ ಬಳಲಿದ ಭಾಗ್ಯಶ್ರೀ, ಸ್ವಿಮ್ಮಿಂಗ್ ಪೂಲ್‌ನಲ್ಲಿ ಮುಳುಗೆದ್ದಿದ್ದೇಕೆ ರಣಶಕ್ತಿ ತಂಡ
ಅಂದಹಾಗೆ, ಈ ವಾರದಲ್ಲಿ ಏನೇನು ಆಗಲಿವೆ? ಯಾವ್ಯಾವ ಸರ್ಪೈಸ್‌ಗಳು ಕಾದಿವೆ. ಎಂಬುದನ್ನು ತಿಳಿದುಕೊಳ್ಳುದಕ್ಕಾಗಿ JioCinemaದಲ್ಲಿ ಬಿಗ್‌ಬಾಸ್ ಕನ್ನಡ ಉಚಿತ ನೇರಪ್ರಸಾರ ವೀಕ್ಷಿಸುತ್ತಿರಿ. ವಾರದ ಹೈಲೈಟ್‌ಗಳನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ: https://jiocinema.onelink.me/fRhd/9n41xkpg/ ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ದೈನಂದಿನ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಹಾಗೂ ಶನಿವಾರ-ಭಾನುವಾರ ರಾತ್ರಿ 9.00ಕ್ಕೆ ವೀಕ್ಷಿಸಬಹುದು.