ಹಲವು ದಿನಗಳಿಂದ ಟಿಆರ್ ಪಿ ರಾಜನಾಗಿ ಮೆರೆದ ಬಿಗ್ ಬಾಸ್ ಮುಕ್ತಾಯವಾಗಿದೆ. ಕುಂದಾಪುರದ ಹುಡುಗ ಶೈನ್ ಶೆಟ್ಟಿ ಮುಡಿಗೆ ಕಿರೀಟ ಸಿಕ್ಕಿದೆ. ಹಾಸ್ಯ  ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ. ಆದರೆ ಇದೆಲ್ಲದಕ್ಕೂ ಮೀರಿದ ಬಿಗ್ ಬಾಸ್ ರಹಸ್ಯ ಸುದ್ದಿಯೊಂದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಬಿಗ್ ಬಾಸ್ ಆರಂಭವಾದ ಎರಡೋ ಅಥವಾ ಮೂರನೇ ವಾರದ ಮಧ್ಯೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಮನೆಯಲ್ಲಿ ಒಂದು ಕಪ್ಪುಚುಕ್ಕೆ ಇದ್ದು ಅದನ್ನು ಪತ್ತೆಮಾಡಬೇಕು ಎಂದು ಹೇಳಲಾಗಿತ್ತು. ಬಿಗ್ ಬಾಸ್ 113 ದಿನಗಳ ಕಾಲ ನಡೆದು ಅಂತ್ಯ ಕಂಡರೂ ಕಪ್ಪು ಚುಕ್ಕೆ ಮಾತ್ರ ಯಾರೆಂದು ಪತ್ತೆಯಾಗಲೇ ಇಲ್ಲ!

ಮೊದಮೊದಲು ವಾರದ ಕತೆ ಕಿಚ್ಚನ ಜತೆಯಲ್ಲಿ ಈ ವಿಚಾರ ಚರ್ಚೆಗೆ ಬರುತ್ತಿತ್ತು. ನಂತರ ಅದು ನಿಂತು ಹೋಯಿತು.  ಇದೀಗ ಬಿಗ್ ಬಾಸ್ ಮುಗಿದಿದೆ. ಆದರೆ ಕಪ್ಪು ಯಾರು ? ಚುಕ್ಕೆ ಎಲ್ಲಿ? ಎಲ್ಲವೂ ನಿಗೂಢ ರಹಸ್ಯ!