ʼಬಿಗ್‌ ಬಾಸ್ʼ‌ ಖ್ಯಾತಿಯ ನಿವೇದಿತಾ ಗೌಡ ಇತ್ತೀಚೆಗೆ ಮಾದಕ ಫೋಟೋ, ವಿಡಿಯೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. ಇವರ ಜೊತೆ ಮಾದಕ ರೀಲ್ಸ್‌ ಮಾಡುವ ಆ ಲೇಡಿ ಯಾರು ಎನ್ನೋದು ಪ್ರಶ್ನೆಯಾಗಿದೆ.  

ʼಬಿಗ್‌ ಬಾಸ್ʼ‌ ರಿಯಾಲಿಟಿ ಶೋ ಖ್ಯಾತಿಯ ನಿವೇದಿತಾ ಗೌಡ ಅವರು ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದು, ನಿತ್ಯವೂ ಮಾದಕ, ಮೋಹಕ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಮಧ್ಯೆ ಇವರ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಇನ್ನೋರ್ವ ಮಹಿಳೆ ಕೂಡ ಸೌಂಡ್‌ ಮಾಡ್ತಿದ್ದಾರೆ.

ವಾಣಿಶ್ರೀ ಯಾರು? 
ನಿವೇದಿತಾ ಗೌಡ ಅವರು ಆ ಹುಡುಗಿ ಜೊತೆ ರೀಲ್ಸ್‌ ಮಾಡುತ್ತಿರುತ್ತಾರೆ, ಪ್ರವಾಸ ಮಾಡುತ್ತಾರೆ, ಶಾಪಿಂಗ್‌ ಕೂಡ ಹೋಗುತ್ತಾರೆ. ನಿವೇದಿತಾ ಗೌಡ ಅವರ ಜೊತೆಗಿರುವವರ ಹೆಸರು ವಾಣಿಶ್ರೀ ಎಸ್‌ ಎಂದು. ವಾಣಿಶ್ರೀ ಯಾರು? ಏನು ಮಾಡುತ್ತಿದ್ದಾರೆ? ನಿವೇದಿತಾಗೂ ಇವರಿಗೂ ಯಾವಾಗ ಪರಿಚಯ ಆಯ್ತು ಮುಂತಾದ ಪ್ರಶ್ನೆಗಳಿಗೆ ನಿವೇದಿತಾ ಆದರೂ ಉತ್ತರ ಕೊಡಬೇಕಿದೆ. ನಿವೇದಿತಾ ಗೌಡ ಅವರಂತೆಯೇ ವಾಣಿಶ್ರೀ ಕೂಡ ಡ್ರೆಸ್‌ ಧರಿಸಿ, ರೀಲ್ಸ್‌ ಮಾಡುತ್ತಿರುತ್ತಾರೆ. ಈಗಾಗಲೇ ಇವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 16000 ಫಾಲೋವರ್ಸ್‌ ಇದ್ದಾರೆ. 

ಶೆಡ್​ಗೆ ಬರಬೇಕಿಲ್ಲ.. ಇಲ್ಲೇ ಫಿನಿಷ್! ಕೆಟ್ಟ ಕಮೆಂಟ್​ ಮಾಡೋರಿಗೆ ನಿವೇದಿತಾ ಕೊಟ್ರಾ ಎಚ್ಚರಿಕೆ- ಹಾಗಂತ ಬಿಡ್ತಾರಾ?

ಮಾದಕ ರೀಲ್ಸ್‌ ಮಾಡುವ ವಾಣಿಶ್ರೀ
ವಾಣಿಶ್ರೀ ಯಾರು ಎಂದು ಅನೇಕರಿಗೆ ಕುತೂಹಲ ಶುರುವಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ 2021ರಿಂದ ಪೋಸ್ಟ್‌ ಹಂಚಿಕೊಳ್ತಿರುವ ಇವರು, ತಮ್ಮ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ವಾಣಿಶ್ರೀ ಅವರ ಮಾದಕ ರೀಲ್ಸ್‌ ನೋಡಬಹುದೇ ಹೊರತು, ಅವರ ಐಡೆಂಟಿಟಿ ಹೇಳುವ ಯಾವ ವಿಚಾರವೂ ಅಲ್ಲಿ ಕಾಣಸಿಗೋದಿಲ್ಲ. ‌

ನಿವೇದಿತಾಗೆ ವಾಣಿಶ್ರೀ ಸಾಥ್
ಅಂದಹಾಗೆ ನಿವೇದಿತಾ ಗೌಡ ಅವರು ವಿದೇಶಕ್ಕೆ ಪ್ರವಾಸ ಹೋದಾಗಲೂ ವಾಣಿ ಸಾಥ್‌ ಕೊಟ್ಟಿದ್ದರು. ವಾಣಿ ಜೊತೆಗೆ ಸಮಯ ಕಳೆದಾಗೆಲ್ಲ ನಿವೇದಿತಾ ಗೌಡ ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಳ್ಳುತ್ತಿರುತ್ತಾರೆ.

ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿ ಭಾಗಿ! 
ನಿವೇದಿತಾ ಗೌಡ ಅವರು ಸದ್ಯ ʼಬಾಯ್ಸ್‌ v/s ಗರ್ಲ್ಸ್ʼ‌ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಉದ್ದುದ್ದದ ಉಗುರುಗಳನ್ನು ಧರಿಸಿ, ಅದರಲ್ಲಿಯೇ ಬಾಳೆಹಣ್ಣು ಕಟ್‌ ಮಾಡಿ ಅವರು ಟ್ರೋಲ್‌ ಆಗಿದ್ದರು. ನಿವೇದಿತಾ ಗೌಡ ಅವರ ಮಾತುಗಳು ಕೂಡ ಟ್ರೋಲ್‌ ಆಗುತ್ತಿರುತ್ತವೆ.‌

ದಿವ್ಯ-ಭವ್ಯ ಬಿಗ್‌ಬಾಸ್‌ ಶೋನ ದುಃಖಿ ಆತ್ಮಗಳಂತೆ, ಆದ್ರೆ ನಿವೇದಿತಾ ಗೌಡ ಹಾಗಲ್ವಂತೆ!

ಲವ್‌, ಮದುವೆ, ಡಿವೋರ್ಸ್
ಅಂದಹಾಗೆ ನಿವೇದಿತಾ ಗೌಡ ಅವರು 19ನೇ ವಯಸ್ಸಿಗೆ ʼಬಿಗ್‌ ಬಾಸ್‌ ಕನ್ನಡ ಸೀಸನ್‌ 5ʼ ಶೋನಲ್ಲಿ ಭಾಗವಹಿಸಿದ್ದರು. ಇದಾದ ನಂತರ ಅದೇ ಶೋನಲ್ಲಿ ಭಾಗವಹಿಸಿದ್ದ ಸಂಗೀತ ಸಂಯೋಜಕ, ಗಾಯಕ ಚಂದನ್‌ ಶೆಟ್ಟಿ ಅವರನ್ನು ಪ್ರೀತಿಸಿದರು. ಮೈಸೂರಿನ ಯುವ ದಸರಾದಲ್ಲಿ ನಿವೇದಿತಾಗೆ ಚಂದನ್‌ ಪ್ರೇಮ ನಿವೇದನೆ ಮಾಡಿದರು. ಈ ವಿಷಯ ದೊಡ್ಡ ಕಾಂಟ್ರವರ್ಸಿ ಆಯ್ತು. ಆ ನಂತರದಲ್ಲಿ ಈ ಜೋಡಿ ಅದ್ದೂರಿಯಾಗಿ ಮದುವೆ ಆಯ್ತು. ಈ ಮದುವೆಗೆ ಪುನೀತ್‌ ರಾಜ್‌ಕುಮಾರ್‌ ಸೇರಿ ಚಿತ್ರರಂಗದ ಅನೇಕರು ಆಗಮಿಸಿದ್ದರು. ಆ ನಂತರ ʼರಾಜಾ ರಾಣಿʼ ಶೋನಲ್ಲಿಯೂ ಭಾಗವಹಿಸಿದರು. ಆಮೇಲೆ ʼಗಿಚ್ಚಿ ಗಿಲಿಗಿಲಿʼ ಶೋನಲ್ಲಿಯೂ ನಿವೇದಿತಾ ಸ್ಪರ್ಧಿಯಾಗಿ, ತಮ್ಮ ನಟನಾ ಸಾಮರ್ಥ್ಯ ಪ್ರದರ್ಶನ ಮಾಡಿದರು. ಪರಸ್ಪರ ಒಪ್ಪಿಗೆಯ ಮೇರೆಗೆ ಈ ಜೋಡಿ ಕಳೆದ ವರ್ಷ ಡಿವೋರ್ಸ್‌ ಪಡೆದಿದೆ. ಹೊಂದಾಣಿಕೆ ಸಮಸ್ಯೆ ಆಗ್ತಿದೆ, ಹತ್ತಿರ ಇದ್ದು ಕಷ್ಟ ಅನುಭವಿಸೋದರ ಬದಲು ದೂರ ಇರೋದು ಒಳ್ಳೆಯದು ಎಂದು ಈ ಜೋಡಿ ಡಿವೋರ್ಸ್‌ ಪಡೆದಿದೆಯಂತೆ.