ಸಂತುಗೆ ಮುಖ ಕೊಟ್ಟು ನೋಡೋಕೆ ನಾಚಿಕೆ ಆಗ್ತಿದೆ ಎಂದ ಮಾನಸ
ಬಿಗ್‌ಬಾಸ್‌ನಿಂದ ಆರನೇ ವಾರದಲ್ಲಿ ಹೊರಬಂದ ಮಾನಸ ಸಂತೋಷ್, ಸವಿರುಚಿ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸಂತುಗೆ ಮುಖ ತೋರಿಸಲು ನಾಚಿಕೆ ಎಂದ ಮಾನಸಾ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳ ಬಗ್ಗೆಯೂ ಮಾತನಾಡಿದ್ದಾರೆ.
ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್-11 ಆರು ವಾರಗಳನ್ನು ಮುಗಿಸಿ ಏಳನೇ ವಾರಕ್ಕೆ ಕಾಲಿಟ್ಟಿದೆ. ಆರನೇ ವಾರ ಹಾಸ್ಯ ಕಲಾವಿದೆ ಮಾನಸ ಸಂತೋಷ್ ಮನೆಯಿಂದ ಹೊರಗೆ ಬಂದಿದ್ದಾರೆ. ಮನೆಯಿಂದ ಹೊರಗೆ ಬಂದಿರುವ ಮಾನಸ ಹಲವು ಸಂದರ್ಶನಗಳನ್ನು ನೀಡುತ್ತಿದ್ದು, ಬಿಗ್‌ಬಾಸ್ ಹೌಸ್ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಅಡುಗೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿರುವ ಮಾನಸ, ಆರನೇ ವಾರಕ್ಕೆ ಬಿಗ್‌ಬಾಸ್ ಮನೆಯಿಂದ ಹೊರ ಬಂದಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸವಿರುಚಿ ಸೀಸನ್-3 ಶೋಗೆ ಬಂದಿರುವ ಮಾನಸ, ರುಚಿಯಾದ ಅಡುಗೆ ತಯಾರಿಸಿದ್ದಾರೆ. ಇದಕ್ಕೂ ಮೊದಲು ಬಿಗ್‌ಬಾಸ್ ಮನೆಯಿಂದ ಹೊರ ಬಂದಿರುವ ಜಗದೀಶ್, ಹಂಸಾ ಸೇರಿದಂತೆ ಎಲ್ಲಾ ಸ್ಪರ್ಧಿಗಳು ಸವಿರುಚಿ ಶೋಗೆ ಆಗಮಿಸಿ ಸೌಟು ಹಿಡಿದು ಅಡುಗೆ ತಯಾರಿಸಿದ್ದರು. ಇದೀಗ ಮಾನಸ ಅಡುಗೆ ತಯಾರಿಸಲು ಬಂದಿದ್ದಾರೆ.
ಸವಿರುಚಿಯಲ್ಲಿ ಅಡುಗೆ ತಯಾರಿಸುತ್ತಾ, ಬಿಗ್‌ಬಾಸ್ ಮನೆಗೆ ಹೋಗಿ ಆಟ ಆಡು ಅಂತ ಸಂತು ನನ್ನನ್ನು ಕಳುಹಿಸಿದ. ಆದ್ರೆ ನಾನು ಆರನೇ ವಾರಕ್ಕೆ ಮನೆಯಿಂದ ಹೊರಬಂದೆ. ಅಲ್ಲಿಂದ ಬಂದ ಬಳಿಕ ಸಂತುಗೆ ಮುಖಕ್ಕೆ ಮುಖ ಕೊಟ್ಟು ಮಾತಾಡೋಕೆ ನಾಚಿಕೆ ಆಯ್ತು ಎಂದು ಹೇಳುವ ಮೂಲಕ ಸಂತೋಷ್ ನಿರೀಕ್ಷೆಯನ್ನು ಹುಸಿ ಮಾಡಿದೆ ಎಂದು ಮಾನಸಾ ಹೇಳಿದ್ದಾರೆ.
ಬಿಗ್‌ಬಾಸ್ ಮನೆಯೊಳಗಿದ್ದ ಸಂದರ್ಭದಲ್ಲಿ ಮಾನಸ ಅವರ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಟ್ರೋಲ್ ಬಗ್ಗೆಯೂ ಸಂದರ್ಶನವೊಂದರಲ್ಲಿ ಮಾನಸ ಮಾತನಾಡಿದ್ದಾರೆ. ಮೊದಲು ಟ್ರೋಲ್ ನೋಡಿದಾಗ ತುಂಬಾನೇ ಬೇಸರ ಆಯ್ತು. ನಂತರ ಗಂಡ ಸಂತು ಎಲ್ಲವನ್ನು ತಿಳಿ ಹೇಳಿದಾಗ ಟ್ರೋಲ್‌ಗಳನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಿದ್ದೇನೆ. ಬಹುಶಃ ಟ್ರೋಲ್ ಮಾಡೋರು ನನ್ನ ಮುಖದ ಕೆಟ್ಟ ಎಕ್ಸ್‌ಪ್ರೆಶನ್ ಬರೋವರೆಗೂ ಕಾಯುತ್ತಿದ್ದು, ಅದನ್ನು ಕಟ್ ಮಾಡಿ ಹಂದಿ ಫೋಟೋ ಜೊತೆಗೆ ಸೇರಿಸಿ ಟ್ರೋಲ್ ಮಾಡಿದ್ದರು. ದೇವರು ಎಲ್ಲರನ್ನು ಸುಂದರವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ನಾವಿರೋದು ಹೀಗೆಯೇ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ನಾನು ಚೆನ್ನಾಗಿಲ್ಲ ದಪ್ಪ ಇದ್ದೀನಿ ಅಂತ ಸಂತು ರಿಜೆಕ್ಟ್ ಮಾಡಿದ್ದಕ್ಕೆ ಅಷ್ಟಿಷ್ಟಲ್ಲ ಶಾಪ ಹಾಕಿದ್ದು: ಬಿಗ್ ಬಾಸ್ ಮಾನಸ
ನನ್ನ ಮಾತಿನ ಮೇಲೆ ನಿಯಂತ್ರಣ ಇಲ್ಲದ ಕಾರಣ ಮನೆಯಿಂದ ಹೊರಗೆ ಬಂದಿದ್ದೇನೆ. ದಿನದ 24 ಗಂಟೆಯೂ ರೆಕಾರ್ಡ್ ಆಗಿರುತ್ತದೆ. ನನ್ನಿಂದ ಏನು ಸಾಧ್ಯವದಷ್ಟು ಮನರಂಜನೆಯನ್ನು ನೀಡಿದ್ದೇನೆ. ಆದ್ರೆ ಶೋ ಪ್ರಸಾರವಾಗೋದು 75 ನಿಮಿಷ ಮಾತ್ರ. ಹಾಗಾಗಿ ಜನರಿಗೆ ಕಾಣಿಸಿದ್ದು ಕಡಿಮೆ. ಎಲ್ಲಾ ಸ್ಪರ್ಧಿಗಳನ್ನು ಅದೇ 75 ನಿಮಿಷದಲ್ಲಿಯೇ ತೋರಿಸಬೇಕಾಗುತ್ತದೆ. ನನ್ನ ಆಟವನ್ನು ಆಡಿದ್ದೇನೆ ಎಂದು ಮಾನಸ ಹೇಳುತ್ತಾರೆ.
ಮನೆಯಲ್ಲಿ ನಾವು ಹೆಚ್ಚು ಕಾಮಿಡಿ ಮಾಡಿ ನಕ್ಕಿದ್ದೇವೆ. ಜಗಳ ಮತ್ತು ಕಾಮಿಡಿ ಆದಾಗ ತೋರಿಸುವುದು ಜಗಳದ ದೃಶ್ಯಗಳು. ನಗಿಸಿದ್ದೇನೆ, ಹಾಡಿದ್ದೇನೆ ಮತ್ತು ಎಲ್ಲರ ಜೊತೆ ಕುಣಿದಿದ್ದೇನೆ. ನನ್ನ ಆಟ ನನಗೆ ಖುಷಿ ತಂದಿದೆ. ಮೊದಲೇ ದಿನದಿಂದಲೇ ಎಲ್ಲರ ಜೊತೆ ಒಗ್ಗಿಕೊಂಡೆ. ಭಾಷೆ ಬಗ್ಗೆ ಬೇಸರವಾದಗ ಜಗಳ ಸಹ ನಡೆದಿದೆ. ನಂತರ ಅಲ್ಲಿದ್ದವರು ನನ್ನನ್ನು ಒಪ್ಪಿಕೊಂಡಿದ್ದರು ಎಂಬ ವಿಷಯವನ್ನು ತಿಳಿಸಿದರು.
ಇದನ್ನೂ ಓದಿ: ಬಿಬಿಕೆಯಿಂದ ಮಾನಸ ಔಟ್, ಹೆಂಡತಿಗಾಗಿ ಕರ್ನಾಟಕದ ಕ್ಷಮೆ ಕೇಳಿದ ತುಕಾಲಿ ಸಂತೋಷ