ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಕಂಟೆಸ್ಟಂಟ್ ಎಂಟ್ರಿ/ ಮನೆ ಪ್ರವೇಶ ಮಾಡುತ್ತಿರುವವರು ಯಾರು?/ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್? / ಮೆನೆ ಒಳಗೆ ಸಿದ್ಧಾಂತಗಳ ತಿಕ್ಕಾಟ

ಬೆಂಗಳೂರು(ಏ. 01)   ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಹೊತ್ತಿಕೊಳ್ಳಲಿದೇಯಾ? ವಾಹಿನಿ ಹಂಚಿಕೊಮಡಿರುವ ಪ್ರೋಮೋ ಅನೇಕ ಪ್ರಶ್ನೆಗಳನ್ನು ಎತ್ತಿದೆ. 

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಲಿದೆ. ಮೂಲಗಳ ಪ್ರಕಾರ  ಚಕ್ರವರ್ತಿ ಚಂದ್ರಚೂಡ್ ಮನೆ ಪ್ರವೇಶ ಮಾಡಲಿದ್ದಾರೆ.

ಲ್ಯಾಗ್ ಮಂಜನ ಹಲ್ಲು ಉದುರಿ ಬಿತ್ತು

ವೈಲ್ಡ್ ಕಾರ್ಡ್ ಸ್ಪರ್ಧಿ ಪ್ರವೇಶ ಮಾಡುತ್ತಿದ್ದಂತೆ ಮನೆಯವರೆಲ್ಲ ದಂಗಾಗಿ ಹೋಗಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರಗಿ ರಿಯಾಕ್ಷನ್ ಮಾತ್ರ ಕೇಳುವುದೇ ಬೇಡ.

ಪತ್ರಕರ್ತರಾಗಿ  ಗುರುತಿಸಿಕೊಂಡಿದ್ದ  ಚಂದ್ರಚೂಡ್ ಸಿನಿಮಾ ನಿರ್ದೇಶಕನಾಗಿಯೂ ಹೆಸರು ಮಾಡಿದ್ದಾರೆ.   ಚಕ್ರವರ್ತಿ ಮತ್ತು ಸಂಬರಗಿ ನಡುವೆ ಸಿದ್ಧಾಂತಗಳ ತಿಕ್ಕಾಟ ನಡೆಯುವ ಸಾಧ್ಯತೆಯೂ ಹೆಚ್ಚಾಗಿದೆ.  ವಾಹಿನಿ ಈ  ಬಗ್ಗೆ ಸ್ಪಷ್ಟನೆ ನೀಡಿಲ್ಲ. ಆದರೆ ಚಂದ್ರಚೂಡ್ ಅವರೇ ಮನೆ ಪ್ರವೇಶ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಪ್ರತಿಕ್ರಿಯೆಗಳು ಹೇಳಿವೆ.