ಮನೆಯಿಂದ ಹೊರಬಂದ ರಾಜೀವ್/ ಪ್ರಶಾಂತ್ ಮತ್ತು ರಾಜೀವ್ ಕೊನೆಯಲ್ಲಿ ಉಳಿದುಕೊಂಡಿದ್ದರು/ ಗೋಲ್ಡನ್ ಪಾಸ್ ಇದ್ದರೂ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ/ ಈ ವಾರವೂ ಕಿಚ್ಚ ಸುದೀಪ್ ನಡೆಸಿಕೊಡಲಿಲ್ಲ
ಬೆಂಗಳೂರು(ಏ. 25) ಬಿಗ್ ಬಾಸ್ ಮನೆಯಿಂದ ರಾಜೀವ್ ಹೊರಗೆ ಬಂದಿದ್ದಾರೆ. ಕ್ರೀಡಾಳು ಎಂದು ಹೇಳಿಕೊಂಡಿದ್ದ ರಾಜೀವ್ ನಿಧಿ ಮತ್ತು ಶುಭಾ ಜತೆ ಕ್ಲೋಸ್ ಆಗಿದ್ದರು..
ಕೊನೆಯಲ್ಲಿ ರಾಜೀವ್ ಮತ್ತು ಪ್ರಶಾಂತ್ ಉಳಿದುಕೊಂಡಿದ್ದರು. ಈ ಬಾರಿ ಸಹ ಬಿಗ್ ಬಾಸ್ ವಾರದ ಕತೆ ಮಾಮೂಲಾಗಿಯೇ ನಡೆಯಿತು. ಕಿಚ್ಚ ಸುದೀಪ್ ನಡೆಸಿಕೊಡಲು ಸಾಧ್ಯವಾಗಲಿಲ್ಲ.
ಮನೆಯಿಂದ ಹೊರಟ ರಾಜೀವ್ ತಮ್ಮ ಬಳಿ ಇದ್ದ ಗೋಲ್ಡನ್ ಪಾಸ್ ನ್ನು ಶುಭಾ ಪೂಂಜಾ ಅವರಿಗೆ ನೀಡಿದ್ದಾರೆ. ಪ್ರಶಾಂತ್ ಮತ್ತು ಚಕ್ರವರ್ತಿ ಈ ಹಿಂದೆಯೇ ಎಲಿಮಿನೇಶನ್ ಬಗ್ಗೆ ಮಾತನಾಡಿದ್ದರು. ನಾನು ಹೋದರೆ ನನ್ನ ಸ್ಥಾನ ನೀನು ಟೇಕ್ ಓವರ್ ಮಾಡಿಕೊಳ್ಳಬೇಕು ಎಂದು ಪ್ರಶಾಂತ್ ಚಕ್ರವರ್ತಿಗೆ ಹೇಳಿದ್ದರು. ಆದರೆ ರಾಜೀವ್ ಎಲಿಮಿನೇಟ್ ಆಗಿದ್ದಾರೆ.
ಬಿಗ್ ಬಾಸ್ ಗೆ ಕಿಚ್ಚ ಪಡೆಯುವ ಸಂಭಾವನೆ ಎಷ್ಟು?
ಬಿಗ್ ಬಾಸ್ ನಲ್ಲಿ ಎಂಟು ವಾರಗಳನ್ನು ಕಳೆದ ರಾಜೀವ್ ಹೊರಗೆ ಬಂದಿದ್ದಾರೆ. ತುಪ್ಪಕ್ಕಾಗಿ, ಚಪಾತಿಗಾಗಿ ಕೊನೆಗೆ ಮೊಟ್ಟೆಗಾಗಿ ಜಗಳ ನಡೆಯಿತು ಆ ಜಗಳಕ್ಕೆ ಕಾರಣ ಪ್ರಶಾಂತ್ ಎಂಬುದು ವೀಕ್ಷಕರ ಕರೆಯಲ್ಲಿ ಮತ್ತೆ ಸಾಬೀತಾಯಿತು.
ರಾಜೀವ್ ಬಳಿ ನಾಮಿನೇಶನ್ ನಿಂದ ಬಚಾವಾಗಲು ಗೋಲ್ಡನ್ ಪಾಸ್ ಸಹ ಲಭ್ಯ ಇತ್ತು. ಆದರೆ ಅದನ್ನು ಬಳಸಿಕೊಳ್ಳಲಿಲ್ಲ. ಈಗ ರಾಜೀವ್ ಮನೆಯಿಂದ ಹೊರಕ್ಕೆ ಬಂದಿದ್ದಾರೆ.

