ವೆರಿ ವೆರಿ ಬಿಗ್ ಸಾರ್.. ಈಗಿನ ಕಾಲದಲ್ಲಿ ನಮ್ಮ ಪಕ್ಕದಲ್ಲಿ ನಿಂತುಕೊಂಡು ಬೆಳೆದು, ಬೆಳೆದ ಮೇಲೆ ನಿನ್ನಿಂದ ಬೆಳೆದಿದ್ದು ಅಲ್ಲ ಅಂದೋವರನ್ನು ನೋಡಿದ್ದೀನಿ ಸಾರ್,, ಅಂತದ್ರ ಮಧ್ಯೆ ನೀವು ಮಾಡಿದ್ದು ದೊಡ್ಡದು ಸಾರ್, ಈ ಹಾಡನ್ನು ನಾನು ಕಲಿಯುತ್ತೇನೆ. ಹೊರಗಿನ ಅಭಿಮಾನಿಗಳ ಪ್ರೀತಿಯ ಭಾರವೇ ಹೆಚ್ಚಾಗಿದೆ. ಅದರಲ್ಲಿಯೂ ನೀವೆಲ್ಲ ಎಫರ್ಟ್ ಹಾಕಿ ಮಾಡಿದ್ದೀರಾ?  ಎಂದು ಕಿಚ್ಚ ಸುದೀಪ್ ಮನೆಯವರಿಗೆ ಧನ್ಯವಾದ ಹೇಳಿದರು.

ಕಿಚ್ಚ ಸುದೀಪ್ ಬಹುಪರಾಕ್  ಕಿಚ್ಚ ಸುದೀಪ್ ಬಹುಪರಾಕ್ ಎಂದು ಹಾಡಿ ಮನೆ ಮಂದಿ ಕಿಚ್ಚನ ಮೆಚ್ಚುಗೆಗೆ ಪಾತ್ರವಾದರು. ಮನೆಯಲ್ಲಿ ಮತ್ತೆ ಸೂರ್ಯ ಗ್ರಹಣ, ಭೂಮಿ ಗ್ರಹಣ,  ತಿಂಗಳಿನಲ್ಲಿ ಎಷ್ಟು ದಿನ ಇರುತ್ತದೆ?  ಲಾರಿ-ಲಾರಿಗೆ ಕ್ಲೀನರ್ ಯಾರಾಗುತ್ತಾರೆ ಎಂದೆಲ್ಲ ಪ್ರಶ್ನೆ-ವಿಚಾರ-ವಿಮರ್ಶೆಗಳು ಆದವು.

ದೀಪಿಕಾಳಿಂದ ಸಿಹಿಮುತ್ತು ಪಡೆದುಕೊಂಡ ಜೋಕರ್

ಅಂತಿಮವಾಗಿ ನಾಮಿನೇಶನ್ ವಿಚಾರ ಮಾತನಾಡಿದ ಕಿಚ್ಚ ಸುದೀಪ್ ಚಂದನ್ ಆಚಾರ್ ಅವರು ಸೇವ್ ಎಂದು ಘೋಷಿಸಿದರು. ಈ ಮೂಲಕ ಮತ್ತೆ ಮನೆ ಸೇರಿದ್ದ ಚೈತ್ರಾ ಕೊಟ್ಟೂರು ಈ ಸಾರಿ ಅಧಿಕೃತವಾಗಿ ಮನೆಯಿಂದ ಹೊರಬಂದರು.

ಹೊಸ ವರ್ಷದ ರೆಸಲ್ಯೂಶನ್ ಬಗ್ಗೆಯೂ ಕಿಚ್ಚ ಸುದೀಪ್ ಪ್ರಶ್ನೆಗಳನ್ನು ಕೇಳಿದರು.  ಮಾತು ಕಡಿಮೆ ಮಾಡಬೇಕು, ಶಾರ್ಟ್ ಟೆಂಪರ್ ಕಡಿಮೆ ಮಾಡಬೇಕು ಎಂಬ ಉತ್ತರ ಮನೆಯ ಹಲವರಿಂದ ಬಂತು.

ಪ್ರಿಯಾಂಕಾ ಅವರೇ ಪುಸ್ತಕ ಓದಿ, ಫಸ್ಟ್ ಸ್ಟ್ಯಾಂಡರ್ಡ್ ನಿಂದ ಎಂದು ಕಿಚ್ಚ ಸುದೀಪ್ ಸಲಹೆ ಕೊಟ್ಟರು. ರೆಸಲ್ಯೂಶನ್ ಬಗ್ಗೆ ನನಗೆ ಗೊತ್ತಿಲ್ಲ, ಒಳ್ಳೆ ಚಿತ್ರ ಮಾಡಬೇಕು ಎಂದು ಕುರಿ ಪ್ರತಾಪ್ ಹೇಳಿದರು.

ಈ ವರ್ಷ ದಪ್ಪ ಆಗಲೇಬೇಕು ಎಂದು ಚಂದನ್ ಆಚಾರ್ ಹೇಳಿದರು. ಕೋಪ ಕಡಿಮೆ ಮಾಡಿಕೊಳ್ಳಬೇಕು ಎಂದು ಭೂಮಿ ಶೆಟ್ಟಿ ಹೇಳಿದರು. ಮುಂದಿನ ವರ್ಷ ಒಂದು ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದು ಚೈತ್ರಾ ಕೊಟ್ಟೂರು ಹೇಳಿದರು. ದುಡ್ಡು ಉಳಿಸಿ ಒಂದು ಮನೆ ತಗೆದುಕೊಳ್ಳಬೇಕು ಎಂದು ಕಿಶನ್ ಹೇಳಿದರು. ಟೈಮ್ ವೇಸ್ಟ್ ಮಾಡದೆ ಸದಾ ಬ್ಯುಸಿಯಾಗಿರಬೇಕು ಎಂದು ದೀಪಿಕಾ ಹೇಳಿದ್ರೆ, ಓವರ್ ಸೆಸ್ಸಿಟಿವಿಟಿ ಕಡಿಮೆ ಮಾಡಿಕೊಳ್ಳಬೇಕು ಎಂದು ಚಂದನಾ ಹೇಳಿದರು.

ಈ ವರ್ಷ ಆದರೂ ಜಿಮ್ ಸೇರಬೇಕು ಎಂದು ಶೈನ್ ಶೆಟ್ಟಿ ಹೇಳಿದರು. ತುಂಬಾ ಟ್ರಾವೆಲ್ ಮಾಡಬೇಕು ಎಂದು ವಾಸುಕಿ ಹೇಳಿದರು.