ಬಿಗ್ ಬಾಸ್ 7ರ ಮನೆ ಅಂತಿಮ ಕ್ಷಣಗಳತ್ತ ಕಾಲು ಇರಿಸಿದೆ. ಇದೀಗ ಬಂದಿರುವ ಬಿಗ್ ಬ್ರೇಕಿಂಗ್  ಪ್ರಕಾರ ವಾಸುಕಿ ವೈಭವ್, ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಮನೆಯಿಂದ ಹೊರಬಂದಿದ್ದು ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಅಂತಿಮ ಸುತ್ತಿನಲ್ಲಿ ಉಳಿದುಕೊಂಡಿದ್ದಾರೆ.

100 ದಿನಗಳನ್ನು ಪೂರೈಸಿ ಮುಂದೆ ಆಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋಗೆ ಫೆಬ್ರವರಿ 2 ರಂದು ತೆರೆ ಬೀಳಲಿದೆ. ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರು ಈ ಸಾರಿ ಮನೆ ಪ್ರವೇಶ ಮಾಡಿದ್ದರು. ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿಬರುತ್ತಿರುವ ಶೋ ಅನೇಕರ ಮೊದಲ ಆಯ್ಕೆ.

ಕೊನೆಯ ವಾರ ಮನೆಗೆ ಬಂದ ಬೆಳಗೆರೆ; ರಿಯಾಕ್ಷನ್ ಹೇಗಿತ್ತು?

ನಟ ಹರೀಶ್ ರಾಜ್ ಮಿಡ್ ನೈಟ್ ಎಲಿಮಿನೇಶನ್ ನಲ್ಲಿ ಹೊರಕ್ಕೆ ಬಂದಿದ್ದರು. ಫೈನಲ್ ತಲುವುವಲ್ಲಿ ವಿಫಲರಾಗಿದ್ದರು. ಒಟ್ಟಿನಲ್ಲಿ ಗ್ರ್ಯಾಂಡ್ ಫಿನಾಲೆ ರಂಗೇರಿದ್ದರು ರಾಯಕ್ ಶೆಟ್ಟಿ ಖ್ಯಾತಿಯ ಭೂಮಿ ಶೆಟ್ಟಿ, ಹುಡುಗರ ನಿದ್ದೆ ಕದ್ದ ದೀಪಿಕಾ ದಾಸ್ ಮತ್ತು ಗಾಯನ ಮತ್ತು ವಿವಿಧ ರಾಗ ಸಂಯೋಜನೆಗಳ ಮೂಲಕ ಮನಗೆದ್ದ ವಾಸುಕಿ ವೈಭವ್  ಮನೆಯಿಂದ ಹೊರಕ್ಕೆ ಬಂದಿದ್ದಾರೆ.