ಬಿಗ್ ಬಾಸ್ ಮನೆಯಲ್ಲಿ ಒಂದೊಂದೆ ಶಾಕಿಂಗ್ ನ್ಯೂಸ್ ಗಳು ಬರುವುದು ಸಾಮಾನ್ಯ. ಈ ಬಾರಿ ಜನರಿಗೆ ವಿಷಯ ತಿಳಿಸಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಇತಿಹಾಸದಲ್ಲಿಯೇ ಹೊಸ ಸಾಹಸಕ್ಕೆ  ಮುಂದಾಗಿದ್ದಾರೆ. ಈ ವಾರ ಅಂದರೆ 13ನೇ ವಾರ ಎಲಿಮಿನೇಶನ್ ಇಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ. 

ಆದರೆ ಸ್ಪರ್ಧಿಗಳ ಮನಸ್ಥಿತಿ ಅರಿಯಲು ಬಿಗ್ ಬಾಸ್ ನಾಮಿನೇಶನ್ ಕೆಲಸ ಮಾಡಿಸಿದರು.  ದೀಪಿಕಾ, ಭೂಮಿ, ಚಂದನ್ ಆಚಾರ್, ಹರೀಶ್  ನಾಮಿನೇಟ್ ಆದರು. ಮನೆಯಿಒಂದ ಹೊರಹೋಗುವಾಗ ಚಂದನಾ ನೇರವಾಗಿ ನಾಮಿನೇಟ್ ಮಾಡಿದ್ದ ಪ್ರಿಯಾಂಕಾ ಸಹ ಇವರ ಸಾಲಿಗೆ ಸೇರಿಕೊಂಡರು. ಆದರೆ ಈ ಬಾರಿ ಕ್ಯಾಪ್ಟನ್ ಒಬ್ಬರನ್ನು ಬಚಾವ್ ಮಾಡುವ ಅವಕಾಶ ಬಿಗ್ ಬಾಸ್ ನೀಡಿದ್ದರು. 

ಚಂದನಾ ಮನೆಯಿಂದ ಹೊರಬರಲು ಅಸಲಿ ಕಾರಣ ಹೇಳಿದ ಸುದೀಪ್

ಮನೆಯ ಕ್ಯಾಪ್ಟನ್ ಹರೀಶ್ ರಾಜ್ ಅವರನ್ನು ಬಚಾವ್ ಮಾಡಿದರು. ಮನೆಯ ಕ್ಯಾಪ್ಟನ್ ಆಗಿ ಈ ವಾರ ಕಿಶನ್ ಆಯ್ಕೆಯಾದರು. ಮನೆ ಮಂದಿಯ ಮನವೊಲಿಸಿ  ಭೂಮಿ ಮತ್ತು ಚಂದನ್ ಆಚಾರ್ ಅವರನ್ನು ಹಿಂದಿಕ್ಕಿ ಕಿಶನ್ ಗೆದ್ದರು.

ಎಲ್ಲದಕ್ಕಿಂತ ಮುಖ್ಯವಾಗಿ ನಾಮಿನೇಶನ್ ನಂತರ ವಾಸುಕಿ ಮತ್ತು ಶೈನ್ ನಡುವೆ ಮಾತುಕತೆ ನಡೆಯಿತು. ಈ ಬಾರಿ ಮನೆಯಿಂದ ಹೊರಹೋಗಲು ಎಲ್ಲರೂ ಸ್ಟ್ರಾಂಗ್ ಕಂಟೆಸ್ಟ್ ಗಳೇ ಆಯ್ಕೆಯಾಗಿದ್ದಾರೆ. ಕಳೆದ ಸಾರಿ ಚಂದನ್ ಆಚಾರ್ ಅತಿ ಹೆಚ್ಚು ವೋಟ್ ಪಡೆದುಕೊಂಡಿದ್ದರು ಎಂದು ತಮ್ಮ ತಮ್ಮ ನಡುವೆ ಆತಂಕ ತೋಡಿಕೊಂಡಿರು.