BBK11: ಬೆಂಕಿಯಲ್ಲಿ ಬೆಂದ ಸ್ಪರ್ಧಿಗಳು, ವೀಕೆಂಡ್‌ನಲ್ಲಿ ಯಾರಿಗೆ ಸಿಗುತ್ತೆ ಬಿಗ್ ಬಾಸ್ ಗೇಟ್‌ಪಾಸ್!
ಬಿಗ್ ಬಾಸ್ ಕನ್ನಡ ಸೀಸನ್ 11 ರ ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಒಟ್ಟು 10 ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ ನೇರ ನಾಮಿನೇಷನ್‌ಗೆ ಗುರಿಯಾದರೆ, ಉಳಿದ 9 ಸ್ಪರ್ಧಿಗಳು ಟಾಸ್ಕ್ ಮೂಲಕ ನಾಮಿನೇಟ್ ಆಗಿದ್ದಾರೆ.
ಬೆಂಗಳೂರು (ಅ.2): ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿಯ ಮೊದಲ ವಾರದ ನಾಮಿನೇಷನ್ ಸಖತ್ ಡಿಫರೆಂಟ್ ಆಗಿ ನಡೆಯಿತು. ಓಪನ್ ನಾಮಿನೇಷನ್ ಮಾತ್ರವಲ್ಲದೆ, ಟಾಸ್ಕ್ ನಾಮಿನೇಷನ್ ಕೂಡ ನಡೆಯಿತು. ಅದರಂತೆ ಮೊದಲ ವಾರ, ಸ್ವರ್ಗದಲ್ಲಿರುವ ಯಮುನಾ ಶ್ರೀನಿಧಿ, ಲಾಯರ್ ಜಗದೀಶ್, ಉಗ್ರಂ ಮಂಜು, ಗೌತಮಿ ಜಾಧವ್, ಭವ್ಯಾ ಗೌಡ ಮತ್ತು ಹಂಸ ನಾಮಿನೇಷನ್‌ನಲ್ಲಿದ್ದರೆ, ನರಕದಲ್ಲಿರುವ ಚೈತ್ರಾ ಕುಂದಾಪುರ, ಶಿಶಿರ್ ಶಾಸ್ತ್ರಿ, ಮೋಕ್ಷಿತಾ ಪೈ ಹಾಗೂ ಮಾನಸಾ ಸಂತೋಷ್ ನಾಮಿನೇಷನ್ ಆಗಿದ್ದಾರೆ, ಈ ಪೈಕಿ ಮೊದಲ ವಾರ ಯಾರು ಹೊರಹೋಗಬಹುದು ಎನ್ನುವ ಚರ್ಚೆ ಕೂಡ ಶುರುವಾಗಿದೆ. ಮೊದಲ ವಾರದ ನಾಮಿನೇಷನ್ ಪ್ರಕ್ರಿಯೆ 2 ಹಂತಗಳಲ್ಲಿ ನಡೆಯಿತು. ಮೊದಲನೇ ಹಂತದಲ್ಲಿ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ನೇರವಾಗಿ ನಾಮಿನೇಟ್ ಆದರೆ, ಎರಡನೇ ಹಂತದಲ್ಲಿ 9 ಜನ ನಾಮಿನೇಷನ್ ಕುಲುಮೆಗೆ ಬಿದ್ದಿದ್ದಾರೆ. ಇದರಿಂದಾಗಿ ಮೊದಲ ವಾರ ಮನೆಯಿಂದ ಹೊರಹೋಗಲು ಒಟ್ಟು 10 ಮಂದಿ ನಾಮಿನೇಟ್ ಆಗಿದ್ದು, ವೀಕೆಂಡ್‌ನಲ್ಲಿ ಮನೆಯ ಬಾಗಿಲು ಯಾರಿಗೆ ತೆಗೆಯಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
ಆರಂಭದಲ್ಲಿ ನರಕದಲ್ಲಿರುವ ಪೈಕಿ ಯಾರನ್ನಾದರೂ ಒಬ್ಬರನ್ನು ನಾಮಿನೇಷನ್ ಮಾಡುವ ಅಧಿಕಾರ ಸ್ವರ್ಗದಲ್ಲಿರೋರಿಗೆ ಸಿಕ್ಕಿತ್ತು. ಹೆಚ್ಚಿನವರು ಚೈತ್ರಾ ಕುಂದಾಪುರ ಅವರ ಹೆಸರನ್ನು ಆರಿಸಿಕೊಂಡರು. ಮನೆಯಲ್ಲಿ ಹೆಚ್ಚಿನ ರೂಲ್ಸ್ ಬ್ರೇಕ್ ಮಾಡಿದ ಕಾರಣವನ್ನು ಅವರಿಗೆ ನೀಡಲಾಯಿತು. ಇದರಿಂದಾಗಿ ಅವರು ನೇರವಾಗಿ ನಾಮಿನೇಟ್ ಆದರು.
ಆ ಬಳಿಕ ನಡೆದ ನಾಮಿನೇಷನ್ ಟಾಸ್ಕ್ ಸಖತ್ ಎಂಟರ್‌ಟೇನಿಂಗ್ ಆಗಿತ್ತು. ಸ್ವರ್ಗ ಹಾಗೂ ನರಕದ ಕಾನ್ಸೆಪ್ಟ್‌ನಲ್ಲಿ ಈ ಟಾಸ್ಕ್‌ಗಳು ನಡೆದವು. ನರಕದಲ್ಲಿದ್ದವರಿಗೆ ಸ್ವರ್ಗವನ್ನು ಪ್ರತಿನಿಧಿಸುವ ಮಂಜುಗಡ್ಡಯ ನೀರಿನಲ್ಲಿ ಮಿಂದು ನಾಮಿನೇಷನ್‌ನಿಂದ ಬಚಾವ್ ಆಗುವ ಅವಕಾಶವಿದ್ದರೆ, ಸ್ವರ್ಗವಾಸಿಗಳು ನರಕವನ್ನು ಪ್ರತಿನಿಧಿಸುವ ಬೆಂಕಿಯಲ್ಲಿ ಬಿದ್ದು ನಾಮಿನೇಟ್ ಆಗುವ ಟಾಸ್ಕ್ ಇರಿಸಲಾಗಿತ್ತು.
ಮಂಜುಗಡ್ಡೆಯ ನೀರು ತುಂಬಿದ್ದ ಕೊಳದಲ್ಲಿ ಇಳಿದು ಹಗ್ಗವನ್ನು ಬಿಡಿಸಿಕೊಂಡು ಶೂಲವನ್ನು ಹಿಡಿಯಬೇಕಿತ್ತು. ಶೂಲವನ್ನು ಹಿಡಿದ ವ್ಯಕ್ತಿ ನಾಮಿಷೇನ್‌ನಿಂದ ಬಚಾವ್ ಆದರೆ, ಸೋತ ನರಕನಿವಾಸಿ ನಾಮಿನೇಟ್ ಆಗುತ್ತಿದ್ದರು. ಇನ್ನು ಶೂಲ ಹಿಡಿದ ನರಕ ನಿವಾಸಿ ಸ್ವರ್ಗದಲ್ಲಿರುವ ಯಾರಾದರೂ ಒಬ್ಬರಿಗೆ ಈ ಶೂಲವನ್ನು ನೀಡುವ ಮೂಲಕ ನಾಮಿನೇಷನ್ ಮಾಡುವ ಅಧಿಕಾರ ನೀಡಬೇಕು. ಶೂಲ ಪಡೆದ ಸ್ವರ್ಗ ನಿವಾಸಿ ಇಬ್ಬರು ಸ್ವರ್ಗ ನಿವಾಸಿಗಳ ಫೋಟೋಗಳನ್ನು ನೇರವಾಗಿ ಬೆಂಕಿಗೆ ಹಾಕಿ ನಾಮಿನೇಟ್ ಮಾಡಬೇಕಿತ್ತು.
ರಂಜಿತ್ ವಿರುದ್ಧ ಶಿಶಿರ್ ಶಾಸ್ತ್ರಿ ಮೊದಲ ಸುತ್ತಿನಲ್ಲಿ ಸೋಲು ಕಂಡರೆ, ಗೆಲುವು ಕಂಡ ರಂಜಿತ್, 'ಸತ್ಯ' ಗೌತಮಿ ಜಾಧವ್‌ಗೆ ಶೂಲ ನೀಡಿದರು. ಈ ಅಧಿಕಾರ ಬಳಸಿಕೊಂಡ ಗೌತಮಿ, ಯಮುನಾ ಶ್ರೀನಿಧಿ ಹಾಗೂ ಲಾಯರ್ ಜಗದೀಶ್‌ರನ್ನು ನಾಮಿನೇಟ್ ಮಾಡಿದರು. ಟಾಸ್ಕ್‌ನಲ್ಲಿ ಸೋತ ಶಿಶಿರ್ ಶಾಸ್ತ್ರಿ ನೇರವಾಗಿ ನಾಮಿನೇಟ್ ಆಗಿದ್ದರು.
ಇವರೇ ನೋಡಿ ಬಿಗ್ ಸ್ಪರ್ಧಿಗಳು..'ಸ್ವರ್ಗ ನರಕ ಎಲ್ಲಾ ಮೇಲಿಲ್ಲ ಕೇಳೋ ಜನಕ, ಇಲ್ಲೇ ಕಾಣಬೇಕು ಬಿಗ್ ಬಾಸ್ ಮುಗಿಯೋ ತನಕ'!
2ನೇ ಸುತ್ತಿನಲ್ಲಿ ಮೋಕ್ಷಿತಾ ಪೈ ವಿರುದ್ಧ ಅನುಷಾ ರೈ ಗೆಲುವು ಸಾಧಿಸಿದರು. ಮೋಕ್ಷಿತಾ ನಾಮಿನೇಟ್ ಆದರೆ, ಅನುಷಾ ಶೂಲವನ್ನು ಯಮುನಾ ಶ್ರೀನಿಧಿಗೆ ನೀಡಿದರು. ಅವರು ಉಗ್ರಂ ಮಂಜು, ಹಾಗೂ ತಮ್ಮನ್ನು ನಾಮಿನೇಟ್ ಮಾಡಿದ್ದ ಗೌತಮ್ ಜಾಧವ್ ಅವರನ್ನು ನಾಮಿನೇಟ್ ಮಾಡಿದರು. ಇಬ್ಬರ ಫೋಟೋಗಳನ್ನು ಬೆಂಕಿಗೆ ಹಾಕಿದರು.
BBK11: ತುಕಾಲಿ ಮಾನಸಾಗೆ ಸ್ವತಃ ಕಿಚ್ಚ ಸುದೀಪ್ ಸ್ವಾಗತಿಸಿದರೂ, ನೆಟ್ಟಿಗರಿಂದ ಭಾರಿ ವಿರೋಧ!
ಆ ಬಳಿಕ ನಡೆದ ಮೂರನೇ ಸುತ್ತಿನಲ್ಲಿ ಮಾನಸಾ ವಿರುದ್ಧ ಗೋಲ್ಡ್ ಸುರೇಶ್ ಗೆದ್ದರು. ಇದರಿಂದಾಗಿ ಮಾನಸಾ ನೇರವಾಗಿ ನಾಮಿನೇಟ್ ಆದರೆ, ಶೂಲ ಹಿಡಿದ ಗೋಲ್ಡ್ ಸುರೇಶ್, ಧರ್ಮ ಕೀರ್ತಿರಾಜ್‌ಗೆ ನಾಮಿನೇಷನ್ ಅಧಿಕಾರ ನೀಡಿದರು. ಈ ವೇಳೆ ಅವರು ಭವ್ಯಾ ಗೌಡ, ಹಂಸ ನಾರಾಯಣಸ್ವಾಮಿ ಅವರನ್ನು ನಾಮಿನೇಟ್ ಮಾಡಿ ಅವರ ಫೋಟೋಗಳನ್ನು ಬೆಂಕಿಗೆ ಹಾಕಿದರು.