ಬಿಗ್‌ಬಾಸ್‌ನಿಂದ ಹೊರಬಂದ ನಟಿ ಗೌತಮಿ ಜಾದವ್, ಬಂಟ್ವಾಳದ ವನದುರ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ನಿರಂತರವಾಗಿ ವನದುರ್ಗೆಯನ್ನು ಆರಾಧಿಸುವ ಗೌತಮಿ, ದೇವಿಯ ಆಶೀರ್ವಾದಕ್ಕಾಗಿ ಪ್ರಾರ್ಥಿಸಿದ್ದಾರೆ. ಬಿಗ್‌ಬಾಸ್ ಮನೆಯಲ್ಲೂ ವನದುರ್ಗೆ ಜಪ ಮಾಡುತ್ತಿದ್ದ ಗೌತಮಿಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ.
ನಟಿ ಗೌತಮಿ ಜಾದವ್ (Actress Gautami Jadhav), ಬಿಗ್ ಬಾಸ್ ಕನ್ನಡ 11 (Bigg Boss Kannada 11)ರ ಫಿನಾಲೆಯನ್ನು ಮಿಸ್ ಮಾಡ್ಕೊಂಡಿದ್ದಾರೆ. ಕೊನೆ ಹಂತದವರೆಗೆ ಬಂದಿದ್ದ ಗೌತಮಿಗೆ ಫಿನಾಲೆ ಕೈತಪ್ಪಿದೆ. ಸದಾ ಪಾಸಿಟಿವ್ ಆಲೋಚನೆ (Positive thinking) ಮಾಡುವ ಗೌತಮಿ ಬಾಯಲ್ಲಿ ವನದುರ್ಗೆ, ವನದುರ್ಗಮ್ಮ ಎನ್ನುವ ಹೆಸರನ್ನು ನೀವು ಕೇಳ್ತಿರುತ್ತೀರಿ. ಬಿಗ್ ಬಾಸ್ ಮನೆಯಲ್ಲಿ ವನದುರ್ಗೆ ಪೂಜೆ ಹಾಗೂ ಜಪವನ್ನು ಗೌತಮಿ ಮಾಡ್ತಿದ್ದರು. ಆಟವಾಡುವಾಗೆಲ್ಲ ಗೌತಮಿ ಬಾಯಿಂದ ವನದುರ್ಗೆ ಹೆಸರು ಕೇಳ್ತಾನೆ ಇತ್ತು. ಅಷ್ಟೇ ಅಲ್ಲ ಮಂಜು ಕ್ಯಾಪ್ಟನ್ ಆಗ್ಬೇಕು, ಹನುಮಂತು ಕ್ಯಾಪ್ಟನ್ ಆಗ್ಬೇಕು ಎನ್ನುವ ಸಮಯದಲ್ಲೂ ಗೌತಮಿ ವನದುರ್ಗೆ ಮಂತ್ರವನ್ನು ಜಪಿಸುತ್ತಿದ್ದರು. ಕಿಚ್ಚ ಸುದೀಪ್ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು. ಈಗ ಬಿಗ್ ಬಾಸ್ ಮನೆಯಿಂದ ವಾಪಸ್ ಬಂದ ಗೌತಮಿ, ತಮ್ಮ ಆರಾಧ್ಯ ವನದುರ್ಗೆ ದರ್ಶನ ಪಡೆದಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಗೌತಮಿ ಜಾದವ್ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ವನದುರ್ಗಾ ದೇವಸ್ಥಾನದ ಮುಂದೆ ಗೌತಮಿ ನಿಂತಿದ್ದಾರೆ. ಅಮ್ಮ ನಿಮ್ಮನ್ನು ಆಶೀರ್ವದಿಸಲಿ, ಸದಾ ನಿಮ್ಮೊಂದಿಗೆ ಇರಲಿ ಎಂದು ಫೋಟೋಕ್ಕೆ ಗೌತಮಿ ಶೀರ್ಷಿಕೆ ಹಾಕಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು, ಗೌತಮಿಯನ್ನು ಮೆಚ್ಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದಿರೋದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಮಂಜು ಹಾಗೂ ಗೌತಮಿ ಸ್ನೇಹವನ್ನು ಶ್ಲಾಘಿಸಿದ್ದಾರೆ. ಸದಾ ನಗ್ತಿರುವ ಗೌತಮಿ, ರಿಯಲ್ ವಿನ್ನರ್ ಎಂದು ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ. ಅಲ್ಲದೆ ವನದುರ್ಗಾ ದೇವಿ ದೇವಸ್ಥಾನ ಎಲ್ಲಿದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರವೂ ಸಿಕ್ಕಿದೆ. ಗೌತಮಿ ನಂಬಿರುವ ವನದುರ್ಗಾ ದೇವಸ್ಥಾನ, ಮಂಗಳೂರಿನ ಬಂಟ್ವಾಳದಲ್ಲಿದೆ.
ಬಿಗ್ ಬಾಸ್ ಕೊಟ್ಟ ಪೇಮೆಂಟ್, ಗಂಡ ಮಾಡಿದ ಶಾಪಿಂಗ್; ಇಂಟ್ರೆಸ್ಟಿಂಗ್ ವಿಚಾರ ರಿವೀಲ್ ಮಾಡಿದ ಗೌತಮಿ ಜಾದವ್
ವನದುರ್ಗಾ ದೇವಿ ದೇವಸ್ಥಾನ ಎಲ್ಲಿದೆ? : ಮೂಲ ವನದುರ್ಗಾ ದೇವಸ್ಥಾನ ಮಂಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿದೆ. ಬಂಟ್ವಾಳದ ಬಿ.ಸಿ ರೋಡ್ ನಲ್ಲಿ ವನದುರ್ಗಾ ದೇವಸ್ಥಾನವಿದೆ. ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯ ದೇವಸ್ಥಾನದ ಹೆಸರು. ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ದೇವಸ್ಥಾನ ತೆರೆದಿರುತ್ತದೆ. ಶಕ್ತಿಯುತ ದೇವತೆ ಇಲ್ಲಿ ನೆಲೆಸಿದ್ದಾಳೆ ಎಂಬ ನಂಬಿಕೆ ಭಕ್ತರಲ್ಲಿದೆ. ಪ್ರತಿ ನಿತ್ಯ ನೂರಾರು ಮಂದಿ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ವನದುರ್ಗೆ ಮೇಲೆ ಗೌತಮಿಗೆ ನಂಬಿಕೆ : ಗೌತಮಿ ಜಾದವ್ ಕೂಡ ಈ ದೇವಸ್ಥಾನಕ್ಕೆ ತಿಂಗಳಿಗೆ ಒಮ್ಮೆ ಹೋಗಿ ಬರ್ತಿರುತ್ತಾರೆ. ಈಗ ಬಿಗ್ ಬಾಸ್ ಮನೆಯಿಂದ ಬಂದ ಕೂಡಲೇ ತಾಯಿ ದರ್ಶನ ಪಡೆದಿದ್ದು ಇದಕ್ಕೆ ನಿದರ್ಶನ. ಈ ಹಿಂದೆ ಸತ್ಯ ತಂಡದ ಜೊತೆ ಅವರು ವನದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ತಾಯಿ ಮಹಿಮೆ ಬಗ್ಗೆ ಯುಟ್ಯೂಬ್ ನಲ್ಲಿ ತಮ್ಮ ಅನುಭವವನ್ನು ಅವರು ಹೇಳಿಕೊಂಡಿದ್ದರು. ತಾಯಿಯನ್ನು ಅಪಾರವಾಗಿ ನಂಬುವ ಗೌತಮಿ, ತಮ್ಮ ಹೇರ್ ಆಯಿಲ್ ಬ್ರ್ಯಾಂಡ್ ಗೆ ದೇವಿ ಹೆಸರನ್ನೇ ಇಟ್ಟಿದ್ದಾರೆ. ಪ್ರತಿ ದಿನ ವನದುರ್ಗೆ ಜಪವನ್ನು ಅವರು ತಪ್ಪದೆ ಮಾಡ್ತಾರೆ. ಮನೆ ದೇವರಲ್ಲದೆ ಹೋದ್ರೂ ವನದುರ್ಗೆಯನ್ನು ನಂಬಿರುವ ಗೌತಮಿ, ಸದಾ ಸಕಾರಾತ್ಮಕವಾಗಿ ಆಲೋಚನೆ ಮಾಡಲು ಇದೇ ಕಾರಣ ಎಂದಿದ್ದಾರೆ. ದೇವಸ್ಥಾನಕ್ಕೆ ಹೋಗಲು ಶುರು ಮಾಡಿದ್ಮೇಲೆ ಒಳ್ಳೆಯದಾಗಿದೆ ಎಂದು ಗೌತಮಿ ಹೇಳಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರ ಬಂದ್ಮೇಲೆ ಗೌತಮಿ ಟಿವಿ ಸಂದರ್ಶನ ನೀಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಸತ್ಯ ಸೀರಿಯಲ್ ಮೂಲಕವೇ ಹೆಚ್ಚು ಪ್ರಸಿದ್ಧಿಗೆ ಬಂದಿದ್ದ ಗೌತಮಿ ಮತ್ತೊಂದಿಷ್ಟು ಹೊಸ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.
