Asianet Suvarna News Asianet Suvarna News

ಶಿಶಿರ್‌ ಹಸ್ತರೇಖೆ ನೋಡಿ 38ರಲ್ಲಿ ಮದುವೆ ಎಂದ ಚೈತ್ರಾ, ರಂಜಿತ್ ಮನಸ್ಸು ಗೆದ್ದು ಐಶೂ ಬ್ಲಶಿಂಗ್!

ಬಿಗ್‌ಬಾಸ್‌ ಮನೆಯಲ್ಲಿ ಶಿಶಿರ್‌ ಶಾಸ್ತ್ರಿಗೆ ಚೈತ್ರಾ ಕುಂದಾಪುರ ಅವರ ಹಸ್ತರೇಖೆ ನೋಡಿ ಭವಿಷ್ಯ ನುಡಿದಿದ್ದಾರೆ. ರಂಜಿತ್ ಮತ್ತು ಐಶ್ವರ್ಯಾ ರನ್ನು ಮನೆ ಮಂದಿ ಕಾಲೆಳೆದಿದ್ದಾರೆ. ಮಾನಸ ಮತ್ತು ಚೈತ್ರಾ ಧ್ಯಾನ ಮತ್ತು ಜಪದ ಬಗ್ಗೆ ಕಿತ್ತಾಡಿಕೊಂಡಿದ್ದಾರೆ.

bigg boss kannada 11 chaithra kundapura Hasta Rekha prediction to actor shishir Shishir Shastry  gow
Author
First Published Oct 2, 2024, 12:56 AM IST | Last Updated Oct 2, 2024, 12:59 AM IST

ಬಿಗ್‌ಬಾಸ್‌ ಮನೆಯಲ್ಲಿರುವ ನಟ ಶಿಶಿರ್‌ ಶಾಸ್ತ್ರಿಗೆ  ಚೈತ್ರಾ ಕುಂದಾಪುರ ಹಸ್ತರೇಖೆ ನೋಡಿ ಭವಿಷ್ಯ ಹೇಳಿದ್ದಾರೆ. ಕೈಯಲ್ಲಿ ದುಡ್ಡೇ ಇಲ್ಲ ಅನ್ನುವ ಪರಿಸ್ಥಿತಿ ಬರುವುದೇ ಇಲ್ಲ. 75 ವರ್ಷದ ತನಕ ಬದುಕುತ್ತೀರಿ. ಹಣದ ಸಮಸ್ಯೆ ಬರುವುದಿಲ್ಲ. ಹಾಗಂತ ನೂರಾರು ಕೋಟಿ ಖಂಡಿತಾ ಮಾಡುವುದಿಲ್ಲ. ನಿಮ್ಮ ಜೀವನಕ್ಕೆ ಎಷ್ಟು ಬೇಕು ಅಷ್ಟು ಸಿಗುತ್ತೆ. ಜೀವನದಲ್ಲಿ ನಂಬಿದವರಿಂದ ತುಂಬಾ ಕಳೆದುಕೊಳ್ಳುತ್ತೀರಿ. ಆದರೆ ಮತ್ತೆ ಕಟ್ಟಿಕೊಳ್ಳುತ್ತೀರಿ. ಸೀರಿಯಸ್ ಆಗಿ ನಿಮಗೆ 3 ರಿಲೇಶನ ಶಿಪ್ ಇತ್ತಾ? ಅದು ಯಾವತ್ತು ವಾಪಸ್ಸು ಬರಲ್ಲಾ. ನಿರೀಕ್ಷೆ ಕೂಡ ಯಾವತ್ತು ಮಾಡಬೇಡಿ ಎಂದು ಹೇಳಿದಾಗ, ಶಿಶಿರ್ ಬರೋದು ಬೇಡ ಬೇಡ್ವೇ ಬೇಡ ಎಂದಿದ್ದಾರೆ.

ಒಂದು ವೇಳೆ ಬರುತ್ತೆ ವಾಪಸ್ಸು ಅಂದ್ರೂನೂ ನೀವು ನಿರಾಕರಿಸಿ ಏಕೆಂಧರೆ ನಿಮ್ಮ ಜೀವನಕ್ಕೆ ಇದು ಬಹಳ ಅಡ್ಡ . ನೀವು ರಿಲೇಶನ್ ಶಿಪ್ ನಿಂದ ಜೀವನದಲ್ಲಿ ತುಂಬಾ ಕಳೆದುಕೊಂಡದ್ದೀರಿ. ಮದುವೆ ನಿಮ್ಮ ಜೀವನದಲ್ಲಿ ಲೇಟ್‌ ಆಗೋದು 38 ಆಗಬಹುದು ಎಂದಾಗ ಶಿಶಿರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

BBK11: ಸ್ವರ್ಗ ನರಕದ ಮಧ್ಯೆ ಜಗದೀಶ್ ಕನ್ನಿಂಗ್ ಆಟ, ನರಕವಾಸಿಗಳಿಗೆ ತಿಳಿಯಿತು ವಕೀಲರ ಗುಟ್ಟು!

ರಂಜಿತ್ ಮನಸ್ಸು ಗೆದ್ದ ಐಶು: ಐಶ್ವರ್ಯಾ ಮತ್ತು ರಂಜಿತ್ ಇಬ್ಬರೂ ಮುಂದಿನ ದಿನಗಳಲ್ಲಿ ಜಂಟಿಯಾಗೋ ಲಕ್ಷಣ ಕಾಣುತ್ತಿದೆ. ಐಶ್ವರ್ಯಾ ಸಿಂಧೋಗಿ ನರಕವಾಸಿಗಳ ಮನೆ ಸಮೀಪ ಬಂದು ಬೆಳಗ್ಗಿನ ತಿಂಡಿ ತಿನ್ನುತ್ತಿದ್ದಾಗ ಎರಡು ದಿನದಿಂದ ಬಿಳಿ ಬಟ್ಟೆ ಧರಿಸಿದರ ಬಗ್ಗೆ ಮಾತುಕತೆಯಾಯ್ತು. ಈ ವೇಳೆ ಐಶ್ವರ್ಯಾ ನೀವು ನನ್ನ ನೋಡ್ತಿದ್ದೀರಾ ತಟ್ಟೆ ನೋಡ್ತಿದ್ದೀರಾ ಎಂದು ಕೇಳಿದರು. ಪ್ಲೇಟ್‌ ಗಿಂತ ನೀನೇ ಚಂದ ಕಾಣಿಸ್ತಿದ್ದೀಯಾ ಎಂದರು ರಂಜಿತ್. ಇದಕ್ಕೆ ಉತ್ತರಿಸಿದ ಐಶ್ವರ್ಯಾ ಪ್ಲೇಟಲ್ಲಿರೊದು ಬೇಕಾ ನಾನು ಬೇಕಾ ಎಂದು ಕೇಳಿದಾಗ, ಇಡೀ ನರಕವಾಸಿಗಳು ಹೀಗೆಲ್ಲಾ ಆಯ್ಕೆ ಕೊಟ್ಟುಬಿಟ್ಟರೆ ಹೇಗೆ? ಎಂದು ಕಾಲೆಳೆದರು. ಇದಕ್ಕೆ ಮಾನಸ ನೀವೇನಾದ್ರೂ ಮಾಡ್ಕೊಳಿ ನಮಗೆ ತಟ್ಟೆ ಕೊಟ್ಟು ಬಿಡಿ ಎಂದರು. ಆದರೆ ರಂಜಿತ್ ಏನೇ ಹೇಳು ಐಶು ಮನಸ್ಸು ಗೆದ್ದುಬಿಟ್ಟೆ, ನೀವೇ ಬೇಕು ತಟ್ಟೆ ಆಚೆ ಇಟ್ಟು ಬಿಡಿ ಎಂದು  ಕಾಲೆಳೆದರು.

ಮಧ್ಯಾಹ್ನ ಊಟವೆಲ್ಲ ಆದ ನಂತರ ಮತ್ತೆ ಪುನಃ ನರಕ ನಿವಾಸಿಗಳ ಮನೆ ಹತ್ತಿರ ಐಶ್ವರ್ಯಾ ಬಂದರು. ಆಗ ಮಾನಸ ರಂಜಿಂತ್ ಅವರು ಐಶು ನಾ ನೋಡಿ ಬ್ಲಶ್ ಆಗುತ್ತಿದ್ದಾರೆ ಎಂದು ಕಾಲೆಳೆಯಲು ಆರಂಭಿಸಿದರು. ನರಕದಲ್ಲಿರುವವರೆಲ್ಲ ಹೌದು ನೀವು ಬ್ಲಶ್ ಆಗುತ್ತಿದ್ದೀರಿ ಕನ್ನಡಿಯಲ್ಲಿ ಮುಖ ನೋಡಿ ರಂದು ರಂಜಿಂತ್ ಗೆ ಸಲಹೆ ನೀಡಿದರು. ಕೊನೆಗೆ ಕುಳಿತಲ್ಲಿಂದ ಎದ್ದು ರಂಜಿತ್ ನಕ್ಕರು. ತಕ್ಷಣ ಐಶ್ವರ್ಯಾ ಅವರು ರಂಜಿತ್ ಗೆ ಸ್ವರ್ಗ ಬೇಕಾ? ನರಕ ಬೇಕಾ ಎಂದು ಕೇಳಿದ್ದಕ್ಕೆ. ನೀವೇ ಬೇಕು ಎಂದು ಉತ್ತರಿಸಿದಾಗ ಎಲ್ಲರು ನಕ್ಕರು.

ಮನೆ ಕ್ಲೀನ್ ಮಾಡಲು ನರಕದಲ್ಲಿರುವ ಶಿಶರ್ ಮತ್ತು ಅನುಷಾ ರೈ ಅವರನ್ನು ಸ್ವರ್ಗವಾಸಿಗಳು ಆಯ್ಕೆ ಮಾಡಿದರು. ನರಕವಾಸಿಗಳೆಲ್ಲರೂ ಮರದ ಕೆಳಗೆ ಕ್ಟೆಯಲ್ಲಿ ಕೂತು ಪಂಚಾಯಿತಿ ಮಾಡಿ ಸಮಯ ವ್ಯರ್ಥ ಮಾಡಿ ಕೆಲಸದಿಂದ ತಪ್ಪಿಸಿಕೊಳ್ಳಲು ಮುಂದಾದರು. ಕಿಚನ್ , ಬೆಡ್‌ ರೂಂ ಮತ್ತು ಹಾಲ್‌ ನಲ್ಲಿ ಹೆಚ್ಚು ಹೊತ್ತು ಸಮಯ ಕಳೆದು, ಕೊನೆಗೆ ಬಾತ್‌ ರೂಂ ಇಟ್ಟುಕೊಳ್ಳಬೇಕೆಂದು ಯೋಜನೆ ರೂಪಿಸಿದರು.

ಆಪಲ್ ಉದ್ಯೋಗ ಬಿಟ್ಟು ಕೇವಲ 22 ತಿಂಗಳಲ್ಲಿ 9000 ಕೋಟಿ ಕಂಪನಿ ಕಟ್ಟಿ ಬೆಳೆಸಿದ ನಿರ್ಮಿತ್ ಯಾರು?

ಧ್ಯಾನ-ಜಪದ ಬಗ್ಗೆ ಕಿತ್ತಾಡಿಕೊಂಡು ಮಾನಸ ಚೈತ್ರಾ:
ಇನ್ನು ಧ್ಯಾನದ ಬಗ್ಗೆ ಮತ್ತು ಜಪದ ಬಗ್ಗೆ ಮಾತನಾಡುತ್ತಿದ್ದಾಗ ಚೈತ್ರಾ ಮತ್ತು ಮಾನಸ ಕಿತ್ತಾಡಿಕೊಂಡರು. ಅವರು ಮಾಡುತ್ತಿರುವುದು ಧ್ಯಾನ ಅಲ್ಲ ಜಪ ಎಂದು ಚೈತ್ರಾ ಹೇಳಿದ್ದು ಮಾನಸಾಗೆ ಕೋಪ ತರಿಸಿ ನನಗೆ ಜ್ಞಾನ ಇಲ್ಲ ಎಂದರು. ಕೊನೆ ವಾಗ್ವಾದ ನಡೆದು ನರಕವಾಸಿಗಳು ಅವರಿಬ್ಬರನ್ನು ಬೇರೆ ಬೇರೆ  ಕಡೆಗೆ ಕೊಂಡೊಯ್ದರು.
 

Latest Videos
Follow Us:
Download App:
  • android
  • ios