ಬಿಗ್‌ ಬಾಸ್‌ ಮನೆಯಲ್ಲಿ ಮೂಲ ನಿಯಮ ಉಲ್ಲಂಘನೆಯಾದ ಕಾರಣ, ಉಳಿದಿರುವ ಎಲ್ಲಾ 16 ಸದಸ್ಯರನ್ನು ಬಿಗ್‌ ಬಾಸ್‌ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಈ ವಾರದ ಕ್ಯಾಪ್ಟನ್‌ ಆಗಿದ್ದ ಹಂಸಾ ನಾರಾಯಣಸ್ವಾಮಿ ಅವರು ಗೋಲ್ಡ್‌ ಸುರೇಶ್‌ ಅವರನ್ನು ನೇರವಾಗಿ ಎಲಿಮಿನೇಷನ್‌ಗೆ ನಾಮಿನೇಟ್‌ ಮಾಡಿದ್ದರು. ಈ ಘಟನೆಯಿಂದಾಗಿ ಮನೆಯಲ್ಲಿ ಕುತೂಹಲ ಮನೆ ಮಾಡಿದೆ.

ಬೆಂಗಳೂರು (ಅ.8): ಬಿಗ್‌ ಬಾಸ್‌ನ ಮೂಲನಿಯಮದ ಬಗ್ಗೆ ಅಸಡ್ಡೆ ತೋರಿದ ಕಾರಣಕ್ಕಾಗಿ ಈ ಬಾರಿ ಬಿಗ್‌ ಬಾಸ್‌ ಮನೆಯಲ್ಲಿ ಉಳಿದಿರುವ ಎಲ್ಲಾ 16 ಮಂದಿ ಸದಸ್ಯರನ್ನು ಸ್ವತಃ ಬಿಗ್‌ ಬಾಸ್‌ ನೇರವಾಗಿ ನಾಮಿನೇಟ್‌ ಮಾಡಿದ್ದಾರೆ. ಬಿಗ್‌ ಬಾಸ್‌ ಕನ್ನಡ 11ನೇ ಆವೃತ್ತಿಯಲ್ಲಿ ಇಲ್ಲಿಯವರೆಗೂ ಆಗದೇ ಇದ್ದ ದೊಡ್ಡ ಮಟ್ಟದ ಪ್ರಮಾದ ಎಸೆಗಲಾಗಿದ್ದು, ಇದರ ಬೆನ್ನಲ್ಲಿಯೇ ಸ್ವತಃ ಬಿಗ್‌ ಬಾದ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ವಾರ ಗೋಲ್ಡ್‌ ಸುರೇಶ್‌ ಅವರನ್ನು ಈ ವಾರದ ಮನೆಯ ಕ್ಯಾಪ್ಟನ್‌ ಆಗಿದ್ದ ಹಂಸಾ ನಾರಾಯಣಸ್ವಾಮಿ ನೇರವಾಗಿ ಎಲಿಮಿನೇಷನ್‌ಗೆ ನಾಮಿನೇಟ್‌ ಮಾಡಿದ್ದರು. ಇನ್ನು ನಾಯಕಿಯಾಗಿದ್ದ ಕಾರಣಕ್ಕೆ ಹಂಸಾ ಅವರು ಮನೆಯಿಂದ ಹೊರಗೆ ಹೋಗದೇ ಇರುವ ಈ ವಾರದ ಇಮ್ಯುನಿಟಿ ಪಡೆದುಕೊಂಡಿದ್ದರು. ಆದರೆ, ರಿಯಾಲಿಟಿ ಶೋನ ಮೂಲ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಸ್ವತಃ ಬಿಗ್‌ ಬಾಸ್‌ ಬಾಕಿ ಇದ್ದ 14 ಮಂದಿ ಸೇರಿ, ಎಲ್ಲಾ 16 ಮಂದಿಯನ್ನೂ ಮನೆಯಿಂದ ಹೊರಹೋಗಲು ನಾಮಿನೇಟ್‌ ಮಾಡಿದ್ದಾರೆ. ಇದರಿಂದಾಗಿ ಈ ವಾರದ ಮುಂದಿನ ದಿನಗಳು ಹೇಗೆ ಇರಲಿದೆ ಅನ್ನೋದರ ಬಗ್ಗೆಯೂ ಕುತೂಹಲ ಆರಂಭವಾಗಿದೆ.

ಅಷ್ಟಕ್ಕೂ ಆಗಿದ್ದೇನು: ಕಲರ್ಸ್‌ ಕನ್ನಡ ಈ ಕುರಿತಾದ ಪ್ರೋಮೋವನ್ನು ಪ್ರಕಟಮಾಡಿದೆ. ಇದರಲ್ಲಿ ಬಿಗ್‌ ಬಾಸ್‌ ಮನೆಯ ಬ್ಲೈಂಡ್ಸ್‌ (ಕಿಟಕಿಯ ಪರದೆಗಳು) ಡೌನ್‌ ಆಗಿದ್ದವು. ಆದರೆ, ಮಾನಸಾ ಸಂತೋಷ್‌, ಈ ಪರದೆಯನ್ನು ದಾಟಿ ಹೊರಗೆ ಆಗುತ್ತಿರುವುದು ಏನು ಅನ್ನೋದನ್ನ ನೋಡಿ ಬಂದಿದ್ದಾರೆ. ಅಷ್ಟೇ ಅಲ್ಲದೆ, ಶಿಶಿರ್‌ ಅವರನ್ನು ಕರೆಯುವ ಮಾನಸಾ, ಮುಂದಿನ ಗೇಮ್‌ ಏನು ಆಗಿರಲಿದೆ ಅನ್ನೋ ವಿವರಗಳನ್ನು ನೀಡಿದ್ದಾರೆ. ಸೊಂಟಕ್ಕೆ ಬೆಲ್ಟ್‌ ಕಟ್ಟಿಕೊಂಡು ಓಡಿ ಹೋಗುವ ರೀತಿಯ ಗೇಮ್‌ ಇರೋದು ಎಂದು ಹೇಳಿದ್ದಾರೆ. ಅಲ್ಲಿ ಸೊಂಟಕ್ಕೆ ಕಟ್ಟಿಕೊಳ್ಳಲು ನಾಲ್ಕು ಬೆಲ್ಟ್‌ ಇಟ್ಟಿದ್ದಾರೆ. ಮಾನಸಾ ಸಂತೋಷ್‌ ಮಾತ್ರವಲ್ಲದೆ, ಮೋಕ್ಷಿತಾ ಪೈ ಹಾಗೂ ಶಿಶಿರ್‌ ಕುಡ ಬ್ಲೈಂಡ್ಸ್‌ ಡೌನ್‌ ಆದ ಬಳಿಕ ಹೊರಗೆ ಆಗುತ್ತಿರುವುದನ್ನು ಕಂಡು ಬಂದಿದ್ದಾರೆ. ಈ ವೇಳೆ ಬಿಗ್‌ಬಾಸ್‌ನ ಸ್ಪರ್ಧಿಯೊಬ್ಬರು. ಹೊರಗೆ ಹೋಗುವ ಹಾಗಿಲ್ಲ ಯಾಕೆ ಹೋಗಿದ್ದೀರಿ? ಅದನ್ನು ತೆಗೆದು ಹೋಗೋ ಹಾಗಿಲ್ಲ ಎಂದಿದ್ದಾರೆ. ಈ ವೇಳೆ ಉತ್ತರ ನೀಡುವ ಮಾನಸ, ಅಲ್ಲಿ ಏನೂ ಕಾಣಲಿಲ್ಲ ಎಂದಿದ್ದಾರೆ.

ಆಗ ರಾಕೇಶ್ ಜೊತೆ ಅವಳಾಟ, ಇದೀಗ ಜಗದೀಶ್-ಹಂಸ ಹೊಸ ಆಟ, ಗೆಲ್ಲಲ್ಲು ಎಲ್ಲ ಮರೀತಾರಾ?

ಇದಾದ ಬಳಿಕ ಮಾತನಾಡುವ ಬಿಗ್‌ ಬಾಸ್‌, 'ಬ್ಲೈಂಡ್ಸ್‌ ಡೌನ್‌ ಆದಾಗ , ಅದರಿಂದ ಇಣುಕಿ ಆಚೆ ನೋಡುವಂತಿಲ್ಲ ಅನ್ನೋದು ಈ ಮನೆಯ ತುಂಬಾ ಮುಖ್ಯವಾದ ಒಂದು ನಿಯಮ. ಈಗಷ್ಟೇ ಆ ಮೂಲ ನಿಯಮವನ್ನು ಮನೆಯ ಕೆಲವು ಸದಸ್ಯರು ಉಲ್ಲಂಘಿಸಿದ್ದಾರೆ. ಈ ಕ್ಷಣದಿಂದ, ಬಿಗ್‌ ಬಾಸ್‌ ಮನೆಯ ಎಲ್ಲಾ ಸದಸ್ಯರನ್ನು ನಾಮಿನೇಟ್‌ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.

ಬಿಗ್‌ಬಾಸ್‌ನಲ್ಲಿ ಎಲ್ಲರಿಗೂ ಒಂದು ನ್ಯಾಯ ಆದ್ರೆ, ಯಮುನಾ ಶ್ರೀನಿಧಿಗೆ ಮತ್ತೊಂದು ನ್ಯಾಯ ಏಕೆ?

ಇನ್ನು ಈ ಪ್ರೋಮೋ ರಿಲೀಸ್‌ ಆದ ಬೆನ್ನಲ್ಲಿಯೇ ಮಾನಸಾ ಸಂತೋಷ್‌ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅವರನ್ನು ಮನೆಯೊಂದ ಹೊರಹಾಕುವಂತೆ ಒತ್ತಾಯ ಮಾಡಲಾಗುತ್ತಿದೆ. ಮಾನಸ ಬಿಗ್ ಬಾಸ್ ಗೆ ಅರ್ಹತೆ ಇಲ್ಲದ ಅಭ್ಯರ್ಥಿ, ಮಾನಸ ಅವರದ್ದು ಓವರ್ ಆಯ್ತು ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.

ಬಿಗ್‌ಬಾಸ್‌ನಲ್ಲಿ ಕೆಲವೊಂದು ಮೂಲ ನಿಯಮಗಳಿವೆ. ಅದೇನೆಂದರೆ, ಮನೆಯಲ್ಲಿ ಎಲ್ಲರೂ ಕನ್ನಡವನ್ನೇ ಮಾತನಾಡಬೇಕು. ನಿದ್ರೆಯ ಅವಧಿ ಬಿಟ್ಟು ಬೇರೆ ಯಾವ ಸಮಯದಲ್ಲೂ ಅವರು ನಿದ್ರೆ ಮಾಡುವಂತಿಲ್ಲ. ಬ್ಲೈಂಡ್ಸ್‌ ಡೌನ್‌ ಆಗಿದ್ದಾಗ ಯಾರೂ ಕೂಡ ಅದರಿಂದ ಇಣುಕಿ ನೋಡುವಂತಿಲ್ಲ. ಬಿಗ್‌ ಬಾಸ್‌ ಮನೆಗೆ ಬರುವ ಬೇರೆ ಯಾವುದೇ ವ್ಯಕ್ತಿಯೊಂದಿಗೆ ಬಿಗ್‌ ಬಾಸ್‌ ಹೇಳುವವರೆಗೂ ಮಾತನಾಡುವಂತಿಲ್ಲ. ಈ ಮೂಲ ನಿಯಮಗಳನ್ನು ಕಾಪಾಡುವ ನಿಟ್ಟಿನಲ್ಲಿ ಕ್ಯಾಪ್ಟನ್‌ಗೆ ಜವಾಬ್ದಾರಿ ನೀಡಲಾಗಿರುತ್ತದೆ. ಆದರೆ, ಇಂದಿನ ಘಟನೆಯಿಂದ ಮನೆಯಲ್ಲಿ ಆಗುವ ಪರಿಣಾಮವೇನು ಅನ್ನೋದು ಇಂದಿನ ಎಪಿಸೋಡ್‌ ಬಳಿಕವೇ ತಿಳಿಯಲಿದೆ.

Scroll to load tweet…