ಬಿಗ್ಬಾಸ್ನಲ್ಲಿ ಅರಳಿದ ಪ್ರೀತಿ, 4 ವರ್ಷ ಸಂಬಂಧ: ಮದ್ವೆಗೆ ಅಡ್ಡಿ ಬಂತಂತೆ ಧರ್ಮ- ಜೋಡಿ ಬ್ರೇಕಪ್!
ಬಿಗ್ಬಾಸ್ನಲ್ಲಿ ಪ್ರೀತಿ ಮಾಡಿ, ನಾಲ್ಕು ವರ್ಷಗಳವರೆಗೆ ಒಟ್ಟಿಗೇ ಇದ್ದ ಜೋಡಿಗೆ ಈಗ ಧರ್ಮದ ನೆನಪಾಗಿ ಬ್ರೇಕಪ್ ಆಗಿದೆ. ಯಾರೀ ಜೋಡಿ?
ಬಿಗ್ಬಾಸ್ನಲ್ಲಿ ಏನು ಬೇಕಾದರೂ ನಡೆಯುತ್ತದೆ. ಇಲ್ಲಿ ಹಾರಾಟ, ಕಾದಾಟ, ಕಿರುಚಾಟದಷ್ಟೇ ಮಾಮೂಲು ಆಗಿರುವುದು ಪ್ರೀತಿ-ಪ್ರೇಮ, ಕೆಲವು ಹಂತದಲ್ಲಿ ಗೆರೆ ದಾಟಿದ ಅಶ್ಲೀಲತೆ... ಎಲ್ಲವೂ ಮಾಮೂಲೆ. ಇದೇ ಕಾರಣಕ್ಕೆ ಬೈದುಕೊಳ್ಳುತ್ತಲೇ ಈ ರಿಯಾಲಿಟಿ ಷೋ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುತ್ತದೆ. ಬಿಗ್ಬಾಸ್ನ ಭಾಷೆ ಯಾವುದೇ ಇರಲಿ, ಟಿಆರ್ಪಿಯಲ್ಲಿ ನಂಬರ್ 1 ಸ್ಥಾನ ಗಳಿಸಲೂ ಈ ಕಾಂಟ್ರವರ್ಸಿಗಳೇ ಕಾರಣ. ಮಿತಿಮೀರಿದ ಪಯಣ, ಪ್ರೀತಿಯ ದೃಶ್ಯಗಳು ಹೇರಳವಾಗಿರುವ ಕಾರಣದಿಂದಲೇ ಬಿಗ್ಬಾಸ್ ನೋಡಲು ಒಂದಷ್ಟು ವರ್ಗ ಖುಷಿ ಪಡುತ್ತದೆ. ಒಬ್ಬರನ್ನೊಬ್ಬರು ಬಿಟ್ಟೇ ಇರಲ್ವೇನೋ ಎಂಬಂತೆ ಬಿಗ್ಬಾಸ್ ಮನೆಯಲ್ಲಿ ನಡೆದುಕೊಂಡು ಆ ಆಮೇಲೆ ಬ್ರೇಕಪ್ ಆಗುವವರು ಮಾಮೂಲಾಗಿದೆ.
ಇದೇ ರೀತಿ ಈಗ ಹಿಂದಿ ಬಿಗ್ಬಾಸ್ನಲ್ಲಿಯೂ ಆಗಿದೆ. ಬಿಗ್ಬಾಸ್ ಮನೆಯಲ್ಲಿ ಹಿಮಾನ್ಶಿ ಖುರಾನಾ ಮತ್ತು ಆಸಿಮ್ ರಿಯಾಜ್ ಲವ್ ಮಾಡಿದ್ದರು. ಆಮೇಲೆ ನಾಲ್ಕು ವರ್ಷ ಒಟ್ಟಿಗೇ ಇದ್ದರು. ಎಲ್ಲಾ ಕಡೆ ಸುತ್ತಾಡಿದ್ದರು. ಇದೀಗ, ಮದುವೆಯ ವಿಷಯಕ್ಕೆ ಬಂದಾಗ ಇಬ್ಬರಿಗೂ ತಮ್ಮ ಧರ್ಮದ ಅರಿವಾದಂತಿದೆ! ತಮ್ಮದು ಬೇರೆ ಬೇರೆ ಧರ್ಮ ಆಗಿರುವ ಕಾರಣ, ಒಟ್ಟಿಗೆ ಇರುವುದು ಸಾಧ್ಯವಿಲ್ಲ ಎಂದಿರುವ ಜೋಡಿ, 4 ವರ್ಷದ ಸಂಬಂಧವನ್ನು ಕೊನೆಗೊಳಿಸಿದ್ದಾರೆ. ಬಿಗ್ಬಾಸ್ 13ರ ಮನೆಯಲ್ಲಿ ಪರಿಚಯವಾಗಿ ಲವ್ ಮಾಡಿದ್ದರು. ಹಿಮಾಂಶಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದರು. ಆ ಸಮಯದಲ್ಲಿಯೇ ಎಂಗೇಜ್ ಆಗಿದ್ದರು.ಇವರಿಬ್ಬರೂ ಜೊತೆಯಾಗಿ ಹಲವಾರು ವಿಡಿಯೋಗಳನ್ನು ಮಾಡಿದ್ದಾರೆ. ಕ್ಯಾಲ್ ರಖಯಾ ಕರ್, ಕಲ ಸೋನಾ ಹೇ ಹಾಗೂ ಇತರ ಹಾಡುಗಳಲ್ಲಿ ಇವರು ಕಾಣಿಸಿಕೊಂಡಿದ್ದಾರೆ.
ಚಿತ್ರಕ್ಕಾಗಿ 15 ಕೆ.ಜಿ ಹೆಚ್ಚಿಸಿಕೊಂಡು ಈಗ ಇಳಿಸ್ತಿರೋ ನಟಿ ಪರಿಣಿತಿ! ವಿಡಿಯೋ ನೋಡಿ ಉಸ್ಸಪ್ಪಾ ಅಂದ ಫ್ಯಾನ್ಸ್
ಅಂದಹಾಗೆ ಹಿಮಾನ್ಶಿ ಅವರು, ಪಂಜಾಬಿಯ ಪ್ರಸಿದ್ಧ ಗಾಯಕಿ. ತಮ್ಮ ಬ್ರೇಕಪ್ ಕುರಿತು ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ನಾನು ಹಿಂದೂ ಹಾಗೂ ಆಸಿಂ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದಾರೆ. ಇಬ್ಬರ ನಡುವೆ ಧರ್ಮ ಅಡ್ಡ ಬಂದಿದೆ. ಧರ್ಮದ ಕಾರಣದಿಂದಲೇ ನಾವಿಬ್ಬರೂ ದೂರಾಗುತ್ತಿದ್ದೇವೆ ಎಂದಿದ್ದಾರೆ. ನಾವು ಜೊತೆಯಾಗಿದ್ದ ಸಮಯ ತುಂಬಾ ಚೆನ್ನಾಗಿತ್ತು. ಈಗ ಆ ಸಂಬಂಧ ಕೊನೆಯಾಗಿದೆ. ನಮ್ಮ ಪ್ರೀತಿಯ ಪಯಣ ಅದ್ಭುತವಾಗಿತ್ತು. ನಾವು ಈಗ ನಮ್ಮ ನಮ್ಮ ಜೀವನದಲ್ಲಿ ಮೂವ್ ಆನ್ ಆಗಿದ್ದೇವೆ ಎಂದಿದ್ದಾರೆ.
ತಮ್ಮ ತಮ್ಮ ಧರ್ಮಗಳ ಬಗ್ಗೆ ಪರಸ್ಪರ ಗೌರವವಿದೆ. ನಮ್ಮ ಧರ್ಮಕ್ಕಾಗಿ ನಾವು ನಮ್ಮ ಪ್ರೀತಿಯನ್ನು ತ್ಯಾಗ ಮಾಡುತ್ತಿದ್ದೇವೆ. ನಮಗೆ ಪರಸ್ಪರ ಯಾವುದೇ ಕೋಪವಿಲ್ಲ. ನಮ್ಮ ಖಾಸಗಿತನವನ್ನು ನೀವು ಗೌರವಿಸುತ್ತೀರಿ ಎಂದುಕೊಂಡಿದ್ದೇನೆ ಎಂದು ಹಿಮಾಂಶಿ ಬರೆದುಕೊಂಡಿದ್ದಾರೆ.
ನೆಟ್ಟಿಗನ ಪ್ರಶ್ನೆಗೆ ಶಾರುಖ್ ಫುಲ್ ಗರಂ! ಲೂಸ್ ಮೋಷನ್ ಔಷಧ ಕಳಿಸಿಕೊಡ್ತೇನೆ ಎಂದ ನಟ: ಆಗಿದ್ದೇನು?