Asianet Suvarna News Asianet Suvarna News

ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಬಾಳಲ್ಲಿ ಬಿರುಗಾಳಿ, ಮದುವೆ ವಿಡಿಯೋ ಹಂಚಿಕೊಂಡ ಮರು ದಿನವೆ ಡಿಲೀಟ್!

ವಿಡಿಯೋ ಹಂಚಿಕೊಂಡು ಮದುವೆ ಗುಟ್ಟು ರಟ್ಟು ಮಾಡಿದ್ದ ಬಿಗ್‌ಬಾಸ್ ಸ್ಪರ್ಧಿ ಮರುದಿನವೇ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಇದೀಗ  ಹಲವು ಅನುಮಾನಗಳಿಗೆ ಕಾರಣವಾಗಿದೆ.
 

Bigg Boss Fame Renee Dhyani deletes wedding video soon after posted in Instagram ckm
Author
First Published Jul 7, 2024, 7:27 PM IST

ಮುಂಬೈ(ಜು.07) ಸೆಲೆಬ್ರೆಟಿಗಳು ತಮ್ಮ ವಿಚ್ಚೇದನ ಗೌಪ್ಯವಾಗಿಟ್ಟರೂ ಸೋಶಿಯಲ್ ಮೀಡಿಯಾಗಳಿಂದ ಮದುವೆ ಫೋಟೋ ವಿಡಿಯೋಗಳನ್ನು ಡಿಲೀಟ್ ಮಾಡುವ ಮೂಲಕ ಸೂಚನೆ ನೀಡುವ ಟ್ರೆಂಡ್ ಹೆಚ್ಚಾಗಿದೆ. ಬಿಗ್‌ ಬಾಸ್ ಮೂಲಕ ಒಂದಾಗಿ ಸಂಸಾರ ಆರಂಭಿಸಿದ ಕೆಲ ಜೋಡಿ ಈಗಾಗಲೇ ಡಿವೋರ್ಸ್ ಪಡೆದುಕೊಂಡಿದೆ. ಇದೀಗ ಬಿಗ್ ಬಾಸ್ 8ರ ಸ್ಪರ್ಧಿ ರೇನೆ ಧ್ಯಾನಿ ತಮ್ಮ ಮದುವೆಯನ್ನು ಸೋಶಿಯಲ್ ಮೀಡಿಯಾ ಮೂಲಕ ರಟ್ಟು ಮಾಡಿದ್ದರು. ಮದುವೆ ಸಂಭ್ರಮದ ವಿಡಿಯೋ ಹಂಚಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದಾಗಿ ತಿಳಿಸಿದ್ದರು. ಆದರೆ ಮರು ದಿನವೇ  ಈ ವಿಡಿಯೋ ಡಿಲೀಟ್ ಮಾಡುವ ಮೂಲಕ ಇದೀಗ ಅನುಮಾನ ಹೆಚ್ಚಿಸಿದ್ದಾರೆ.

ಹಿಂದಿ ಬಿಗ್‌ಬಾಸ್ 8ರಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ರೆನೆ ಧ್ಯಾನಿ ಜುಲೈ 5ರ ರಾತ್ರಿ ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು. ಇನ್‌ಸ್ಟಾಗ್ರಾಂ ಮೂಲಕ ಮದುವೆಯ ಸಂಭ್ರಮದ ಕ್ಷಣಗಳ ವಿಡಿಯೋ ಹಂಚಿಕೊಂಡಿದ್ದರು. ಅರೇಂಜ್ ಮ್ಯಾರೇಜ್ ಇದಾಗಿದ್ದು, ಆದರೆ ಅರೇಂಜ್ ಮ್ಯಾರೇಜ್‌ ಲವ್ ಮ್ಯಾರೇಜ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದೇನೆ ಎಂದು ಬರೆದುಕೊಂಡಿದ್ದರು. 

ಬಿಗ್‌ಬಾಸ್ ಖ್ಯಾತಿಯ ನಿಕ್ಕಿ ಹಂಚಿಕೊಂಡ ಹಾಟ್ ವಿಡಿಯೋಗೆ ಫ್ಯಾನ್ಸ್ ಕಕ್ಕಾ ಬಿಕ್ಕಿ!

ಪತಿಯೊಂದಿಗೆ ಕೈ ಕೈ ಹಿಡಿದು ಸಪ್ತಪದಿ ತುಳಿದ ಈ ವಿಡಿಯೋಗೆ ಬಿಗ್ ಬಾಸ್ ಮಾಜಿ ಸ್ಪರ್ಧಿಗಳು, ಸೆಲೆಬ್ರೆಟಿಗಳು, ಆಪ್ತರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದರು. ದಾಂಪತ್ಯ ಜೀವನ ಸುಖಕರವಾಗಿರಲೆಂದು ಹಾರೈಸಿದ್ದರು. ಸದ್ದಿಲ್ಲದೆ ರೇನೆ ಧ್ಯಾನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಕುರಿತು ಯಾವುದೇ ಸುಳಿವು ನೀಡಿರಲಿಲ್ಲ. ಆದರೆ ಮದುವೆ ಬಳಿಕ ವಿಡಿಯೋ ಹಂಚಿಕೊಂಡು ಎಲ್ಲರಿಗೂ ಸರ್ಪ್ರೈಸ್ ನೀಡಿದ್ದರು.

 

 
 
 
 
 
 
 
 
 
 
 
 
 
 
 

A post shared by Renee Dhyani (@reneedhyanz)

 

ಜುಲೈ5 ರ ರಾತ್ರಿ ಶುಭಾಶಗಳ ಮಹಾಪೂರವೇ ಹರಿದು ಬಂದಿತ್ತು. ಮರುದಿನ ಬೆಳಗ್ಗೆ ಎದ್ದಾಗ ರೆನೆ ಧ್ಯಾನಿ ಮದುವೆ ವಿಚಾರ ಎಲ್ಲೆಡೆ ಹರಿದಾಡಿತ್ತು. ಹೀಗಾಗಿ ಅಭಿಮಾನಿಗಳು ಶುಭಕೋರಲು ಇನ್‌ಸ್ಟಾಗ್ರಾಂ ಖಾತೆಗೆ ತೆರಳಿದರೆ ಮದುವೆ ವಿಡಿಯೋ, ಪೋಸ್ಟ್‌ಗಳು ಡೀಲೀಟ್ ಮಾಡಲಾಗಿದೆ. ಜೊತೆಗೆ ಒಂದು ಸಂದೇಶವನ್ನು ನೀಡಿದ್ದರು. ಅನಾನುಕೂಲಕ್ಕಾಗಿ ಕ್ಷಮಿಸಿ, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ. ಆದರೆ ಸರಿಯಾದ ಸಮಯದಲ್ಲಿ ಸರಿಯಾಗಿ ಮಾಹಿತಿ ನೀಡುತ್ತೇನೆ ಎಂಬ ಸಂದೇಶ ನೀಡಿದ್ದಾರೆ.

ಪತಿ ಜೊತೆಗೆ ಸಂಭ್ರಮದ ನಗುವಿನ ವಿಡಿಯೋ ಹಾಗೂ ಪೋಟೋಗಳು ಇದೀಗ ಡಿಲೀಟ್ ಆಗಿದೆ. ಇದಕ್ಕೆ ಕಾರಣವನ್ನೂ ನೀಡಿಲ್ಲ. ಪೋಸ್ಟ್ ಡಿಲೀಟ್ ಬೆನ್ನಲ್ಲೇ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದೀರಿ, ಮರು ದಿನವೇ ಡಿಲೀಟ್ ಮಾಡಿದ್ದೀರಿ, ಕಾರಣವೇನು ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಟ್ರೇಲರ್, ಪ್ರೋಮೋ, ವಿಡಿಯೋಗಳನ್ನು ಹರಿಬಿಟ್ಟ ಮೇಲೆ ಮದುವೆ ವಿಡಿಯೋ ಪೋಸ್ಟ್ ಮಾಡುತ್ತಾರೆ. ಹಂಚಿಕೊಂಡ ಮದುವೆ ವಿಡಿಯೋದಲ್ಲಿ ಏನಾದರೂ ಸಮಸ್ಯೆಗಳಿರಬಹುದು. ಶೀಘ್ರದಲ್ಲೇ ಹೊಸ ವಿಡಿಯೋ ಹಂಚಿಕೊಳ್ಳುತ್ತಾರೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಬಿಕಿನಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಇಳಿದ ಬಿಗ್ ಬಾಸ್ ಸುಂದರಿ, ಸ್ಪರ್ಧಿ ವಿಡಿಯೋಗೆ ಭರ್ಜರಿ ಕಮೆಂಟ್!

Latest Videos
Follow Us:
Download App:
  • android
  • ios