Asianet Suvarna News Asianet Suvarna News

ಕಾವೇರಿ ನೀರಿಗೂ, ನಿವೇದಿತಾ ಡ್ಯಾನ್ಸ್​ಗೂ ಏನಪ್ಪಾ ಸಂಬಂಧ? ಚೆಡ್ಡಿ ತೋರಿಸಿದ್ದು ಸಾಕು ಅಂತ ಬಯ್ಯೋದಾ?

ಬಿಗ್​ಬಾಸ್ ಖ್ಯಾತಿಯ ನಿವೇದಿತಾ ಗೌಡ ಮಿನಿ ಡ್ರೆಸ್​ನಲ್ಲಿ ಕ್ಯೂಟ್​ ಆಗಿ ಡ್ಯಾನ್ಸ್​ ಮಾಡಿದ್ರೆ ಕಾವೇರಿ ನೀರಿನ ವಿಷಯ ತಂದು ನಟಿಯನ್ನು ತರಾಟೆಗೆ ತೆಗೆದುಕೊಳ್ತಿದ್ದಾರೆ ನೆಟ್ಟಿಗರು. 
 

Bigg Boss fame Nivedita Gowda danced cutely in a mini dress trolled suc
Author
First Published Sep 26, 2023, 9:04 PM IST

ಟಿಕ್ ಟಾಕ್ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಸ್ಯಾಂಡಲ್​ವುಡ್​ ಗೊಂಬೆ ಎಂದೇ ಖ್ಯಾತಿ ಪಡೆದವರು.  ಕನ್ನಡ ಬಿಗ್ ಬಾಸ್ ಐದನೇ ಸೀಸನ್ ಸ್ಪರ್ಧಿಯಾದ ಬಳಿಕ ಇವರ ಖ್ಯಾತಿ ಸಕತ್​ ಹೆಚ್ಚಾಯಿತು.  ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದ  ಸಂಗೀತ ನಿರ್ದೇಶಕ ಚಂದನ್​ ಶೆಟ್ಟಿ (Chandan Shetty) ಅವರನ್ನೇ ನಿವೇದಿತಾ ಮದುವೆಯಾಗಿ ಎರಡು ವರ್ಷಗಳೇ ಕಳೆದಿವೆ. ಮೊದಲಿಗೆ ಚಂದನ್​ ಶೆಟ್ಟಿ ನಿವೇದಿತಾ ಅವರಿಗಾಗಿ  ಹಾಡೊಂದನ್ನು ಸಿದ್ಧಪಡಿಸಿ ಕಂಪೋಸ್ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಮೂಡಿದ ಆತ್ಮೀಯತೆ ಮುಂದೆ ಪ್ರೇಮವಾಗಿ ಬೆಳೆದು ಚಂದನ್ ಶೆಟ್ಟಿ 2019ರ ಯುವ ದಸರಾ ಕಾರ್ಯಕ್ರಮದಲ್ಲಿ ನಿವೇದಿತಾಗೆ ಪ್ರೊಪೋಸ್ ಮಾಡಿದ್ದರು. ಆಗಿನಿಂದಲೂ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ ನಿವೇದಿತಾ. ಏಕೆಂದರೆ,  ಸರ್ಕಾರದ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರೋಪೋಸ್ ಮಾಡಿದ್ದು ಸಕತ್​ ಟ್ರೋಲ್​ಗೆ ಒಳಗಾಗಿತ್ತು. ನಂತರ  2020ರ  ಫೆಬ್ರವರಿ 26ರಂದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಮದುವೆಯಾದರು. ಇದೀಗ ನಟಿ ಸೋಷಿಯಲ್ ಮೀಡಿಯಾದಲ್ಲಿ  ಸಕತ್​ ಆ್ಯಕ್ಟಿವ್.    

ಇವರ ಸೌಂದರ್ಯಕ್ಕಾಗಿಯೇ ಫ್ಯಾನ್ಸ್​ ಸಂಖ್ಯೆ ಸಕತ್​ ಹೆಚ್ಚಿದೆ. ಇದೇ  ಕಾರಣಕ್ಕೆ ಇವರು ಇನ್​ಸ್ಟಾಗ್ರಾಮ್​ನಲ್ಲಿ ವಾರಕ್ಕೆ ಏನಿಲ್ಲವೆಂದರೂ ನಾಲ್ಕೈದು ವಿಡಿಯೋ ಅಪ್​ಲೋಡ್​  ಮಾಡುತ್ತಾರೆ. ಬಾರ್ಬಿ ಡಾಲ್ ಎಂದೂ ಅಭಿಮಾನಿಗಳಿಂದ ಕರೆಸಿಕೊಳ್ತಿರೋ ಈಕೆ ಹಾಕುವ ವಿಡಿಯೋ (Video), ಫೋಟೋಗಳಿಗಾಗಿಯೇ ಫ್ಯಾನ್ಸ್ ಕಾತರದಿಂದ ಕಾಯ್ತಾ ಇರ್ತಾರೆ.      ಈಕೆ ಏನೇ ಡ್ರೆಸ್ ಹಾಕಿದ್ರೂ ತುಂಬಾ ಮುದ್ದಾಗಿ ಕಾಣುವ ಕಾರಣ ಕಮೆಂಟ್​ಗಳ ಸುರಿಮಳೆಯೇ ಆಗುತ್ತದೆ. ಅದರ ಜೊತೆ ಅಷ್ಟೇ ಟ್ರೋಲ್​ಗಳೂ ಬರುತ್ತವೆ. ಟ್ರೋಲ್​ಗೆ ಜಗ್ಗದೇ  ನಿವೇದಿತಾ ಹಲವಾರು ವಿಡಿಯೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಇದಕ್ಕೆ ಪರ-ವಿರೋಧ ಕಮೆಂಟ್​ಗಳ ಸುರಿಮಳೆಯಾಗುತ್ತಲೇ ಇರುತ್ತದೆ.  ಕಮೆಂಟ್​ಗಳು ಏನೇ ಇದ್ದರೂ ನಟಿ ಮಾತ್ರ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದಾರೆ. 

ನಿವೇದಿತಾ ಡ್ಯಾನ್ಸ್​ ನೋಡಿ ಫ್ಯಾನ್ಸ್​ ಗರಂ! ಥೂ ಅದೇನ್ ಬಾಳಂತ ಬಾಳ್ತೀರಾ ಅಂತಿದ್ದಾರೆ ಅಭಿಮಾನಿಗಳು

ಇದೀಗ ಬೆಂಗಳೂರಿನಲ್ಲಿ ಕಾವೇರಿಗಾಗಿ ಹೋರಾಟ ಶುರುವಾಗಿದೆ. ಇಂದು ಬೆಂಗಳೂರು ಬಂದ್​ ಆಗಿದ್ದರೆ ಬರುವ ಶುಕ್ರವಾರ ಇದೇ ಕಾರಣಕ್ಕೆ ಕರ್ನಾಟಕ ಬಂದ್​  ಆಗಿದೆ. ಕುಡಿಯುವ ನೀರಿಗಾಗಿ ಮುಂದೆ ಪರದಾಡುವ ಸ್ಥಿತಿ ಬರುತ್ತದೆ ಎನ್ನುವ ಕಾರಣಕ್ಕೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟ ಸರ್ಕಾರದ ಕ್ರಮವನ್ನು ಖಂಡಿಸಿ ಜನರು ಬೀದಿಗಿಳಿದಿದ್ದಾರೆ. ಅತ್ತ ಹೋರಾಟದ ಕಾವು ಏರುತ್ತಿದ್ದರೆ, ಇತ್ತ  ನಟಿ,  ಹಾಡೊಂದಕ್ಕೆ ಭರ್ಜರಿ ಸೊಂಟ ಬಳುಕಿಸಿ ಪಡ್ಡೆ ಹುಡುಗರ ಕಾವೇರಿಸುತ್ತಿದ್ದಾರೆ. ಹಿಂದೊಮ್ಮೆ ಇದೇ ರೀತಿ ಹಿಂದಿ ಹಾಡಿಗೆ ರೀಲ್ಸ್​ ಮಾಡಿದಾಗ ನಿನ್ನ ಗಂಡನ ಕನ್ನಡ ಹಾಡು ನಿನಗೆ ಸೇರಲ್ವಾ ಅಂತ ಪ್ರಶ್ನಿಸಿದ್ರು ಫ್ಯಾನ್ಸ್​. ಆದರೆ ಇದೀಗ ಚಡ್ಡಿ ತೊಟ್ಟು ಮಾಡಿದ ಈ ಡ್ಯಾನ್ಸ್​ ಅಭಿಮಾನಿಗಳನ್ನು ಮತ್ತಷ್ಟು ಸಿಟ್ಟಿಗೆ ಏರಿಸಿದೆ. 

ಅತ್ತ ಕುಡಿಯುವ ನೀರಿಗಾಗಿ ಇಡೀ ರಾಜ್ಯ ಬೀದಿಗಿಳಿದು ಹೋರಾಟ  ಮಾಡ್ತಿದ್ರೆ ನೀನು ಚೆಡ್ಡಿ ತೋರಿಸ್ತಾ ಕುಣೀತಿದ್ಯಾ ಎಂದು ಕೆಲವರು ನಟಿಯ ವಿರುದ್ಧ ಕಿಡಿ ಕಾರಿದ್ದಾರೆ. ಕೆಲವರು  ಹಾರ್ಟ್​ ಇಮೋಜಿ ಹಾಕಿ ಕ್ಯೂಟ್​ ಲುಕ್​ ಅಂತಿದ್ರೆ, ಇನ್ನು ಕೆಲವರು ಈ ಸ್ಟೆಪ್​ ಬಿಟ್ಟು ಬೇರೆ ಸ್ಟೆಪ್ಸ್​ ಬರಲ್ವಾ ಅಂತ ಪ್ರಶ್ನಿಸುತ್ತಿದ್ದಾರೆ.  ಮದುವೆಯಾದರೂ  ಹಣೆಗಿಲ್ಲ, ತಾಳಿಯಿಲ್ಲ, ಕಾಲುಂಗುರ ಇಲ್ಲ, ಥೂ ನಮ್ಮ ಸಂಸ್ಕೃತಿಗೇ ನೀವು ಮಾರಕ ಎಂದು ಫ್ಯಾನ್​ ಈ ಹಿಂದೆ ನಟಿಗೆ ಹಿಗ್ಗಾಮುಗ್ಗ ಬೈದಿದ್ದರೂ ತಲೆ ಕೆಡಿಸಿಕೊಳ್ಳದ ನಿವೇದಿತಾ ಈಗ ಪುನಃ ಅದೇ ಸ್ಟೈಲ್​ನಲ್ಲಿ ಮತ್ತೊಮ್ಮೆ  ಕಾಣಿಸಿಕೊಂಡು ಜನರನ್ನು ರೊಚ್ಚಿಗೆಬ್ಬಿಸಿದ್ದಾರೆ. 

ತೋಬಾ ತೋಬಾ ಹಾಡಿಗೆ ಬಳುಕಿದ ನಿವೇದಿತಾ: ಗಂಡನ ಕನ್ನಡ ಹಾಡೆಂದ್ರೆ ನಿಂಗೆ ಅಲರ್ಜಿನಾ ಎಂದ ಫ್ಯಾನ್ಸ್​!

Follow Us:
Download App:
  • android
  • ios