ತಾಯಿಯಾಗಿರುವ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ/ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅನುಭವ ಹಂಚಿಕೊಂಡ ನಟಿ/ ಮಗುವಿನ ಆರೈಕೆ ಹೇಗೆ ಮಾಡಬೇಕು? ತಮಾಷೆಯಾಗಿ ಸತ್ಯ ಹೇಳಿದ ಕಲಾವಿದೆ

ಮೈಸೂರು(ಫೆ. 26) ತಾಯಿಯಾಗಿರುವ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ/ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅನುಭವ ಹಂಚಿಕೊಂಡ ನಟಿ/ ಮಗುವಿನ ಆರೈಕೆ ಹೇಗೆ ಮಾಡಬೇಕು? ತಮಾಷೆಯಾಗಿ ಸತ್ಯ ಹೇಳಿದ ಕಲಾವಿದೆ

ಮಗುವನ್ನು ಒಂದು ಮೂರು ವರ್ಷದ ತನಕ ದೊಡ್ಡ ಮಾಡವುದು ತಾಯಿಗೆ-ತಂದೆಗೆ ಒಂದು ಸವಾಲೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಮಾದರಿಯಾಗಿದ್ದ ಅಕ್ಷತಾ ತಮ್ಮ ಸೋಶಿಯಲ್ ಮೀಡಿಯಾ ಮುಖೇನ ಮಗು ಮತ್ತು ಉಳಿದವರು ಮಾತನಾಡುವುದನ್ನು ತೆರೆದು ಇರಿಸಿದ್ದಾರೆ.

ತಾಯಿ ಮಗು ನೋಡಿಕೊಂಡು ಬಂದ ಸಂಚಾರಿ ವಿಜಯ್ 

ಬಿಗ್ ಬಾಸ್ ಖ್ಯಾತಿಯ ನಟಿ, ರಂಗ ಕಲಾವಿದೆ ಅಕ್ಷತಾ ಪಾಂಡವಪುರ ತಾಯಿಯಾಗಿದ್ದು ಈಗ ಮಗುವಿನೊಂದಿಗಿನ ಬಾಂಧವ್ಯವನ್ನು ವಿಶೇಷ ರೀತಿಯಲ್ಲಿ ಹಂಚಿಕೊಂಡಿದ್ದಾರೆ. ಅವರ ಫೇಸ್ ಬುಕ್ ಕೋಟ್ ಗಳನ್ನು ನಿಮ್ಮ ಮುಂದೆ ಯಥಾವತ್ತಾಗಿ ಇಡುತ್ತಿದ್ದೇವೆ. 

ತಾವು ಹೇಳುವ ಮಾತು ಜನರು ಆಡುವ ಮಾತುಗಳನ್ನು ಒಂದೊಂದಾಗಿ ಇಟ್ಟಿದ್ದಾರೆ. ಎಲ್ಲದಕ್ಕೂ ಉತ್ತರ ಮಕ್ಕಳೇ ಹಿಂಗೆ. ಕೊಂಚ ತಮಾಷೆಯಾಗಿದ್ದರೂ ಸತ್ಯ ಅಡಗಿದೆ ಅಲ್ಲವೇ?

Feeling ಒಂಥರಾ 😃😜 experience
ಮಕ್ಕಳು ಸಾಕೋಕೆ ಅವರಷ್ಟುಗಾತ್ರದ ಹೇಲು ತಿನ್ನಬೇಕು ಅನ್ನೋ ಮಾತು ಕೇಳಿ ಕೇಳಿ 🙆‍♀️🙆‍♀️ 
ಇರ್ಲಿ ವಿಷಯಕ್ಕೆ ಬರ್ತೀನಿ ನಾನು & ಅವರು 🤦‍♀️ 
ನಾನು ಅವರು 
# ಮಗು ಜಾಸ್ತಿ ಅಳ್ತಾ ಇರುತ್ತೆ / ಮಕ್ಕಳೇ ಹಂಗೆ 
# ಜಾಸ್ತಿ ನಿದ್ದೇನೆ ಮಾಡಲ್ಲ / " 
# ಬರೀ ನಿದ್ದೆ ಮಾಡ್ತಾ ಇರುತ್ತೆ / " 
# ಎದ್ದಾಗೆಲ್ಲ ಹಾಲು ಕುಡಿಸ್ತನೇಇರ್ಬೇಕು / " 
# ಜಾಸ್ತಿ ಕಕ್ಕ ಮಾಡುತ್ತೆ / " 
# ವರೆಕ್ಕೆರಡೇ ಬಾರಿ ಕಕ್ಕ ಮಾಡೋದು / " 
# ತುಂಬಾ ಬೆಚ್ಚಿಬೀಳುತ್ತೆ / "
# ವಾಂತಿ ಮಾಡುತ್ತಲ್ಲಾ / " 
# ಚಳಿಸೋದೇ ಜಾಸ್ತಿ / " 
# ಕೈ ಬಿಡೋದೇ ಇಲ್ಲಾ ಎತ್ಕೊಂಡೆ ಇರ್ಬೇಕು/ " 
# ಊಟ ನಿದ್ದೆ ಮಾಡೋಕೆ ಬಿಡಲ್ಲಾ / " 
ಒಟ್ನಲ್ಲಿ ಇಳಿ, ರಂಜು, ದೃಷ್ಟಿ, ಪಥ್ಯ, ನೀರು & ಊಟದ ಆರೈಕೆ ಅಂತೆಲ್ಲಾ ಮಾಡಿ ಅವರಿಗೆ ತಿಳಿದ ಹಾಗೆ ಬಾಣಂತನ ಮಾಡಿ ನಾಮಕರಣ ಮಾಡಿ ಕಳಿಸೋತನಕ ಈ ಡೈಲಾಗ್ ಕೇಳ್ತಾ ಇರ್ಬೇಕು "ಮಕ್ಕಳು ಸಾಕೋಕೆ ಅವರಷ್ಟು ಗಾತ್ರದ ಹೇಲು ತಿನ್ನಬೇಕು" 😉😃 ( ಆದ್ರೂ ಮಕ್ಳು ಏನ್ ಮಾಡಿದ್ರು ಚಂದನೇ ಅಲ್ವಾ 😘)

ತಮ್ಮೂರಿನ ಸರ್ಕಾರಿ ಆಸ್ಪತ್ರೆಯಲ್ಲೆ ಹೆರಿಗೆ ಮಾಡಿಸಿಕೊಂಡಿದ್ದ ಅಕ್ಷತಾ ಮಾದರಿ ಕೆಲಸವೊಂದಕ್ಕೆ ನಾಂದಿ ಹಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಂದಮ್ಮನ ಪೋಟೋ ಶೇರ್ ಮಾಡಿಕೊಳ್ಳುತ್ತಾರೆ. ಜತೆಗೆ ಅಷ್ಟೇ ಸುಂದರ ಶೀರ್ಷಿಕೆ ಸಹ ನೀಡುತ್ತಾರೆ.