ಬಿಗ್​ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್, ಜೀ ಕನ್ನಡದ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮದಲ್ಲಿ ರಮೋಲಾ ಜೊತೆ ಕಾಣಿಸಿಕೊಂಡಿದ್ದಾರೆ. ರಕ್ಷಕ್ ರಮೋಲಾಗೆ ಬಾಲ್ಯದ ಫೋಟೋಗಳನ್ನು ಗಿಫ್ಟ್ ಆಗಿ ನೀಡಿದ್ದಾರೆ. ರಮೋಲಾ ಬೆಲ್ಲಿ ಡಾನ್ಸ್ ಮಾಡಿದ್ದಾರೆ. ರವಿಚಂದ್ರನ್ ಮತ್ತು ರಚಿತಾ ರಾಮ್ ತೀರ್ಪುಗಾರರಾಗಿರುವ ಈ ಕಾರ್ಯಕ್ರಮವನ್ನು ನಿರಂಜನ್ ದೇಶಪಾಂಡೆ ನಿರೂಪಿಸುತ್ತಿದ್ದಾರೆ. ರಮೋಲಾ ಈ ಹಿಂದೆ ಕನ್ನಡತಿ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು.

ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್​ಬಾಸ್​ ಬಳಿಕ ಸಕತ್ ಫೇಮಸ್​ ಆದವರು. ಬಿಗ್​ಬಾಸ್​ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್​ ಡಿಮಾಂಡ್​ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್​ ಚಾಂದನಿ ಅರ್ಥಾತ್​ ನಟಿ ರಮೋಲಾ ಜೋಡಿಯಾಗಿದ್ದಾರೆ. ಇದೀಗ ಇವರಿಬ್ಬರೂ ಬೇರೆ ಜೋಡಿಗಳಿಗೆ ಪೈಪೋಟಿ ನೀಡಬೇಕಿದೆ. 

ಇದೀಗ ಜೀವನದಲ್ಲಿ ಇದೇ ಮೊದಲ ಬಾರಿಗೆ ಲವ್​ ಸಾಂಗ್​ ಡಾನ್ಸ್​ ಮಾಡಿ, ರಮೋಲಾ ಅವರಿಗೆ ಸರ್​ಪ್ರೈಸ್​ ಗಿಫ್ಟ್​ ಕೊಟ್ಟಿದ್ದಾರೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಲವ್​ ಸಾಂಗ್​ಗೆ ಡಾನ್ಸ್​ ಮಾಡಿರುವುದಾಗಿ ರಕ್ಷಕ್​ ಹೇಳಿದರೆ, ರಮೋಲಾ ಕೂಡ ಇಂಥದ್ದೊಂದು ಗಿಫ್ಟ್​ ನನಗೆ ಮೊದಲ ಬಾರಿಗೆ ಸಿಕ್ಕಿದ್ದು ಎಂದಿದ್ದಾರೆ. ಅಂದಹಾಗೆ ರಕ್ಷಕ್​ ಅವರು ಅಮೋಲಾ ಅವರಿಗೆ ಅವರ ಬಾಲ್ಯದ ಫೋಟೋಗಳನ್ನು ಗಿಫ್ಟ್​ ನೀಡಿದ್ದಾರೆ. ಇದೇ ವೇಳೆ ರಮೋಲಾ ಬೆಲ್ಲಿ ಡಾನ್ಸ್​ ಕೂಡ ಮಾಡಿ ರಂಜಿಸಿದ್ದಾರೆ. 

ಅಪ್ಪನ ಜೊತೆ ನಟಿ ಅದಿತಿ ಪ್ರಭುದೇವ ಎಳನೀರು ಚಾಲೆಂಜ್​! ಒಂದು ಸಾವಿರ ರೂ. ಗೆದ್ದೋರು ಯಾರು?


ಇನ್ನು ಈ ಷೋ ಕುರಿತು ಹೇಳುವುದಾದರೆ, ಇದು ಭರ್ಜರಿ ಬ್ಯಾಚುಲರ್ಸ್ ಸೀಸನ್ 2. ರವಿಚಂದ್ರನ್ ಮತ್ತು ರಚಿತಾ ರಾಮ್ ತೀರ್ಪುಗಾರರಾಗಿದ್ದಾರೆ. ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದಾರೆ. ಈ ಸೀಸನ್‌ನಲ್ಲಿ ವಿವಿಧ ರಿಯಾಲಿಟಿ ಷೋಗಳ ಹಾಗೂ ಕಿರುತೆರೆಯವರು ಸ್ಪರ್ಧಿಗಳಾಗಿದ್ದಾರೆ. ಸದ್ಯ ಸಿನಿಮಾ ಮಾಡುವ ಹಂಬಲದಲ್ಲಿ ಇರುವ ರಕ್ಷಕ್​ ಇಲ್ಲಿಗೆ ಬಂದಿದ್ದಾರೆ. ಈ ಹಿಂದಿನ ಎಪಿಸೋಡ್‌ನಲ್ಲಿ ಬ್ಯಾಚುಲರ್‌ಗಳು ಮತ್ತು ಪಾರ್ಟನರ್‌ಗಳನ್ನು ಆಯ್ಕೆ ಮಾಡಲಾಗಿತ್ತು. ಆಗ ರಮೋಲಾ ಮತ್ತು ರಕ್ಷಕ್ ಬುಲೆಟ್ ಜೋಡಿಯಾಗಿ ಆಯ್ಕೆ ಆಗಿದ್ದಾರೆ. ಹಿಂದಿನ ಟಾಸ್ಕ್​ನಲ್ಲಿ ಬ್ಯಾಚುಲರ್‌ ಹುಡುಗರ ಲುಕ್‌ನ ಸುಂದರಿಯರು ಬದಲಾಯಿಸಬೇಕು. ಹೀಗಾಗಿ ಪಾರ್ಲರ್‌ಗೆ ರಕ್ಷಕ್‌ನ ಕರೆದುಕೊಂಡು ಹೋಗಿ ಹೇರ್‌ಸ್ಟೈಲ್, ಫೇಷಿಯಲ್, ಐ ಬ್ರೂ, ಶೇವಿಂಗ್, ಪೆಡಿಕ್ಯೂರ್, ಮೆನಿಕ್ಯೂರ್ ಮಾಡಿಸಿದ್ದಾರೆ. ಅಲ್ವ ಸ್ವಲ್ಪ ವ್ಯಾಕ್ಸಿಂಗ್ ಕೂಡ ಮಾಡಿಸಿಕೊಂಡಿದ್ದಾರೆ. ರಕ್ಷಕ್ ನಿಜಕ್ಕೂ ಸಂಪೂರ್ಣವಾಗಿ ಬದಲಾಗಿದ್ದಾರೆ. ವೇದಿಕೆ ಮೇಲೆ ರಕ್ಷಕ್ ಮತ್ತು ರಮೋಲಾ ನಡೆದುಕೊಂಡು ಬರುತ್ತಿದ್ದಂತೆ ಬುಲೆಟ್‌ ತರ ಇದ್ದೋರು ಈಗ ಬಟರ್‌ ಫ್ಲೈ ಅಗಿಬಿಟ್ಟಿದ್ದೀರಲ್ಲ ಎಂದು ನಿರಂಜನ್ ಕಾಲೆಳೆದಿದ್ದರು.

 ಇನ್ನು ನಟಿ ರಮೋಲಾ ಕುರಿತು ಹೇಳುವುದಾದರೆ, ಇವರು ಕನ್ನಡತಿ ಸೀರಿಯಲ್​ನಿಂದ ಫೇಮಸ್​ ಆದವರು. ಇದರಲ್ಲಿ ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಆದರೆ ಕಿರುತೆರೆಯನ್ನು ತೊರೆದು ವರ್ಷ ಕಳೆದ ಬಳಿಕ ರೀ ಎಂಟ್ರಿ ಕೊಟ್ಟರು. ಮಾಡೆಲ್ ಆಗಿದ್ದ ರಮೋಲಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ರಮೋಲಾ ಅವರ ವಿಲನ್ ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು. ಅಂದಹಾಗೆ ರಮೋಲಾ ಅವರು, ಬೆಲ್ಲಿ ಡ್ಯಾನ್ಸ್ ಎಕ್ಸ್​ಪರ್ಟ್​. ಅದನ್ನು ಈ ವಿಡಿಯೋ ನೋಡಿದರೆ ತಿಳಿಯಬಹುದು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಭಾಗವಹಿಸಿದ್ದರು. 2017 ರಿಲಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದ ರಮೋಲಾ, ಫ್ಯಾಷನ್ ಡಿಸೈನಿಂಗ್ ಓದುವ ಸಲುವಾಗಿ ಕನ್ನಡತಿಯಿಂದ ಹೊರ ಬಂದಿದ್ದರು ಎನ್ನಲಾಗಿದೆ. ಆದರೆ ಅವರು ಸಂದರ್ಶನದಲ್ಲಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಎಂದು ಹೇಳಿಕೊಂಡಿದ್ದರು. 

ಭಾಗ್ಯಳ ಸಹಾಯಕ್ಕೆ ಕಿರುತೆರೆ ನಟಿಯರ ದಂಡೇ ಬಂದಾಗ ಶೂಟಿಂಗ್​ನಲ್ಲಿ ಏನೇನಾಯ್ತು ನೋಡಿ!