* ಬಿಗ್ ಬಾಸ್ ಮನೆಯಿಂದ ಶುಭಾ ಪೂಂಜಾ ಔಟ್* ಫಿನಾಲೆಗೆ ಏರುವ ಅವಕಾಶ ಕಳೆದುಕೊಂಡ ನಟಿ*ಟಾಸ್ಕ್ ಸರಿಯಾಗಿ ಮಾಡದ ವೈಷ್ಣವಿ ಮತ್ತು ದಿವ್ಯಾ ಸುರೇಶ್ ಗೆ ಕಿಚ್ಚ ಕ್ಲಾಸ್* ಭಾನುವಾರದ ಎಪಿಸೋಡ್ ನಲ್ಲಿ  ಇನ್ನೊಂದು ಎಲಿಮಿನೇಶನ್ ಇದೆ

ಬೆಂಗಳೂರು(ಜು. 31) ಕನ್ನಡದ ಬಿಗ್ ಬಾಸ್ ಮನೆಯಿದಂದ ನಟಿ ಶುಭಾ ಒಊಂಜಾ ಹೊರಬಿದ್ದಿದ್ದಾರೆ. ಶನಿವಾರದ ಎಲಿಮಿನೇಶನ್ ನಲ್ಲಿ ಹೊರ ಬಿದ್ದಿದ್ದು ಫಿನಾಲೆಗೆ ಏರುವ ಅಕಾಶ ಕೈತಪ್ಪಿದೆ. ಬಿಗ್ ಬಾಸ್ ಮನೆಯಲ್ಲಿ ಏಳು ಜನ ಉಳಿದುಕೊಂಡು ಭಾನುವಾರ ಇನ್ನೊಬ್ಬರ ಪ್ರಯಾಣ ಅಂತ್ಯವಾಗಲಿದೆ.

ಕನ್ನಡ ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತ ತಲುಪಿದ್ದು, ಅದಕ್ಕೂ ಮೊದಲು ಶನಿವಾರವೇ ಒಂದು ಎಲಿಮಿನೇಷನ್​ ನಡೆದಿದೆ. ಇಂದು ಶುಭಾ ಬಿಗ್​ ಬಾಸ್​ ಮನೆಯಿಂದ ಔಟ್​ ಆಗಿದ್ದಾರೆ.

ಮನೆಯಲ್ಲಿದ್ದುಕೊಂಡೆ ಕೋರ್ಟ್ ಮೆಟ್ಟಿಲು ಏರಿದ ದಿವ್ಯಾ

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದರು. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿದ್ದರಿಂದ ನಾಮಿನೇಷನ್​ನಿಂದ ಬಚಾವ್​ ಆಗಿದ್ದರು. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದರು.

ಶುಭಾ ಪೂಂಜಾ ಮನೆಯಲ್ಲಿ ಆಕ್ಟೀವ್ ಆಗಿರುವುದು ಬಿಟ್ಟು ಮಕ್ಕಳಂತೆ ಆಡುತ್ತಿದ್ದರು ಎಂದು ನೆಟ್ಟಿಗರು ಆರೋಪಿಸಿದ್ದರು. ಮನೆಯವರ ನಿರೀಕ್ಷೆಯಲ್ಲಿ ಪ್ರಶಾಂತ್ ಅಥವಾ ದಿವ್ಯಾ ಸುರೇಶ್ ಹೊರಬೀಳಲಿದ್ದಾರೆ ಎಂಬುದಾಗಿತ್ತು. ಆದರೆ ಶುಭಾ 113 ದಿನಗಳ ಪ್ರಯಾಣ ಅಂತ್ಯ ಮಾಡಿದ್ದಾರೆ.

ಶನಿವಾರದ ಸಂತೆಯಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಈ ವಾರ ನಿಮ್ಮಿಷ್ಟಕ್ಕೆ ಎಲ್ಲರನ್ನು ಬಿಡಲಾಗಿತ್ತು. ಆದರೆ ವೈಷ್ಣವಿ ಮತ್ತು ದಿವ್ಯಾ ಸುರೇಶ್ ಟಾಸ್ಕ್ ಗಳನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದರು.