Asianet Suvarna News Asianet Suvarna News

Bigg Boss ಖ್ಯಾತಿಯ ನಟಿ ಅರ್ಷಿ ಖಾನ್ ಅಪಘಾತ, ಆಸ್ಪತ್ರೆಗೆ ದಾಖಲು!

* ಹಿಂದಿ ಬಿಗ್‌ ಬಾಸ್‌ ಖ್ಯಾತಿಯ ನಟಿ ಆರ್ಷಿ ಖಾನ್ ಕಾರು ಅಪಘಾತ

* ಕೂದಲೆಳೆ ಅಂತರದಲ್ಲಿ ಪಾರಾದ ಅರ್ಷಿ ಖಾನ್

* ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ನಟಿ

Bigg Boss Arshi Khan hospitalised after escaping accident in Delhi pod
Author
Bangalore, First Published Nov 22, 2021, 7:45 PM IST
  • Facebook
  • Twitter
  • Whatsapp

ಮುಂಬೈ(ನ.22): ಬಿಗ್ ಬಾಸ್ (Bigg Boss) ಸ್ಪರ್ಧಿಯಾಗಿದ್ದ ನಟಿ ಅರ್ಶಿ ಖಾನ್ ಅಪಘಾತಕ್ಕೀಡಾಗಿದ್ದಾರೆ (Actress Arshi Khan Accident). ವರದಿಗಳ ಪ್ರಕಾರ, ದೆಹಲಿಯ ಮಾಳವೀಯ ನಗರ (Malviya Nagar)ಪ್ರದೇಶದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ. ಈ ಸಮಯದಲ್ಲಿ, ಅವರು ತಮ್ಮ ಸಹಾಯಕಿ ರೇಖಾ ಅವರೊಂದಿಗೆ ಮರ್ಸಿಡಿಸ್ ಕಾರಿನಲ್ಲಿದ್ದರು (Mercedes Car). ಅಪಘಾತದ ನಂತರ ಅವರಿಗೆ ಎದೆನೋವು ಕಾಣಿಸಿಕೊಂಡಿದೆ, ಸದ್ಯಕ್ಕೀಗ ಅವರು ಅಪಾಯದಿಂದ ಪಾರಾಗಿದ್ದಾರೆ. ಅರ್ಶಿ ಖಾನ್ ಮಾಳವೀಯಾ ನಗರದಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕಾರಿನ ಏರ್‌ಬ್ಯಾಗ್ ಸರಿಯಾದ ಸಮಯಕ್ಕೆ ತೆರೆದುಕೊಂಡಿದ್ದರಿಂದ ಬಹುದೊಡ್ಡ ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದಾರೆ.

ಅರ್ಶಿ ಖಾನ್ ಬಿಗ್ ಬಾಸ್ 11 (Bigg Boss 11) ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಈ ಅವಧಿಯಲ್ಲಿ ಅವರು ಬಹಳ ದಿನಗಳವರೆಗೆ ಉತ್ತಮ ಸ್ಪರ್ಧೆ ಕೊಟ್ಟು ಉಳಿದಿದ್ದರು. ಆದರೆ ಸ್ಪರ್ಧೆಯ 83 ನೇ ದಿನದಂದು ಹೊರಬಂದರು. ಇಷ್ಟೇ ಅಲ್ಲದೇ, ಅವರು ಬಿಗ್ ಬಾಸ್ 14 ರಲ್ಲಿ (Bigg Boss 14) ಚಾಲೆಂಜರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ದಿ ಲಾಸ್ಟ್ ಎಂಪರರ್' ಚಿತ್ರದ ಮೂಲಕ ಅರ್ಶಿ ಖಾನ್ ಬಾಲಿವುಡ್‌ಗೂ ಪಾದಾರ್ಪಣೆ ಮಾಡಿದ್ದಾರೆ. ಇದಲ್ಲದೆ, ಟಿವಿ ಧಾರಾವಾಹಿಗಳ ಬಗ್ಗೆ ಹೇಳುವುದಾದರೆ, ಅವರು ಸಾವಿತ್ರಿ ದೇವಿ ಕಾಲೇಜು ಮತ್ತು ಆಸ್ಪತ್ರೆ ಮತ್ತು ವಿಶ್ ಎಂಬ ಧಾರಾವಾಹಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಇದಲ್ಲದೆ, ಅವರು ಕೆಲವು ಸಂಗೀತ ವೀಡಿಯೊಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನದಲ್ಲಿ (Afghanistan) ಜನಿಸಿದ ಅರ್ಷಿ ತನ್ನ ಕುಟುಂಬದೊಂದಿಗೆ ಭಾರತದ ಭೋಪಾಲ್‌ನಲ್ಲಿ (Bhopal) ವಾಸಿಸಲು ಪ್ರಾರಂಭಿಸಿದಾಗ ನಾಲ್ಕು ವರ್ಷ. ಅವರು ತಮ್ಮ ಆರಂಭಿಕ ಶಿಕ್ಷಣ ಮತ್ತು ಕಾಲೇಜನ್ನು ಭೋಪಾಲ್‌ನಲ್ಲಿಯೇ ಮಾಡಿದರು.

ರಾಧೆ ಮಾ ಮೇಲೆ ದೊಡ್ಡ ಆರೋಪ:

ರಾಧೆ ಮಾ ಸೆಕ್ಸ್ Racket ನಡೆಸುತ್ತಿದ್ದಾರೆ ಎಂದು ಆರೋಪಿಸಿ ಆರ್ಶಿ ಸಂಚಲನ ಮೂಡಿಸಿದ್ದರು. ರಾಧೆ ಮಾ (Radhe Maa) ಅವರ ವ್ಯಾಪಾರ ಪಾಲುದಾರರೊಂದಿಗೆ ಒಮ್ಮೆ ಭೇಟಿಯಾಗಿದ್ದೆ ಎಂದು ಅರ್ಶಿ ಹೇಳಿದ್ದರು. ರಾಧೆ ಮಾ ಅವರ ಸಂಗಾತಿ ತನಗೆ ಸೆಕ್ಸ್ Racket ಸೇರಲು ಆಫರ್ ನೀಡಿದ್ದರು ಎಂದು ಆರೋಪಿಸಿದ್ದರು, ಆದರೆ ತಾನು ಇದನ್ನು ನಿರಾಕರಿಸಿದೆ ಎಂದು ಆರ್ಶಿ ಹೇಳಿದ್ದರು.

ವೀಡಿಯೊದಲ್ಲಿ, "ರಾಧೆ ಮಾ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಮತ್ತು ನಾನು ಮಾಧ್ಯಮಗಳ ಮುಂದೆ ಅನೇಕ ಬಾರಿ ಹೇಳಿದ್ದೇನೆ. ನಾನು ಕಾರ್ಯಕ್ರಮಕ್ಕಾಗಿ ಪುಣೆಗೆ ಹೋಗಿದ್ದೆ ಮತ್ತು ಬೆಳಿಗ್ಗೆ 12.45 ರ ಸುಮಾರಿಗೆ ನನ್ನ ಕೋಣೆಯಲ್ಲಿದ್ದೆ, ನಾನು ಪಾಕಿಸ್ತಾನಿ ಮುಸ್ಲಿಂ ಆಗಿದ್ದರಿಂದ 10 ಕ್ರೈಮ್‌ ವಿಭಾಗದ ಅಧಿಕಾರಿಗಳು ನನ್ನನ್ನು ಆರೆಸ್ಟ್‌ ಮಾಡಲು ಬಂದರು. ಅವರು ನನ್ನ ಐಡಿ ಪ್ರೂಫ್ ಮತ್ತು ಅಧಿಕೃತ ದಾಖಲೆಗಳನ್ನು ತೋರಿಸಲು ಕೇಳಿದರು. ಹಿರಿಯ ಇನ್ಸ್‌ಪೆಕ್ಟರ್ ಸಂದೀಪ್ ಪಾಟೀಲ್‌ಗೆ  ನನ್ನ ಫೋನ್‌ವೊಂದರಲ್ಲಿ ರೆಕಾರ್ಡರ್ ಅನ್ನು ಸ್ವಿಚ್ ಮಾಡಿದ್ದೇನೆ ಎಂಬ ಅಂಶ ತಿಳಿದಿರಲಿಲ್ಲ. ಅವರು  ನನ್ನಿಂದ 15 ಲಕ್ಷ  ರೂಪಾಯಿ ಜೊತೆಗೆ ಲೈಂಗಿಕ ಬೇಡಿಕೆ ಇಟ್ಟರು' ಎಂದು ಆರೋಪಿಸಿದ್ದರು

ಅರ್ಶಿ ಅನೇಕ ಟಿವಿ ಶೋಗಳಲ್ಲಿ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಸಾವಿತ್ರಿ ದೇವಿ ಕಾಲೇಜು ಮತ್ತು ಆಸ್ಪತ್ರೆ, 'ವಿಶ್' ಮತ್ತು 'ಇಷ್ಕ್ ಮೇ ಮಾರ್ಜಾವಾನ್' ಸೇರಿವೆ.

ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ

ಇನ್ನು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ (Pakistan Cricketer Shahid Afridi) ಮೇಲಿನ ನಟಿಯ ಪ್ರೀತಿ ಇಂಟರ್‌ನೆಟ್‌ನ ಸೆನ್ಸೆಷನ್‌ ಆಗಿತ್ತು. 2015 ರಲ್ಲಿ  ಹಿಂದೆ  ಶಾಹಿದ್ ಅಫ್ರಿದಿ ಜೊತೆಗೆ ಲೈಂಗಿಕ ಸಂಬಂಧ (Sexual Relationship) ಹೊಂದಿದ್ದಾಗಿ ಯೂ ಈ ಹಿಂದೆ ಅರ್ಷಿ ಹೇಳಿಕೊಂಡಿದ್ದರು. 'ಹೌದು, ನಾನು ಅಫ್ರಿದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ! ಯಾರೊಂದಿಗಾದರೂ ಮಲಗಲು ನನಗೆ ಭಾರತೀಯ ಮಾಧ್ಯಮಗಳ ಅನುಮತಿ ಬೇಕೇ? ಇದು ನನ್ನ ವೈಯಕ್ತಿಕ ಜೀವನ. ನನಗೆ ಅದು ಪ್ರೀತಿ'ಎಂದು  ಟ್ವೀಟ್‌ಗಳು ಮಾಡಿದ್ದಳು ಈ ನಟಿ.

ಇಡೀ ವಿಷಯದ ಬಗ್ಗೆ ಅಫ್ರಿದಿಯನ್ನು ಕೇಳಿದಾಗ, ಅವರು ಅಂತಹ ಕ್ಷುಲ್ಲಕ ವಿಷಯಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಅಥವಾ ಅಂತಹ 'ಮೂರ್ಖತನಗಳಿಗೆ' ಸಮಯವಿಲ್ಲ ಎಂದು ಹೇಳಿ ಅರ್ಷಿ ಖಾನ್ ಹೇಳಿಕೆಯ ಬಗ್ಗೆ ಮಾತಾನಾಡಲು ನಿರಾಕರಿಸಿದರು.

Follow Us:
Download App:
  • android
  • ios