ನಿರೂಪಕಿ, ಈವೆಂಟ್‌ ಮ್ಯಾನೇಜರ್‌, ಬಿಗ್‌ ಬಾಸ್‌ ಸೀಸನ್‌ 7ರ ಸ್ಪರ್ಧಿ ಚೈತ್ರಾ ವಾಸುದೇವನ್‌ ಮದುವೆಯಾಗಿದ್ದರೂ ನೋಡೋಕೆ ತುಂಬಾನೇ ಸಿಂಪಲ್ ಆಂಡ್‌ ಬ್ಯೂಟಿಫುಲ್‌. ಡಿಫರೆಂಟ್‌ ಹಾಗೂ ಸ್ಟೈಲಿಶ್‌ ಔಟ್‌ಫಿಟ್‌ ಟ್ರೈ ಮಾಡುವ ಚೈತ್ರಾ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಕುತೂಹಲ.  ಅವರಿಂದ ಸಲಹೆ ಪಡೆಯಲು ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್‌ ಮಾಡುತ್ತಲೇ ಇರುತ್ತಾರಂತೆ. ಈ ಕಾರಣಕ್ಕೆ ಅವರ  ಡಿಮ್ಯಾಂಡ್‌ ಮೇಲೆ ಇನ್‌ಸ್ಟಾಗ್ರಾಂ IGTVನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.

ಸ್ಕಿನ್ ಕೇರ್‌:

'ಸ್ಕಿನ್ ಕೇರ್‌ ರೊಟಿನ್. ಇದು ಯಾರೂ ಸ್ಪಾನ್‌ಸರ್‌ ಮಾಡಿರುವ ವಿಡಿಯೋ ಅಲ್ಲ.  ನಾನು ನನ್ನ ಸ್ಕಿನ್ ಬಗ್ಗೆ ತುಂಬಾ ಕೇರ್ ಮಾಡುವುದಿಲ್ಲ ಸೀರಿಯಸ್‌ ಆಗಿ ಯಾವ ಕಷ್ಟದ ರೊಟಿನ್ ಫಾಲೋ ಮಾಡುವುದಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿಯೇ ಇದ್ದ ಕಾರಣ ನಾನು ತಿಂಗಳಿಗೊಮ್ಮೆ ಇದನ್ನು ಫಾಲೋ ಮಾಡುತ್ತಿರುವೆ.  ತಿಂಗಳಿಗೆ ಒಮ್ಮೆಯಾದರೂ ಹೀಗೆ ಮಾಡಿಕೊಳ್ಳಬಹುದು' ಎಂದು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಬಾರ್ಬಿ ಡಾಲ್ ಚೈತ್ರಾ ವಾಸುದೇವನ್‌ ಬ್ಯಾಗ್‌ನ ರಹಸ್ಯ ಬಯಲು!

ಮುಖದ ಮೇಲೆ ಕೆಮಿಕಲ್‌ ಪ್ರಯೋಗ ಮಾಡುವುದರ ಬದಲು ನಾನು ಸೇವಿಸುವ ಆಹಾರ ಬಗ್ಗೆ ಕಾಳಜಿ ವಹಿಸಿದರೆ ತಮ್ಮ ತ್ವಚೆಯ ಆರೋಗ್ಯ ಸುಂದರವಾಗಿರುತ್ತದೆ ಎಂದು ಚೈತ್ರಾ ಹೇಳಿದ್ದಾರೆ. 

 

ಚೈತ್ರಾ ಅವರು ಹೇಳಿರುವ ವಿಧಾನ ಹೀಗಿದೆ

ಮೊದಲು ಮೇಕಪ್‌ ತೆಗೆದುಕೊಂಡು ಮುಖವನ್ನು cleanse ಮಾಡಿಕೊಳ್ಳುತ್ತಾರೆ. ಹತ್ತಿ ಬಳಸಿ ಈ ಕ್ರೀಮ್‌ಗಳನ್ನು ತೆಗೆದ ನಂತರ ಫೇಸ್‌ವಾಶ್‌ ಬಳಸಿ ಮುಖವನ್ನು ತೊಳೆದುಕೊಳ್ಳುತ್ತಾರೆ ಆನಂತರ  ಬಿಸಿ ನೀರಿನಿಂದ ಸ್ಟೀಮ್‌ ತೆಗೆದುಕೊಳ್ಳುತ್ತಾರೆ. ನಂತರ ಫೇಸ್‌ ಸ್ಕ್ರಬ್‌ ಬಳಸಿ ಮುಖವನ್ನು ಸ್ಕ್ರಬ್ ಮಾಡುತ್ತಾರೆ. ಮನೆಯಲ್ಲಿಯೇ ತಯಾರಿಸಿದ ಅರಿಶಿಣ, ಸಕ್ಕರೆ ಮತ್ತು ಜೇನು ತುಪ್ಪ ಬೆರೆಸಿ ಸ್ಕಿನ್ ಮೇಲೆ ಮತ್ತೊಮ್ಮೆ ಸ್ಕ್ರಬ್ ಮಾಡಿಕೊಳ್ಳುತ್ತಾರೆ. ಇದೆಲ್ಲಾ ಆದಮೇಲೆ ಮನೆಯಲ್ಲಿಯೇ ಒಂದು ಫೇಸ್‌ ಪ್ಯಾಕ್‌ ರೆಡಿ ಮಾಡಿಕೊಂಡಿದ್ದಾರೆ. ಗಟ್ಟಿ ಮೊಸರು, ಜೇನು ತುಪ್ಪ ಹಾಗೂ ಗ್ರೀನ್‌ ಟಿ ಪುಡಿ/ಎಲೆಗಳನ್ನು ಮಿಕ್ಸ್ ಮಾಡಿಕೊಂಡು 10 ನಿಮಿಷಗಳ ನಂತರ ತೊಳೆದು ಮುಖಕ್ಕೆ ಕ್ರೀಮ್‌ ಹಚ್ಚಬೇಕು. 
 
ಚೈತ್ರಾ ಮಾಡಿರುವ ವಿಡಿಯೋ ನೋಡಿ ಅನೇಕರು ಕಾಮೆಂಟ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ ಹಾಗೂ ಮುಂದೆ ಯಾವ ವಿಡಿಯೋ ಮಾಡಬೇಕೆಂದು ಸಲಹೆ ಕೂಡ ನೀಡಿದ್ದಾರೆ.